ಆಲಿಯಾ ಭಟ್ ಮಧ್ಯರಾತ್ರಿಯ ಬರ್ತ್‌ಡೇ ಸೆಲೆಬ್ರೇಷನ್..

Webdunia
ಶುಕ್ರವಾರ, 15 ಮಾರ್ಚ್ 2019 (16:02 IST)
ಬಾಲಿವುಡ್‍ನ ಜನಪ್ರಿಯ ನಟಿ ಆಲಿಯಾ ಭಟ್ ನಿನ್ನೆ ರಾತ್ರಿ ತಮ್ಮ 26 ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಬಾಲಿವುಡ್‌ನ ಇತ್ತೀಚಿನ ಪವರ್ ಕಪಲ್ ಆಗಿರುವುದು ಈಗ ಹಳೆಯ ವಿಷಯವಾಗಿದೆ. ಆಲಿಯಾ ಭಟ್ ಅವರ ಪ್ರೇಮಿಯಾಗಿರುವ ರಣಬೀರ್ ಕಪೂರ್ ತಮ್ಮ ಮನದನ್ನೆಗಾಗಿ ಮಧ್ಯರಾತ್ರಿಯಲ್ಲಿ ಸರ್‌ಪ್ರೈಸ್ ಬರ್ತ್‌ಡೇ ಸೆಲೆಬ್ರೇಷನ್ ಮಾಡಿದ್ದಾರೆ.
ಈ ವರ್ಷ ಆಲಿಯಾ ರಾಜಿ ಮತ್ತು ಗಲ್ಲಿ ಬಾಯ್ ನಂತಹ ಬ್ಲಾಕ್‌ಬಾಸ್ಟರ್ ಚಿತ್ರಗಳನ್ನು ನೀಡಿದ್ದಾರೆ. ತಮ್ಮ ಸ್ನೇಹಿತರು, ಮನೆಯವರು ಮತ್ತು ರಣಬೀರ್ ಜೊತೆಗೆ ಆಲಿಯಾ 26 ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ರಣಬೀರ್ ಕಪೂರ್, ಅಯಾನ್ ಮುಖರ್ಜಿ, ಕರಣ್ ಜೋಹರ್, ಮಸಬಾ ಗುಪ್ತಾ ಮತ್ತು ಇತರರು ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ. ತಮ್ಮ ಬರ್ತ್‌ಡೇ ಸೆಲೆಬ್ರೇಷನ್‌ನ ಫೋಟೋದಲ್ಲಿ ಸುಂದರವಾದ ಕಪ್ಪು ಬಣ್ಣದ ಡ್ರೆಸ್‍ನಲ್ಲಿರುವ ಆಲಿಯಾ ಎಂದಿನಂತೆ ಸುಂದರವಾಗಿದ್ದರು.
 
ಆಲಿಯಾ ತಾಯಿ ಸೋನಿ ರಾಜ್ಧನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಗಳಿಗೆ ಜನ್ಮದಿನದ ಶುಭಾಷಯವನ್ನು ಕೋರಿದ್ದು ಹಿಂದಿನ ದಿನ ರಾತ್ರಿಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಆಲಿಯಾ ಶೀಘ್ರದಲ್ಲೇ ಅಭಿಶೇಕ್ ವರ್ಮಾ ಅವರ ಕಲಂಕ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸಮಂತಾ ರುತ್ ಪ್ರಭು ಕೈಹಿಡಿದ ರಾಜ್ ನಿಡಿಮೋರು ಬಗ್ಗೆ ತಿಳಿದಿರದ ಇನ್ನಷ್ಟು ಮಾಹಿತಿ

ಸಮಂತಾ ಜತೆಗೆ ಮದುವೆ ಬೆನ್ನಲ್ಲೇ ರಾಜ್ ನಿಡಿಮೋರು ಮಾಜಿ ಪತ್ನಿ ಪೋಸ್ಟ್ ವೈರಲ್

ಮದುವೆ ದಿನ ಸಮಂತಾ ಪತಿ ರಾಜ್ ನಿಡಿಮೋರು ಬಗ್ಗೆ ಈ ವಿಚಾರ ಹೆಚ್ಚು ಹುಡುಕಾಟ

ದರ್ಶನ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌: ಚಾಲೆಂಜಿಂಗ್‌ ಸ್ಟಾರ್‌ ಧ್ವನಿಯಲ್ಲೇ ಡೆವಿಲ್ ಟ್ರೇಲರ್ ದಿನಾಂಕ ರಿವಿಲ್‌

ನಿರ್ದೇಶಕ ರಾಜ್ ನಿಡಮೋರು ಜೊತೆ ಸದ್ದಿಲ್ಲದೇ ಮದುವೆಯಾದ ಸಮಂತಾ

ಮುಂದಿನ ಸುದ್ದಿ
Show comments