Publish Date: Tue, 11 Sep 2018 (10:33 IST)
Updated Date: Tue, 11 Sep 2018 (10:35 IST)
ವಿಜಯಪುರ : ವೀಳ್ಯದೆಲೆ ತಿನ್ನುವ ಸುಣ್ಣ ಇದೀಗ ಒಂಭತ್ತು ತಿಂಗಳ ಮಗುವಿನ ಜೀವವನ್ನು ಬಲಿತೆಗೆದುಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದಲ್ಲಿ ನಡೆದಿದೆ.
ತಿಕೋಟ ಪಟ್ಟಣದ ನಿವಾಸಿ ವಿಶ್ವನಾಥ ತಾಳಿಕೋಟಿ ಎಂಬವರ ಒಂಭತ್ತು ತಿಂಗಳ ಮಗು ಮನೆಯಲ್ಲಿ ಆಟವಾಡುತ್ತಿರುವಾಗ ಆಕಸ್ಮಿಕವಾಗಿ ಸುಣ್ಣದ ಡಬ್ಬಿಯನ್ನು ನುಂಗಿದೆ. ತಕ್ಷಣ ಪೋಷಕರು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ಮೂಲಕ ಸುಣ್ಣದ ಡಬ್ಬಿಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರೂ ಕೂಡ ಡಬ್ಬಿಯಲ್ಲಿದ್ದ ಸುಣ್ಣವು ಮಗುವಿನ ದೇಹವನ್ನು ಸೇರಿದ್ದರಿಂದ ಮಗು ಮೃತಪಟ್ಟಿದೆ. ಈ ಘಟನೆಗೆ ಸಂಬಂಧಿಸಿದಂತೆ ತಿಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.