Select Your Language

Notifications

webdunia
webdunia
webdunia
Thursday, 10 April 2025
webdunia

20 ವರ್ಷಗಳಿಂದ ನನ್ನೊಂದಿಗೆ ಸೆಕ್ಸ್ ಅನುಭವಿಸಿದ ತಂದೆ: ಮಹಿಳೆ ಆರೋಪ

ಹೈದ್ರಾಬಾದ್
ಬೆಂಗಳೂರು , ಶನಿವಾರ, 28 ಜುಲೈ 2018 (15:23 IST)
ಹೈದ್ರಾಬಾದ್: ಬಾಲ್ಯದಿಂದಲೂ ತಂದೆ ನನ್ನ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ ಎಂದು ವಿವಾಹಿತ ಮಹಿಳೆಯೊಬ್ಬಳು ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ವರದಿಯಾಗಿದೆ.
ಗೋಲ್ಕೋಂಡಾ ಪ್ರದೇಶದ ನಿವಾಸಿಯಾದ ವಿವಾಹಿತ ಮಹಿಳೆ ಪೊಲೀಸರಿಗೆ ದೂರು ನೀಡಿ, ವಿವಾಹವಾದ ನಂತರವೂ ನನ್ನ ತಂದೆ ನನ್ನ ಮೇಲೆ ಒತ್ತಾಯಪೂರ್ವಕವಾಗಿ ಅತ್ಯಾಚಾರವೆಸಗುತ್ತಿದ್ದ. ಹಲವಾರು ಬಾರಿ ಬಹಿರಂಗವಾಗಿ ಸೆಕ್ಸ್‌ ಸುಖ ನೀಡುವಂತೆ ಒತ್ತಾಯಿಸಿದ್ದಾನೆ ಎಂದು ದೂರಿದ್ದಾಳೆ.
 
ನಗರದಲ್ಲಿರುವ ಹಲವಾರು ಲಾಡ್ಜ್‌ಗಳಿಗೆ ನನ್ನನ್ನು ಕರೆದುಕೊಂಡು ಹೋಗಿ ನಿರಂತರವಾಗಿ ಕಾಮಕೇಳಿಯಲ್ಲಿ ತೊಡಗುತ್ತಿದ್ದ. ನಾನು ಬೇಡವೆಂದರೂ ಮಂಚಕ್ಕೆ ಎಳೆಯುತ್ತಿದ್ದನಲ್ಲದೇ ಲೈಂಗಿಕವಾಗಿ ತುಂಬಾ ಹಿಂಸಿಸುತ್ತಿದ್ದ. ಬಾಲ್ಯದಿಂದ ವಿವಾಹವಾದ ನಂತರವೂ ಆತನ ಕಾಮಚೇಷ್ಠೆ ಮುಂದುವರಿದಿತ್ತು ಯಾರಿಗಾದರೂ ಹೇಳಿದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಜೀವ ಬೆದರಿಕೆ ಹಾಕಿದ್ದ ಎಂದು ಮಹಿಳೆ ಆರೋಪಿಸಿದ್ದಾಳೆ. 
 
ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಹಿಳೆಯ ತಂದೆಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಆದರೆ, ಮಹಿಳೆ ಆಸ್ತಿ ವಿವಾದ ಕುರಿತಂತೆ ತಂದೆಯ ವಿರುದ್ಧ ದೂರು ದಾಖಲಿಸಿದ್ದಾಳೆ. ಆಸ್ತಿಗಾಗಿ ತಂದೆಯ ವಿರುದ್ಧ ಅತ್ಯಾಚಾರ ಆರೋಪ ಹೊರಿಸುತ್ತಿದ್ದಾಳೆಯೇ ಎನ್ನುವ ಅನುಮಾನ ದಟ್ಟವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಪ್ರಸಕ್ತ ವರ್ಷದ ಮೇ ತಿಂಗಳಲ್ಲಿ, 13 ವರ್ಷದ ಬಾಲಕಿಯೊಬ್ಬಳು ತನ್ನ ಮಲತಂದೆ ನಿರಂತರವಾಗಿ ಅತ್ಯಾಚಾರವೆಸಗುತ್ತಿದ್ದಾನೆ. ವಿರೋಧಿಸಿದಲ್ಲಿ ಮನೆಯಿಂದ ಹೊರಹಾಕುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿರುವುದನ್ನು ಸ್ಮರಿಸಬಹುದು.  

Share this Story:

Follow Webdunia kannada

ಮುಂದಿನ ಸುದ್ದಿ

ಚಂದ್ರಗ್ರಹಣವನ್ನೇ ಲಾಭ ಮಾಡಿಕೊಂಡ ಕಳ್ಳರು!