Webdunia - Bharat's app for daily news and videos

Install App

ಬಟ್ಟೆ ಪೂರ್ತಿ ರಕ್ತ.. ಸೈಫ್ ಅಲಿ ಖಾನ್ ಆಸ್ಪತ್ರೆಗೆ ಕರೆದೊಯ್ದ ಆಟೋ ಚಾಲಕ ಬಿಚ್ಚಿಟ್ಟ ಸತ್ಯಗಳು

Krishnaveni K
ಶನಿವಾರ, 18 ಜನವರಿ 2025 (09:55 IST)
ಮುಂಬೈ: ಚಾಕು ಇರಿತಕ್ಕೊಳಗಾದ ನಟ ಸೈಫ್ ಅಲಿ ಖಾನ್ ರನ್ನು ಆಸ್ಪತ್ರೆಗೆ ಕರೆದೊಯ್ದ ಆಟೋ ಚಾಲಕ ಮಾಧ್ಯಮಗಳ ಮುಂದೆ ಮೊನ್ನೆ ನಡೆದ ಘಟನೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ.


ಬಾಲಿವುಡ್ ನಟ ಸೈಫ್ ಅಲಿ ಖಾನ್ ಮನೆಗೆ ಮೊನ್ನೆ ತಡರಾತ್ರಿ ನುಗ್ಗಿದ್ದ ದುಷ್ಕರ್ಮಿ ನಟನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಈ ಘಟನೆ ದೇಶವನ್ನೇ ತಲ್ಲಣಗೊಳಿಸಿತ್ತು. ಸುಮಾರು ಆರು ಬಾರಿ ಸೈಫ್ ಗೆ ಆರೋಪಿ ಇರಿದಿದ್ದ ಎನ್ನಲಾಗಿದೆ. ತಕ್ಷಣವೇ ಅವರನ್ನು ಪುತ್ರ ಇಬ್ರಾಹಿಂ ಆಟೋ ರಿಕ್ಷಾ ಮೂಲಕ 2 ಕಿ.ಮೀ. ದೂರದಲ್ಲಿರುವ ಲೀಲಾವತಿ ಆಸ್ಪತ್ರೆಗೆ ಕರೆದೊಯ್ದಿದ್ದ. ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದ ಆಟೋ ಚಾಲಕ ಎಲ್ಲವನ್ನೂ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ.

ಮೊನ್ನೆ ನಡೆದಿದ್ದೇನು?
ಭಜನ್ ಸಿಂಗ್ ರಾಣಾ ಎನ್ನುವ ಉತ್ತರಾಖಂಡ ಮೂಲದ ಆಟೋ ಚಾಲಕ ಸೈಫ್ ರನ್ನು ಆಸ್ಪತ್ರೆಗೆ ಕರೆದೊಯ್ದಿದ್ದ. ‘ಅಪಾರ್ಟ್ ಮೆಂಟ್ ಬಳಿ ನಾನು ಮಾಮೂಲಾಗಿ ನಿಂತಿದ್ದೆ. ಯಾರೂ ನನ್ನನ್ನು ಕರೆದಿರಲಿಲ್ಲ. ಆದರೆ ಯಾರೋ ಒಬ್ಬ ಮಹಿಳೆ ರಿಕ್ಷಾ ಎಂದು ಕೂಗುತ್ತಿದ್ದರು. ತಕ್ಷಣವೇ ನಾನು ಅವರ ಬಳಿ ಹೋದೆ. ಆಗ ಆ ಮಹಿಳೆ ದಯವಿಟ್ಟು ಸಹಾಯ ಮಾಡಿ, ಗಾಯವಾಗಿದೆ ಎಂದು ಕೂಗಿ ಹೇಳುತ್ತಿದ್ದರು. ನನಗೆ ಆ ವ್ಯಕ್ತಿ ಯಾರು ಎಂದೂ ಗೊತ್ತಿರಲಿಲ್ಲ. ಅವರು ಸೆಲೆಬ್ರಿಟಿ ಎಂದು ಗೊತ್ತಿರಲಿಲ್ಲ. ಯಾರೋ ಮಾಮೂಲಿ ಹೊಡೆದಾಟ ಮಾಡಿ ಗಾಯಗೊಂಡಿರಬಹುದು ಎಂದುಕೊಂಡೆ. ಆದರೂ ಅದರ ಬಗ್ಗೆ ನಾನು ಹೆಚ್ಚೇನೂ ಯೋಚಿಸಲಿಲ್ಲ. ಜೀವ ಉಳಿಸುವುದೊಂದೇ ನನ್ನ ಗುರಿಯಾಗಿತ್ತು. ಆಗ ಒಬ್ಬ ಬಿಳಿ ಕುರ್ತಾ ಧರಿಸಿದ್ದ ವ್ಯಕ್ತಿ ಆಟೋ ಬಳಿ ಬಂದರು. ಅವರ ಮೈ ಪೂರ್ತಿ ರಕ್ತದಲ್ಲಿ ಮುಳುಗಿತ್ತು. ಹಾಗಿದ್ದರೂ ಅವರು ನಡೆಯುತ್ತಿದ್ದರು. ಅವರ ಜೊತೆಗೆ ಒಬ್ಬ ದೊಡ್ಡ ಹುಡುಗ ಮತ್ತು ಮತ್ತೊಬ್ಬ ಚಿಕ್ಕ ಮಗುವೂ ಇದ್ದ. ಮೂವರು ನನ್ನ ಆಟೋದಲ್ಲಿ ಕುಳಿತರು.

