Webdunia - Bharat's app for daily news and videos

Install App

ಹಾಟ್ ನಟಿ ಮೀರಾ ಜಾಸ್ಮಿನ್ ಹೇಳಿಕೆ ಕೇಳಿದ್ರೆ ಶೇಕ್ ಆಗ್ತೀರಾ

Webdunia
ಶನಿವಾರ, 16 ಡಿಸೆಂಬರ್ 2023 (14:00 IST)
ಮಹಿಳೆಯ ಮೇಲೆ ಲೈಂಗಿಕ ದಾಳಿ ಮಾಡುವರಿಗೆ ಕ್ಯಾಸ್ಟ್ರೇಷನ್ (ಬೀಜಕೋಶಗಳನ್ನ ಕತ್ತರಿಸಿ ನಪುಂಸಕರನ್ನಾಗಿ ಮಾಡುವುದು) ಮಾಡುವುದೊಂದೇ ಸರಿಯಾದ ಶಿಕ್ಷೆ ಎಂದಿದ್ದಾರೆ. ಅತ್ಯಾಚಾರಿಗಳು ಆ ನೋವನ್ನು ಅನುಭವಿಸಿದಾಗ ಈ ರೀತಿಯ ಘಟನೆಗಳು ಕಡಿಮೆ ಆಗುತ್ತವೆ ಎಂದಿರುವ ಅವರು, ಈಗಿರುವ ಕಾನೂನುಗಳು ಅತ್ಯಾಚಾರಿಗಳಿಗೆ ಶಿಕ್ಷೆ ನೀಡುವಲ್ಲಿ ಪರಿಣಾಮಕಾರಿಯಾಗಿಲ್ಲ ಎಂದು ಪಂಚಭಾಷೆ ನಟಿ ಮೀರಾ ಜಾಸ್ಮಿನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಕನ್ನಡದ ಮೌರ್ಯ, ಅರಸು, ದೇವರು ಕೊಟ್ಟ ತಂಗಿ, ಇಜ್ಜೋಡು, ಹೂ ಚಿತ್ರಗಳಲ್ಲಿ ಅಭಿನಯಿಸಿರುವ ಮಲ್ಲು ಬೆಡಗಿ ಮೀರಾ ಜಾಸ್ಮಿನ್ ಇದೀಗ ಅತ್ಯಾಚಾರಿಗಳ ಬಗ್ಗೆ ಖಡಕ್ ಆಗಿ ಮಾತಾಡಿ ಚರ್ಚೆಗೆ ಗ್ರಾಸವಾಗಿದ್ದಾರೆ. ಇಷ್ಟಕ್ಕೂ ಅವರು ಕೊಟ್ಟಿರುವ ಹೇಳಿಕೆಗೆ ಅತ್ಯಾಚಾರಿಗಳು ಬೆಚ್ಚಿಬೀಳುವಂತಾಗಿದೆ. 
 
ರೇಪಿಸ್ಟ್‌ಗಳಿಗೆ ಏನ್ ಶಿಕ್ಷೆ ನೀಡ್ಬೇಕು ಅಂತ ಮೀರಾ ಜಾಸ್ಮಿನ್ ಹೇಳಿರುವುದನ್ನ ಕೇಳಿದರೆ ನೀವು ಖಂಡಿತ ಶಾಕ್ ಆಗ್ತೀರ.  ಕೇರಳದ ಪೆರುಂಬವೂರಿನಲ್ಲಿ ದಳಿತ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಹತ್ಯೆಯಾದ ಮಹಿಳೆಯ ತಾಯಿಯೊಂದಿಗೆ ಮಾಧ್ಯಮಗಳ ಜೊತೆಗೆ ಮೀರಾ ಜಾಸ್ಮಿನ್ ಮಾತನಾಡುತ್ತಿದ್ದರು. 
 
ಮಹಿಳೆಯರ ಮೇಲೆ ಲೈಂಗಿಕ ದಾಳಿ ಮಾಡುತ್ತಿರುವವರಿಗೆ ನೋವಾಗುವಂತ ಶಿಕ್ಷೆಗಳನ್ನು ಕೊಡುವ ಅವಶ್ಯಕತೆ ಇದೆ. ಅಂತವರಿಗೆ ಕ್ಯಾಸ್ಟ್ರೇಷನ್ ಒಂದೇ ಮಾರ್ಗ. ಆ ರೀತಿಯ ನೋವು ಅನುಭವಿಸುವ ಶಿಕ್ಷೆ ವಿಧಿಸಿದರೆ ಮುಂದೆ ಯಾರೂ ಮಹಿಳೆಯರನ್ನ ತಂಟೆಗ ಬರಲ್ಲ" ಎಂದಿರುವುದು ಚರ್ಚೆಯ ವಿಷಯವಾಗಿದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK12: ಬಿಗ್ ಬಾಸ್ ಪ್ರವೇಶಿಸಲಿರುವ 14 ಸ್ಪರ್ಧಿಗಳು ಇವರೇ

ಕಾಂತಾರ ಚಾಪ್ಟರ್ 1 ಟಿಕೆಟ್ ಮೊದಲ ನಾಲ್ಕು ದಿನ ಸಿಗೋದೇ ಡೌಟು

ಕಾಂತಾರ ಚಾಪ್ಟರ್ 1 ಪ್ರಮೋಷನ್ ಇಂದು ಶುರು: ಹೈದರಾಬಾದ್ ನಲ್ಲಿ ಜ್ಯೂ ಎನ್ ಟಿಆರ್ ಸಾಥ್

ಸಿನಿಮಾ ಬದುಕಿನಲ್ಲಿ ವಿಭಿನ್ನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಶ್ರೀಮುರುಳಿ

₹60ಕೋಟಿ ವಂಚನೆ ಪ್ರಕರಣ: ನಾನು ಯಾವುದೇ ತಪ್ಪು ಮಾಡಿಲ್ಲ ಎಂದ ಶಿಲ್ಪಾ ಶೆಟ್ಟಿ ಪತಿ

ಮುಂದಿನ ಸುದ್ದಿ