Select Your Language

Notifications

webdunia
webdunia
webdunia
webdunia

ವಿವಾದದ ಸುಳಿಯಿಂದ ಹೊರಬಂದ ಸೈಫ್ ಅಲಿ ಖಾನ್ ಮಗಳು

ವಿವಾದದ ಸುಳಿಯಿಂದ ಹೊರಬಂದ ಸೈಫ್ ಅಲಿ ಖಾನ್ ಮಗಳು
ಮುಂಬೈ , ಶುಕ್ರವಾರ, 1 ಜೂನ್ 2018 (15:00 IST)
ಮುಂಬೈ : ಎರಡು ಸಿನಿಮಾಕ್ಕೆ ಒಂದೇ ಡೇಟ್ ನೀಡಿ ಪ್ರಕರಣದ ಸುಳಿಯಲ್ಲಿ ಸಿಲುಕಿಕೊಂಡ ನಟ ಸೈಫ್ ಅಲಿ ಖಾನ್ ಅವರ ಮಗಳು ನಟಿ ಸಾರಾ ಅಲಿ ಖಾನ್ ಅವರು ಇದೀಗ ಈ ವಿವಾದದಿಂದ ಸಮಸ್ಯೆಯಿಂದ ಹೊರಬಂದಿದ್ದಾರೆ.


ಹೌದು. ನಟಿ ಸಾರಾ ಅಲಿ ಖಾನ್ ಅವರು ಅಭಿಶೇಕ್ ಕಪೂರ್ ಅವರ ಕೇದಾರನಾಥ ಮತ್ತು ರೋಹಿತ್ ಶೆಟ್ಟಿ ಅವರ ಸಿಂಬಾ ಚಿತ್ರಕ್ಕೆ ಒಂದೇ ಡೇಟ್ ನೀಡಿದ್ದರಿಂದ ಸಾರಾ ಅವರಿಗೆ ಕೇದಾರನಾಥ್ ಸಿನಿಮಾದ ಶೂಟಿಂಗ್ ಗೆ ಪಾಲ್ಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಕೋಪಗೊಂಡ ಕೇದಾರನಾಥ್ ದ ನಿರ್ಮಾಪಕರು ಕೋರ್ಟ್ ಮೊರೆಹೋಗಿದ್ದರು.


ಆದರೆ ಇದೀಗ ಈ ಕೇಸ್ ವಿಚಾರಣೆ ಆಗುವ ಮೊದಲೇ ಕೋರ್ಟ್ ಕಾನೂನಿನ ಹೊರಗಡೆಯೆ ಅಭಿಶೇಕ್ ಹಾಗೂ ರೋಹಿತ್ ಅವರು ಈ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದಾರೆ. ಆ ಪ್ರಕಾರ ಸಾರಾ ಇಲ್ಲದ ಭಾಗದ ಶೂಟಿಂಗ್ ಹಾಗೂ ಚಿತ್ರದ ಕೆಲವೊಂದು ಭಾಗದ ಚಿತ್ರೀಕರಣವನ್ನು ಕೇದಾರನಾಥ ತಂಡ ಮುಗಿಸಲಿದ್ದು, ಈ ನಡುವೆ ಸಿಂಬಾ ಚಿತ್ರತಂಡ ಸಾರಾ ಅವರ ಪಾತ್ರವನ್ನು ಚಿತ್ರೀಕರಿಸಬೇಕಿದೆ. ಒಂದೊಮ್ಮೆ ಅವರು ಕೇದಾರನಾಥದಲ್ಲಿ ಬ್ಯುಸಿಯಾಗಿದ್ದಾಗ, ಸಿಂಬಾ ತಂಡ, ಅವರಿಲ್ಲದ ಇರುವ ಭಾಗದ ಚಿತ್ರೀಕರಣ ಮಾಡುವುದಾಗಿ ನಿರ್ಧರಿಸುವುದರ ಮೂಲಕ ಈ ಸಮಸ್ಯೆ ಬಗೆಹರಿದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್ ಪಿ. ಗೌಡ ಗೆ ಜಾಮೀನು