ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅವರಿಗೆ ಇಂದು (ನ.7) ಜನ್ಮದಿನದ ಸಂಭ್ರಮ. ಅವರ ಅಭಿಮಾನಿಗಳಿಗೆ ಇದು ವಿಶೇಷ ದಿನ.ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುವಲ್ಲಿ ಸಖತ್ ಬ್ಯೂಸಿ ಆಗಿರುವ ಅನುಷ್ಕಾ ಮೇಲೆ ಫ್ಯಾನ್ಸ್ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅರುಂಧತಿ, ಬಾಹುಬಲಿ ರೀತಿಯ ಬ್ಲಾಕ್ಬಸ್ಟರ್ ಸಿನಿಮಾಗಳನ್ನು ನೀಡಿದ ಅವರಿಗೆ ಇತ್ತೀಚಿನ ದಿನಗಳಲ್ಲಿ ಯಾಕೋ ದೊಡ್ಡ ಮಟ್ಟದ ಯಶಸ್ಸು ಸಿಗುತ್ತಿಲ್ಲ. ಇಂದು ಅನುಷ್ಕಾ ಶೆಟ್ಟಿ ಅವರ 40ನೇ ವರ್ಷದ ಜನ್ಮದಿನದ ಪ್ರಯುಕ್ತ ಹೊಸ ಸಿನಿಮಾ ಅನೌನ್ಸ್ ಆಗುವ ಸಾಧ್ಯತೆ ಇದೆ.