Publish Date: Wed, 26 Sep 2018 (07:13 IST)
Updated Date: Wed, 26 Sep 2018 (07:15 IST)
ಟೊರೊಂಟೊ : ಬಹುಭಾಷಾ ನಟಿ ರಂಭಾ ಅವರು ಮೂರನೇ ಮಗುವಿಗೆ ಜನ್ಮ ನೀಡಿದ್ದಾರೆ. ಅವರ ಪತಿ ಇಂದ್ರನ್ ಪಥ್ಮನಾಥಮ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಈ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ನಟಿ ರಂಭಾ ಕೆಲವು ತಿಂಗಳುಗಳ ಹಿಂದೆ ಸೀಮಂತ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದರು. ಇದಕ್ಕೆ ಸಂಬಂಧಪಟ್ಟ ಫೊಟೋಗಳು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಸೆಪ್ಟೆಂಬರ್ 23 ರಂದು ಟೊರೊಂಟೊದ 'ಮೌಂಟ್ ಸಿನೈ' ಆಸ್ಪತ್ರೆಯಲ್ಲಿ ನಟಿ ರಂಭಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ನಟಿ ರಂಭಾ 2010 ರಲ್ಲಿ ಉದ್ಯಮಿ ಇಂದ್ರನ್ ಪಥ್ಮನಾಥಮ್ ಅವರನ್ನು ತಿರುಮಲದಲ್ಲಿ ವಿವಾಹವಾಗಿ, ಭಾರತ ತೊರೆದು ಟೊರೊಂಟೊದಲ್ಲಿ ನೆಲೆಸಿದ್ದರು. ರಂಭಾ ಅವರಿಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದು, ಈ ಬಾರಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.