ಆಸ್ಪತ್ರೆಗೆ ಹೋಗುವಾಗಲೂ ಆ ವ್ಯಕ್ತಿ ಇನ್ನು ಎಷ್ಟು ಹೊತ್ತಾಗಬಹುದು ಬೇಗ ಹೋಗಿ ಎಂದು ಹೇಳುತ್ತಿದ್ದರು. ಆಗಲೂ ನನಗೆ ಅವರು ಯಾರು ಎಂದು ಗೊತ್ತಾಗಲಿಲ್ಲ. ಆಸ್ಪತ್ರೆ ಗೇಟ್ ಬಳಿ ಬರುತ್ತಿದ್ದಂತೇ ಅವರು ಸೆಕ್ಯುರಿಟಿ ಬಳಿ ನಾನು ಸೈಫ್ ಅಲಿ ಖಾನ್ ಎಂದು ಗುರುತು ಹೇಳಿಕೊಂಡಾಗಲೇ ಗೊತ್ತಾಗಿದ್ದು ಅವರು ನಟ ಅಂತ. ಆಗ ಆಸ್ಪತ್ರೆಯವರು ವೀಲ್ ಚೇರ್ ನ ಸಹಾಯ ನೀಡಿದರು. ಆದರೆ ವೀಲ್ ಚೇರ್ ಬೇಡ ಎಂದು ಸ್ವಲ್ಪ ದೂರ ತಾವೇ ಸೈಫ್ ನಡೆದರು. ಬಳಿಕ ಸ್ಟ್ರೆಚರ್ ನಲ್ಲಿ ಅವರನ್ನು ಕರೆದೊಯ್ಯಲಾಯಿತು. ನನಗೆ ಆಗ ಅವರು ಬಾಡಿಗೆ ಕೊಡುವ ಸ್ಥಿತಿಯಲ್ಲೂ ಇಲ್ಲ. ಹಾಗೆಯೇ ಗಡಿಬಿಡಿಯಿಂದ ಒಳ ಹೋದರು. ನಾನು ನಿರೀಕ್ಷೆಯೂ ಮಾಡಲಿಲ್ಲ. ಒಬ್ಬರ ಜೀವ ಉಳಿಸಿದ ನೆಮ್ಮದಿ ನನ್ನದಾಗಿತ್ತು. ಒಂದು ವೇಳೆ ಸೈಫ್ ಈಗ ನನ್ನನ್ನು ಭೇಟಿ ಮಾಡಲು ಬಯಸಿದರೆ, ಉಡುಗೊರೆ ಕೊಡಲು ಬಯಸಿದರೆ ಅದು ನನಗೆ ಖುಷಿಯ ವಿಚಾರ. ಅದನ್ನು ಹೇಗೆ ನಿರಾಕರಿಸಲಿ’ ಎಂದು ಆಟೋ ಚಾಲಕ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments