Publish Date: Fri, 15 Mar 2019 (16:02 IST)
Updated Date: Fri, 15 Mar 2019 (16:03 IST)
ಬಾಲಿವುಡ್ನ ಜನಪ್ರಿಯ ನಟಿ ಆಲಿಯಾ ಭಟ್ ನಿನ್ನೆ ರಾತ್ರಿ ತಮ್ಮ 26 ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಬಾಲಿವುಡ್‌ನ ಇತ್ತೀಚಿನ ಪವರ್ ಕಪಲ್ ಆಗಿರುವುದು ಈಗ ಹಳೆಯ ವಿಷಯವಾಗಿದೆ. ಆಲಿಯಾ ಭಟ್ ಅವರ ಪ್ರೇಮಿಯಾಗಿರುವ ರಣಬೀರ್ ಕಪೂರ್ ತಮ್ಮ ಮನದನ್ನೆಗಾಗಿ ಮಧ್ಯರಾತ್ರಿಯಲ್ಲಿ ಸರ್‌ಪ್ರೈಸ್ ಬರ್ತ್‌ಡೇ ಸೆಲೆಬ್ರೇಷನ್ ಮಾಡಿದ್ದಾರೆ.
ಈ ವರ್ಷ ಆಲಿಯಾ ರಾಜಿ ಮತ್ತು ಗಲ್ಲಿ ಬಾಯ್ ನಂತಹ ಬ್ಲಾಕ್‌ಬಾಸ್ಟರ್ ಚಿತ್ರಗಳನ್ನು ನೀಡಿದ್ದಾರೆ. ತಮ್ಮ ಸ್ನೇಹಿತರು, ಮನೆಯವರು ಮತ್ತು ರಣಬೀರ್ ಜೊತೆಗೆ ಆಲಿಯಾ 26 ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ರಣಬೀರ್ ಕಪೂರ್, ಅಯಾನ್ ಮುಖರ್ಜಿ, ಕರಣ್ ಜೋಹರ್, ಮಸಬಾ ಗುಪ್ತಾ ಮತ್ತು ಇತರರು ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ. ತಮ್ಮ ಬರ್ತ್‌ಡೇ ಸೆಲೆಬ್ರೇಷನ್‌ನ ಫೋಟೋದಲ್ಲಿ ಸುಂದರವಾದ ಕಪ್ಪು ಬಣ್ಣದ ಡ್ರೆಸ್‍ನಲ್ಲಿರುವ ಆಲಿಯಾ ಎಂದಿನಂತೆ ಸುಂದರವಾಗಿದ್ದರು.
ಆಲಿಯಾ ತಾಯಿ ಸೋನಿ ರಾಜ್ಧನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಗಳಿಗೆ ಜನ್ಮದಿನದ ಶುಭಾಷಯವನ್ನು ಕೋರಿದ್ದು ಹಿಂದಿನ ದಿನ ರಾತ್ರಿಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಆಲಿಯಾ ಶೀಘ್ರದಲ್ಲೇ ಅಭಿಶೇಕ್ ವರ್ಮಾ ಅವರ ಕಲಂಕ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.