Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿಯನ್ನು ವಿವಾಹವಾಗಲು ಬಯಸಿದ್ದೆ: ಕರೀನಾ ಕಪೂರ್(ವಿಡಿಯೋ ನೋಡಿ)

ರಾಹುಲ್ ಗಾಂಧಿಯನ್ನು ವಿವಾಹವಾಗಲು ಬಯಸಿದ್ದೆ:  ಕರೀನಾ ಕಪೂರ್(ವಿಡಿಯೋ ನೋಡಿ)
ಮುಂಬೈ , ಶುಕ್ರವಾರ, 22 ಜೂನ್ 2018 (14:30 IST)
ಮುಂಬೈ: ಬಾಲಿವುಡ್ ನ ಬ್ಯೂಟಿ ಕರೀನಾ ಕಪೂರ್, ರಾಹುಲ್ ಗಾಂಧಿಯವರ ಜೊತೆ ಡೇಟಿಂಗ್ ಮಾಡುವ ಇಷ್ಟವಿತ್ತು ಎಂದು ಸಂದರ್ಶನವೊಂದರಲ್ಲಿ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದರು  ಈ ಸುದ್ದಿ ಎಲ್ಲೆಡೆ ವೈರಲ್ ಆಗಿದೆ.


2002 ರಲ್ಲಿ ಸಿಮಿ ಗರೆವಾಲ್ ಅವರ ಟಾಕ್ ಶೋ ‘ರೆಂಡೆಜ್ವಸ್ ವಿತ್ ಸಿಮಿ ಗರೆವಾಲ್’ನಲ್ಲಿ ಕರೀನಾ ಕಪೂರ್ ನಿರೂಪಕಿಯೊಂದಿಗೆ ಮಾತುಕತೆ ನಡೆಸುತ್ತಾ ಆಗ ತಾವು ಸಿಂಗಲ್ ಆಗಿರುವುದಾಗಿ ಹೇಳಿದ್ದರು. ನಾನು ಪ್ರೀತಿಯಲ್ಲಿ ಬೀಳುವ ದಿನಕ್ಕಾಗಿ ಹಾಗೂ ನನ್ನಂತೆಯೇ ಇರುವ ಬಾಳಸಂಗಾತಿಯನ್ನ ಭೇಟಿಯಾಗಲು ಕಾಯುತ್ತಿದ್ದೇನೆ ಎಂದಿದ್ದರು. ನಿರೂಪಕಿ ಸಿಮಿ ಗರೆವಾಲ್ ಅವರು 'ನೀವೀಗ ಯಾರ ಜತೆಗಾದರೂ ಡೇಟಿಂಗ್ ಮಾಡಲು ಬಯಸುತ್ತೀರಾ?' ಎಂದು ಕರೀನಾಗೆ ಪ್ರಶ್ನೆ ಕೇಳಿದ್ದರು.


ಈ ಸಂದರ್ಭದಲ್ಲಿ ಉತ್ತರಿಸಿದ ಕರೀನಾ 'ಇದೊಂದು ವಿವಾದಾತ್ಮಕ ವಿಚಾರ. ಬಹಿರಂಗವಾಗಿ ಹೇಳಬೇಕೋ ತಿಳಿಯುತ್ತಿಲ್ಲ. ಆದರೆ ನನಗೆ ರಾಹುಲ್ ಗಾಂಧಿ ಜತೆ ಡೇಟಿಂಗ್ ಮಾಡಲು ಇಷ್ಟ. ಅವರ ರಾಜಕೀಯ ಜೀವನದ ಕುರಿತಂತೆ ತಿಳಿದುಕೊಳ್ಳಬೇಕೆಂಬ ಕುತೂಹಲವಿದೆ, ದಿನಪತ್ರಿಕೆಯಲ್ಲಿ ಅವರ ಚಿತ್ರಗಳನ್ನು ನೋಡುತ್ತಿದ್ದೆ. ಅವರೊಂದಿಗೆ ಸಂಭಾಷಣೆ ನಡೆಸಲು ಇಷ್ಟಪಡುವೆ ಎಂದು ಹೇಳಿದ್ದರು.


ನನ್ನ ಕುಟುಂಬ ಚಿತ್ರರಂಗದ ಹಿನ್ನೆಲೆ ಹೊಂದಿದೆ ಮತ್ತು ಅವರು ರಾಜಕೀಯದ ಹಿನ್ನೆಲೆಯಿಂದ ಬಂದವರು. ಆದ್ದರಿಂದ ಬಹುಶಃ ನಾವು ಆಸಕ್ತಿದಾಯಕ ಸಂಭಾಷಣೆ ಮಾಡಬಹುದೇನೋ ಎಂದು ಹೇಳಿದ್ದರು.

ಕರೀನಾ ಕಪೂರ್ ಸದ್ಯ ನಟ ಸೈಫ್ ಅಲಿ ಖಾನ್ ಜತೆ ವಿವಾಹವಾಗಿ ಸಂತೋಷವಾಗಿದ್ದಾರೆ. ಈ ದಂಪತಿಗೆ ತೈಮೂರ್ ಅಲಿ ಖಾನ್ ಎಂಬ ಮುದ್ದಾದ ಗಂಡುಮಗುವಿದೆ.  ಅಲ್ಲದೆ ತಮ್ಮ ಮುಂದಿನ ಸಿನಿಮಾ 'ವೀರೆ ದಿ ವೆಡ್ಡಿಂಗ್' ಮೂಲಕ ಕಮ್​ ಬ್ಯಾಕ್ ಮಾಡಲು ತಯಾರಾಗಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ


Share this Story:

Follow Webdunia kannada

ಮುಂದಿನ ಸುದ್ದಿ

‘ಸಂಜು’ ಸಿನಿಮಾದಲ್ಲಿ ತಮ್ಮ ಸೀನ್ ಗಳನ್ನು ಡಿಲೀಟ್ ಮಾಡಿ ಎನ್ನುತ್ತಿದ್ದಾರಂತೆ ಈ ನಟಿ