Select Your Language

Notifications

webdunia
webdunia
webdunia
webdunia

ವಿವಾದಕ್ಕೆ ಕಾರಣವಾಗಿದೆ ಅಮಿತಾಭ್ ಬಚ್ಚನ್ ಹಾಗೂ ಅವರ ಮಗಳು ಜೊತೆಯಾಗಿ ನಟಿಸಿದ ಜಾಹೀರಾತು

ವಿವಾದಕ್ಕೆ ಕಾರಣವಾಗಿದೆ ಅಮಿತಾಭ್ ಬಚ್ಚನ್ ಹಾಗೂ ಅವರ  ಮಗಳು ಜೊತೆಯಾಗಿ ನಟಿಸಿದ ಜಾಹೀರಾತು
ಮುಂಬೈ , ಗುರುವಾರ, 19 ಜುಲೈ 2018 (12:28 IST)
ಮುಂಬೈ : ಬಾಲಿವುಡ್ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ಅವರ  ಮಗಳು ಜೊತೆಯಾಗಿ ನಟಿಸಿದ ಜಾಹೀರಾತು ಇದೀಗ ವಿವಾದವೊಂದಕ್ಕೆ ಕಾರಣವಾಗಿದೆ.


ಹೌದು ನಟ ಅಮಿತಾಬ್ ಬಚ್ಚನ್ ಹಾಗೂ ಅವರ ಮಗಳು ಶ್ವೇತಾ ಬಚ್ಚನ್ ನಂದ ಅವರು ಜ್ಯುವೆಲ್ಲರಿ ಜಾಹೀರಾತಿನಲ್ಲಿ ಜೊತೆಯಾಗಿ ನಟಿಸಿದ್ದರು. ಈ ಜಾಹೀರಾತು ಬ್ಯಾಂಕ್‌ಗಳಿಗಿಂತ ಚಿನ್ನದಲ್ಲಿ ಹೂಡಿಕೆ ಮಾಡಿ ಎಂದು ಸಂದೇಶ ನೀಡುವುದಾಗಿತ್ತು. ಆದರೆ ಈ ಜಾಹೀರಾತು ಬಗ್ಗೆ ಹಾಗೂ ಅಮಿತಾಬ್ ಬಚ್ಚನ್ ಹಾಗೂ ಅವರ ಪುತ್ರಿಯ ವಿರುದ್ಧ ಬ್ಯಾಂಕಿಂಗ್ ವಲಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.


ಜಾಹೀರಾತಿನಲ್ಲಿ ಬಚ್ಚನ್ ಹಾಗೂ ಅವರ ಪುತ್ರಿಗೆ ಬ್ಯಾಂಕೊಂದರ ಸಿಬ್ಬಂದಿ ಅಸಹಕಾರ ತೋರುವಂತೆ ಚಿತ್ರಿಸಲಾಗಿದೆ. ಬ್ಯಾಂಕಿಂಗ್ ವಲಯದ ಆಕ್ರೋಶದ ಬೆನ್ನಲ್ಲೇ ಯೂಟ್ಯೂಬ್‌ನಲ್ಲಿನ  ಈ ಜ್ಯುವೆಲ್ಲರಿ ಜಾಹೀರಾತುಗಳನ್ನು ತೆಗೆದು ಹಾಕಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿಗೋಸ್ಕರ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿದ್ರು ರಶ್ಮಿಕಾ ಮಂದಣ್ಣ