Publish Date: Fri, 12 Apr 2019 (07:33 IST)
Updated Date: Fri, 12 Apr 2019 (07:34 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿಯೂ ಆಗಿರುವ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸಿನಿಮಾಗೆ ಗುಡ್ ಬೈ ಹೇಳಿದ್ದಾರೆಯೇ?
ಜೀರೋ ಸಿನಿಮಾ ನಂತರ ಅನುಷ್ಕಾ ಯಾವುದೇ ಹೊಸ ಸಿನಿಮಾಗೆ ಸಹಿ ಹಾಕಿಲ್ಲ. ಅಲ್ಲದೆ, ಪತಿ ವಿರಾಟ್ ಜತೆಗೆ ಸುತ್ತಾಡುವಲ್ಲೇ ಬ್ಯುಸಿಯಾಗಿದ್ದಾರೆ. ಹೀಗಾಗಿ ನಟಿ ತಮ್ಮ ವೃತ್ತಿಗಿಂತ, ಪತಿಯ ಜತೆಗಿರಲು ಮತ್ತು ವೃತ್ತಿ ಜೀವನಕ್ಕೆ ಬೆಂಬಲವಾಗಿರಲು ಸಿನಿಮಾದಿಂದ ದೂರ ಸರಿದಿದ್ದಾರೆಯೇ ಎಂಬ ಅನುಮಾಮಗಳು ಹುಟ್ಟಿಕೊಂಡಿವೆ.
ಇನ್ನು ಕೆಲವೊಂದು ಮೂಲಗಳ ಪ್ರಕಾರ ಅನುಷ್ಕಾ ತಮ್ಮ ಹೋಂ ಬ್ಯಾನರ್ ಕ್ಲೀನ್ ಸ್ಲೇಟ್ ಫಿಲಂಸ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿಯೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಆದರೆ ಆಕೆ ಸಿನಿಮಾ ಬಿಡುತ್ತಿಲ್ಲ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