ಕಾಫೀ ವಿತ್ ಕರಣ್-6 ಮೊದಲ ಸಂಚಿಕೆಯಲ್ಲಿ ಆಲಿಯಾ ಮತ್ತು ದೀಪಿಕಾ..!!

Webdunia
ಶುಕ್ರವಾರ, 28 ಸೆಪ್ಟಂಬರ್ 2018 (15:24 IST)
ಕಾಫೀ ವಿತ್ ಕರಣ್-6 ಶೋ ಮೊದಲ ಸಂಚಿಕೆಯಲ್ಲಿ ದೀಪಿಕಾ ಪಡುಕೋಣೆ ಮತ್ತು ಆಲಿಯಾ ಭಟ್ ಮೊದಲ ಅತಿಥಿಯಾಗಿ ಬರುತ್ತಿರುವುದಾಗಿ ಕರಣ್ ಜೋಹರ್ ಟ್ವೀಟ್ ಮಾಡಿದ್ದಾರೆ. ಈ ಶೋದ ಆರನೇ ಸೀಸನ್ ಅಕ್ಟೋಬರ್ 21 ರಂದು ಪ್ರಾರಂಭವಾಗಲಿದೆ.
ಕಾಫೀ ವಿತ್ ಕರಣ್ ಅಕ್ಟೋಬರ್ 21 ರಂದು ಆರಂಭವಾಗಲಿದ್ದು ಅದರಲ್ಲಿ ಮೊದಲ ಅತಿಥಿಗಳಾಗಿ ದೀಪಿಕಾ ಮತ್ತು ಆಲಿಯಾ ಬರುತ್ತಿದ್ದಾರೆ. ಕರಣ್ ಇದನ್ನು ತಮ್ಮ ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದು "ಮೊದಲ ಕಾಫೀ ಕಪ್ #ಗರ್ಲ್ ಪವರ್ ಕುರಿತಾದುದು !! @StarWorldIndia @hotstartweets ನಲ್ಲಿ #koffeewithkaran ಸೀಸನ್ 6 ರ 1 ಸಂಚಿಕೆಗೆ ಸ್ವಾಗತ @deepikapadukone ಮತ್ತು @aliaa08" ಎಂದು ಬರೆದುಕೊಂಡಿದ್ದಾರೆ. ಇದು ಕಾಫೀ ವಿತ್ ಕರಣ್‌ನ 6 ನೇ ಸೀಸನ್ ಆಗಿದೆ. ಹಿಂದಿನ ಸೀಸನ್‌ನಲ್ಲಿ ದೀಪಿಕಾ ಈ ಶೋನಲ್ಲಿ ಸೋನಮ್ ಕಪೂರ್, ಪ್ರಿಯಾಂಕಾ ಚೋಪ್ರಾ, ಶಾರುಖ್ ಖಾನ್ ಮತ್ತು ಫರಾ ಖಾನ್ ಜೊತೆಗೆ ಕಾಣಿಸಿಕೊಂಡಿದ್ದರು. ಹಾಗೆಯೇ ಆಲಿಯಾ ಹಿಂದಿನ ಸೀಸನ್‌ನಲ್ಲಿ ವರುಣ್ ಧವನ್, ಸಿದ್ಧಾರ್ಥ್ ಮಲ್ಹೋತ್ರಾ, ಪರಿಣಿತಿ ಛೋಪ್ರಾ ಮತ್ತು ಶಾರುಖ್ ಖಾನ್ ಜೊತೆಗೆ ಕಾಣಿಸಿಕೊಂಡಿದ್ದರು.
 
ಹಲವು ಮೂಲಗಳ ಪ್ರಕಾರ ಸಾರಾ ಅಲಿ ಖಾನ್ ಸಹ ಈ ಸೀಸನ್‌ನಲ್ಲಿ ತಂದೆ ಸೈಫ್ ಅಲಿ ಖಾನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಈ ವರ್ಷ ಸಾರಾ 'ಸಿಂಬಾ' ಚಿತ್ರದಲ್ಲಿ ಡೆಬ್ಯೂಟ್ ಮಾಡಿದ್ದಾರೆ. ಕರಣ್ ಜೋಹರ್ ಅವರ ಕಾಫೀ ವಿತ್ ಕರಣ್ ಶೋನಲ್ಲಿ ಸಾಮಾನ್ಯವಾಗಿ ಅದೇ ಅತಿಥಿಗಳಿರುತ್ತಾರೆ ಆದರೆ ಬೇರೆ ಬೇರೆ ಕಾಂಬಿನೇಷನ್‌ನಲ್ಲಿ. ಕೇವಲ ಕೆಲವು ಸಂಚಿಕೆಗಳಲ್ಲಿ ಮಾತ್ರ ಮೊದಲ ಬಾರಿಯ ಅತಿಥಿಗಳಿರುತ್ತಾರೆ. ಇನ್ನೇನು ಅಕ್ಟೋಬರ್ 21 ಕ್ಕೆ ಕಾಫೀ ವಿತ್ ಕರಣ್-6 ಆರಂಭವಾಗಲಿದ್ದು ನಿಮ್ಮ ನೆಚ್ಚಿನ ನಟ ನಟಿಯರೊಂದಿಗಿನ ಸಂಭಾಷಣೆಯನ್ನು ನೋಡಲು ದಿನಗಳನ್ನು ಎಣಿಸಬೇಕಷ್ಟೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹಿರಿಯ ನಟ ಉಮೇಶ್ ಚಿಕಿತ್ಸೆಗೆ ನೆರವಾಗಲು ಮುಖ್ಯಮಂತ್ರಿಗಳಿಗೇ ಪತ್ರ ಬರೆದ ಸಚಿವ ತಂಗಡಗಿ

ರಿಷಬ್ ಶೆಟ್ಟಿ ರೊಮ್ಯಾನ್ಸ್ ಸೀನ್ ಮಾಡುವಾಗ ಇದೊಂದು ಕಾರಣಕ್ಕೆ ಮಾನಿಟರ್ ಮುಂದಿರುತ್ತಾರಂತೆ ಪ್ರಗತಿ

ಕನ್ನಡ ಅಂತ ಬಂದ್ರೆ ನನ್ನ ಶೇಕ್ ಮಾಡಕ್ಕಾಗಲ್ಲ ಎಂದ ಅಶ್ವಿನಿ ಗೌಡ: ಕರ್ನಾಟಕ ರತ್ನ ಬಿಡಮ್ಮಾ ಎಂದ ನೆಟ್ಟಿಗರು

ಕರುನಾಡಿನಲ್ಲಿ ಹೊಸ ದಾಖಲೆ ಬರೆದ ಕಾಂತಾರ: ವಿವಿಧ ಭಾಷೆಗಳ ಕಲೆಕ್ಷನ್‌ನ ಮಾಹಿತಿ ಇಲ್ಲಿದೆ

ವೈಲ್ಡ್ ಕಾರ್ಡ್ ಸ್ಪರ್ಧಿಯ ಮಾತಿಗೆ ನೊಂದು ಬಿಕ್ಕಿ ಬಿಕ್ಕಿ ಅತ್ತ ಜಾಹ್ನವಿ

ಮುಂದಿನ ಸುದ್ದಿ
Show comments