ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದ ಅರ್ಜುನ್ ಕಪೂರ್ ಮತ್ತು ಪರಿಣಿತಿ ಛೋಪ್ರಾ...

ನಾಗಶ್ರೀ ಭಟ್
ಶುಕ್ರವಾರ, 23 ಫೆಬ್ರವರಿ 2018 (19:36 IST)
ಅರ್ಜುನ್ ಕಪೂರ್ ಮತ್ತು ಪರಿಣಿತಿ ಛೋಪ್ರಾ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ನಮಸ್ತೆ ಇಂಗ್ಲೆಂಡ್ ನ ಚಿತ್ರೀಕರಣವನ್ನು ಪಂಜಾಬ್‌ನಲ್ಲಿ ಪ್ರಾರಂಭಿಸಲು ಎಲ್ಲಾ ತಯಾರಿಯೂ ನಡೆದಿದೆ. ಇಶ್ಕಜಾದೆ ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಿ ಪರದೆಯನ್ನು ಹಂಚಿಕೊಂಡಿದ್ದ ಅರ್ಜುನ್ ಹಾಗೂ ಪರಿಣಿತಿ ಅಮೃತಸರದಲ್ಲಿರುವ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದರು.

ಚಿತ್ರೀಕರಣದ ಆರಂಭಕ್ಕೂ ಮೊದಲು ಸರ್ವಶಕ್ತನ ಆಶೀರ್ವಾದವನ್ನು ಪಡೆದುಕೊಂಡರು. ಇವರಿಬ್ಬರೊಂದಿಗೆ ಚಿತ್ರನಿರ್ಮಾಪಕ ವಿಪುಲ್ ಷಾ ಕೂಡಾ ಜೊತೆಗಿದ್ದರು.
 
ಚಿತ್ರೀಕರಣ ಪ್ರಾರಂಭವಾಗುವುದಕ್ಕೂ ಮೊದಲು ದೇವಸ್ಥಾನಕ್ಕೆ ಭೇಟಿ ನೀಡುವುದು ಅರ್ಜುನ್ ಕಪೂರ್ ಅವರ ಪೂರ್ವಸಿದ್ಧತೆಯಿಲ್ಲದ ಯೋಜನೆಯಾಗಿತ್ತು. ಅರ್ಜುನ್ ಪ್ರಶಾಂತವಾದ ಪವಿತ್ರ ಸ್ಥಳದಲ್ಲಿ 30 ನಿಮಿಷಗಳ ಕಾಲ ಏಕಾಂತದಲ್ಲಿ ಪ್ರಾರ್ಥನೆಯನ್ನು ಮಾಡುವ ಅವಕಾಶವನ್ನು ಕಳೆದುಕೊಳ್ಳಲಿಲ್ಲ. ನಮಸ್ತೆ ಇಂಗ್ಲೆಂಡ್ ಚಿತ್ರ ಇದೇ ವರ್ಷದ ಡಿಸೆಂಬರ್‌ 7 ರಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.
 
ನಮಸ್ತೆ ಇಂಗ್ಲೆಂಡ್ ಚಿತ್ರವು ನಮಸ್ತೆ ಲಂಡನ್‌ನ ಮುಂದುವರಿದ ಭಾಗ ಎಂದು ಹೇಳಲಾಗಿತ್ತು ಮತ್ತು ಈ ಚಿತ್ರದಲ್ಲೂ ಅಕ್ಷಯ್ ಕುಮಾರ್ ಇರುವುದಾಗಿ ನಿರ್ಮಾಪಕ ವಿಪುಲ್ ಷಾ ಹೇಳಿದ್ದರು. ಅಕ್ಷಯ್ ಕುಮಾರ್ ಮತ್ತು ಸೋನಾಕ್ಷಿ ಸಿನ್ಹಾ ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ಅಭಿನಯಿಸುವ ಎಲ್ಲಾ ಸಾಧ್ಯತೆಗಳೂ ಇವೆ ಎಂದು ಮೂಲಗಳು ತಿಳಿಸಿದ್ದವು. ಆದರೆ ಅಕ್ಷಯ್ ಬೇರೆ ಚಿತ್ರಗಳಲ್ಲಿ ನಿರತರಾಗಿರುವುದರಿಂದ ಅರ್ಜುನ್‌ಗೆ ಈ ಚಿತ್ರದಲ್ಲಿ ಅವಕಾಶವನ್ನು ನೀಡಲಾಗಿದ್ದು ಅವರಿಗೆ ಪರಿಣಿತಿ ಛೋಪ್ರಾ ಜೊತೆಯಾಗಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಧ್ರುವ ಸರ್ಜಾ ವಿರುದ್ಧ ದೂರು ದಾಖಲು: ಇದು ಬೇರೆ ನಟರಿಗೂ ಅನ್ವಯಿಸುವ ವಿಚಾರ

ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಏನೇನು ತಪ್ಪು ಮಾಡಿದ್ದಾರೆ: ನಾಳೆ ದಾಸನಿಗೆ ಮಹತ್ವದ ದಿನ

BB Season12: ಇನ್ನೂ ಆಟ ಶುರು ಮಾಡುತ್ತೇನೆಂದ ಮಲ್ಲಮ್ಮ, ದೊಡ್ಮನೆಯಿಂದ ಆಚೆ ಬಂದ್ರಾ

ಹಾಸಿಗೆ, ದಿಂಬು ಕೇಳಿದ್ದ ದರ್ಶನ್ ಗೆ ಕೋರ್ಟ್ ಕೊಟ್ಟಿದೆ ಮಹತ್ವದ ಆದೇಶ

ಕಾಂತಾರ ಚಾಪ್ಟರ್ 1 ಒಟಿಟಿಗೆ: ಬಂದದ್ದು ಸ್ವಲ್ಪ ಬೇಗ ಆಯ್ತಾ ಅಂತ ಅಂತಿದ್ದಾರೆ ಫ್ಯಾನ್ಸ್

ಮುಂದಿನ ಸುದ್ದಿ
Show comments