ಮುಂಬೈ: ಬಾಲಿವುಡ್ ನಟಿ ಮಲೈಕಾ ಅರೋರಾ ಅವರ ತಂದೆ ಅನಿಲ್ ಅರೋರ ದಾರುಣವಾಗಿ ಸಾವನ್ನಪ್ಪಿದ್ದಾರೆ. ಆರನೇ ಮಹಡಿಯಿಂದ ಅನಿಲ್ ಅರೋರಾ ಜಿಗಿದು ಆತ್ಮಹತ್ಯೆ ಮಾಡುಕೊಂಡಿದ್ದಾರೆ.
ಇಂದು ಬೆಳ್ಳಂಬೆಳಗ್ಗೆ ತಾವು ವಾಸಿಸುತ್ತಿದ್ದ ಬಾಂದ್ರಾ ಕಟ್ಟಡದ ಟೆರೇಸ್ ಮೇಲಿಂದ ಜಿಗಿದು ಅನಿಲ್ ಸಾವಿಗೆ ಶರಣಾಗಿದ್ದಾರೆ. ಈವರೆಗೂ ಆತ್ಮಹತ್ಯೆಯ ಪತ್ರ ಸಿಕ್ಕಿಲ್ಲ ಎನ್ನಲಾಗಿದೆ. ಆತ್ಮಹತ್ಯೆಗೆ ಕಾರಣ ಏನೆಂಬುದು ಇನ್ನೂ ತಿಳಿದು ಬಂದಿಲ್ಲ.
ಘಟನೆಯ ನಂತರ ಮಲೈಕಾ ಕುಟುಂಬ ಮತ್ತು ಆಕೆಯ ಪರಿಚಯಸ್ಥರು ಆಘಾತಕ್ಕೊಳಗಾಗಿದ್ದಾರೆ. ಮಾಹಿತಿ ಪಡೆದ ಮುಂಬೈ ಪೊಲೀಸರು ನಟಿಯ ಮನೆಗೆ ಆಗಮಿಸಿ ಮಾಹಿತಿ ಕಲೆಹಾಕುತ್ತಿದ್ದಾರೆ.
ಮಲೈಕಾ ಅವರ ಮಾಜಿ ಪತಿ ಅರ್ಬಾಜ್ ಖಾನ್ ಕೂಡ ಅವರ ಮನೆಗೆ ಧಾವಿಸಿದ್ದಾರೆ. ಅರ್ಬಾಜ್ ಖಾನ್ ಮಲೈಕಾ ಮನೆಯ ಹೊರಗೆ ಪೊಲೀಸರು ಮತ್ತು ಇತರ ಜನರೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ.
ಅನಿಲ್ ಅರೋರಾ ಅವರು ಹೆಚ್ಚಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಪಂಜಾಬಿ ಮೂಲದವರಾದ ಅನಿಲ್ ಅರೋರ ಅವರು ಜಾಯ್ಸ್ ಪಾಲಿಕಾರ್ಪ್ ಅವರನ್ನು ಮದುವೆಯಾಗಿದ್ದರು. ಮಲೈಕಾ ಹುಟ್ಟಿದ ಬಳಿಕ ಅವರು ಡಿವೋರ್ಸ್ ಪಡೆದಿದ್ದರು.