ನಿಕ್ ಮತ್ತು ಪಿಗ್ಗಿ ನಿಶ್ಚಿತಾರ್ಥದ ಪಾರ್ಟಿ ಈ ವಾರದ ಕೊನೆಯಲ್ಲಿ..!!

Webdunia
ಶುಕ್ರವಾರ, 17 ಆಗಸ್ಟ್ 2018 (14:45 IST)
ಕಳೆದ ಸುಮಾರು ದಿನಗಳಿಂದ ನಿಕ್ ಜೊನಾಸ್ ಹಾಗೂ ಪಿಗ್ಗಿ ನಿಶ್ಚಿತಾರ್ಥದ ವಿಷಯವೇ ಹರಿದಾಡುತ್ತಿದೆ. ದಿನನಿತ್ಯ ಈ ಜೋಡಿಯ ಸುದ್ದಿಗಳು ಬರುತ್ತಲೇ ಇರುತ್ತವೆ. ಇತ್ತೀಚೆಗಷ್ಟೇ ಇವರಿಬ್ಬರೂ ಎಂಗೇಜ್‌ಮೆಂಟ್ ರಿಂಗ್ ಬದಲಾಯಿಸಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಪಿಗ್ಗಿ ಈ ಕುರಿತಂತೆ ಮಾಧ್ಯಮದ ಮುಂದೆ ಯಾವುದೇ ವಿಷಯವನ್ನು ಹಂಚಿಕೊಳ್ಳಲು ಇಷ್ಟಪಟ್ಟಿರಲಿಲ್ಲ.
ಆದರೆ ಹಲವು ಮೂಲಗಳ ಪ್ರಕಾರ ಈಗ ನಿಕ್ ಹಾಗೂ ಪಿಗ್ಗಿ ಮುಂಬೈ ಅಲ್ಲಿ ಪರಸ್ಪರ ತಮ್ಮ ಕುಟುಂಬಗಳನ್ನು ಪರಿಚಯಿಸಲು ಈ ವಾರದ ಕೊನೆಯಲ್ಲಿ ಪಾರ್ಟಿ ನೀಡುತ್ತಿದ್ದಾರೆ ಎಂಬುದು ಇತ್ತೀಚಿನ ಸುದ್ದಿಯಾಗಿದೆ. 
 
ಪ್ರಿಯಾಂಕಾ ತಮ್ಮ ಕುಟುಂಬದ ಮೌಲ್ಯಗಳನ್ನು ಗೌರವಿಸಿ ಸಾಂಪ್ರದಾಯಿಕ ವಿವಾಹವನ್ನು ಇಷ್ಟಪಡುತ್ತಾರೆ ಮತ್ತು ಅದು ಖಂಡಿತವಾಗಿಯೂ ಭಾರತೀಯ ಶೈಲಿಯ ವಿವಾಹ ಎಂದು ಮೂಲಗಳು ತಿಳಿಸಿವೆ. 
 
ಎಲ್ಲವೂ ಬಹಳ ರಹಸ್ಯವಾಗಿ ನಡೆಯಲಿದ್ದು ನಿಕ್ ಕುಟುಂಬ ಇಂದೇ ಮುಂಬೈ ಅನ್ನು ತಲುಪಿದೆ. ನಿಕ್ ತಮ್ಮ ತಂದೆ ತಾಯಿ ಜೊತೆ ವಿಮಾನ ನಿಲ್ದಾಣದಿಂದ ಬರುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಡಿದ್ದು, ಇದು ಜನರಲ್ಲಿ ಇನ್ನಷ್ಟು ಕುತೂಹಲವನ್ನು ಸೃಷ್ಟಿಸಿದೆ. ಪಿಗ್ಗಿ ಮತ್ತು ನಿಕ್ ಅಭಿಮಾನಿಗಳು ಮುಂದಿನ ಅಪ್‌ಡೇಟ್‌ಗಳಿಗಾಗಿ ಕುತೂಹಲದಿಂದ ಕಾಯುವಂತಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಂಡಲೂರು ಮೃಗಲಾಯದಲ್ಲಿ ಶಿವಕಾರ್ತೀಕೇಯನ್ ದತ್ತು ಪಡೆದಿದ್ದ ಸಿಂಹ ಕೊನೆಗೂ ಪತ್ತೆ

ಸೋಮವಾರದ್ ಮೇಲ್ ನೋಡ್ರೀ, ಹೆಂಗ್ ಬಿದ್ದೋಗುತ್ತೆ ಅಂದೋರಿಗೆ: ದುನಿಯಾ ವಿಜಯ್‌ ಹೀಗಂದಿದ್ಯಾಕೆ

200 ಸಿನಿಮಾಗಳ ಕತೆ ಕೇಳಿದ ಬಳಿಕ ಒಪ್ಪಿಕೊಂಡ ಮುರುಳಿ ಸಿನಿಮಾಗೆ ಮುಹೂರ್ತ ಫಿಕ್ಸ್‌

ಮರೆಯಾದ ರಾಕೇಶ್‌ ಪೂಜಾರಿಯನ್ನು ನೆನೆದುಕೊಂಡ ಕಾಂತಾರ ನಟ ಗುಲ್ಶನ್ ದೇವಯ್ಯ

ದರ್ಶನ್ ಗೆ ಜೈಲಿನಲ್ಲಿ ಬೇಕಾದ್ದು ಕೊಡ್ತಿಲ್ಲ ಎಂದು ಕೋರ್ಟ್ ಗೆ ಅರ್ಜಿ

ಮುಂದಿನ ಸುದ್ದಿ
Show comments