Webdunia - Bharat's app for daily news and videos

Install App

162 ಕೋಟಿ ಗಳಿಸಿದ ಸ್ತ್ರೀ ಚಿತ್ರ..!!

Webdunia
ಮಂಗಳವಾರ, 25 ಸೆಪ್ಟಂಬರ್ 2018 (18:50 IST)
ರಾಜ್‌ಕುಮಾರ್ ರಾವ್ ಹಾಗೂ ಶ್ರದ್ಧಾ ಕಪೂರ್ ಅವರ ಇತ್ತೀಚೆಗೆ ಬಿಡುಗಡೆಯಾದ ಸ್ತ್ರೀ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ 160 ಕೋಟಿಗೂ ಮೀರಿ ಗಳಿಕೆಯನ್ನು ಮಾಡಿದೆ. ಇತ್ತೀಚಿನ ದೊಡ್ಡ ಚಿತ್ರಗಳಾದ ಸೋನು ಕೆ ಟಿಟು ಕಿ ಸ್ವೀಟಿ, ವೀರೆ ದಿ ವೆಡ್ಡಿಂಗ್, ಗೋಲ್ಡ್ ಮತ್ತು ಸತ್ಯಮೇವ ಜಯತೆ ಚಿತ್ರಗಳನ್ನು ಗಳಿಕೆಯಲ್ಲಿ ಈಗಾಗಲೇ ಹಿಂದಿಕ್ಕಿದೆ.
ನಿರ್ದೇಶಕ ಅಮರ್ ಕೌಶಿಕ್ ಅವರ ಸ್ತ್ರೀ ಚಿತ್ರ ತನ್ನ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದೆ. ಸಣ್ಣ ಬಜೆಟ್‌ನಲ್ಲಿ ತಯಾರಿಸಲಾದ ಭಯಾನಕ, ಹಾಸ್ಯ ಚಿತ್ರವು ದೇಶೀಯ ಮಾರುಕಟ್ಟೆಯಲ್ಲೊಂದೇ ಅಲ್ಲದೆ ಅಂತರಾಷ್ಟ್ರೀಯವಾಗಿಯೂ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದೆ. ಇದುವರೆಗೆ ಈ ಚಿತ್ರವು ಭಾರತದಲ್ಲಿ 150.07 ಕೋಟಿ ಮತ್ತು ಇತರೆ 12 ಕೋಟಿ ರೂಪಾಯಿಯನ್ನು ಗಳಿಸಿದೆ. ಪ್ರಸ್ತುತ ಗಳಿಗೆ 162.07 ಕೋಟಿ ರೂಪಾಯಿಗಳಾಗಿದೆ.
 
ಈ ಚಿತ್ರವು 2018 ರಲ್ಲಿ ಪ್ರಸ್ತುತವಾಗಿ ಆರನೇ ಅತಿ ಹೆಚ್ಚು ಆದಾಯವನ್ನು ಗಳಿಸಿದ ಚಿತ್ರವಾಗಿದೆ. ಇದಕ್ಕೂ ಮೊದಲು ಸಂಜು, ಪದ್ಮಾವತ್, ರೇಸ್ 3, ಬಾಘಿ 2 ಮತ್ತು ರಾಜಿ ಚಿತ್ರಗಳು ಹೆಚ್ಚಿನ ಆದಾಯವನ್ನು ಗಳಿಸಿದ್ದವು. ಕೇವಲ 20 ಕೋಟಿ ಬಜೆಟ್‌ನಲ್ಲಿ ತಯಾರಿಸಿದ ಈ ಚಿತ್ರವು ಬಿಡುಗಡೆಗೂ ಮುನ್ನವೇ ಸೆಟಲೈಟ್, ಡಿಜಿಟಲ್ ಮತ್ತು ಸಂಗೀತ ಹಕ್ಕುಗಳ ಮಾರಾಟದ ಮೂಲಕ ತನ್ನ ಹೂಡಿಕೆಯನ್ನು ಮರುಪಡೆದಿತ್ತು. ರಾಜ್‌ಕುಮಾರ್ ರಾವ್ ಹಾಗೂ ಶ್ರದ್ಧಾ ಕಪೂರ್ ಅವರೊಂದಿಗೆ ಪಂಕಜ್ ತ್ರಿಪಾಠಿ, ಅಪರ್ಶಕ್ತಿ ಖುರಾನಾ ಮತ್ತು ಅಭಿಷೇಕ್ ಬ್ಯಾನರ್ಜಿ ಸಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹೆಣ್ಣು ಮಗುವಾಗುತ್ತಿದ್ದ ಹಾಗೇ ಆಥಿಯಾಗೆ ಬಿಗ್ ಸರ್ಪ್ರೈಸ್ ಕೊಟ್ಟ ಕೆಎಲ್ ರಾಹುಲ್‌, ಸುನೀಲ್ ಶೆಟ್ಟಿ

Machete Reels Case: ರಜತ್‌ಗೆ 14 ದಿನಗಳ ನ್ಯಾಯಾಂಗ ಬಂಧನ

ತನ್ನ ಬ್ಯೂಟಿಯನ್ನು ಕೆದಕಿದವನಿಗೆ ಚಳಿ ಬಿಡಿಸಿದ ನಟಿ ಖುಷ್ಭೂ

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಮುಂದಿನ ಸುದ್ದಿ