Publish Date: Sun, 05 Aug 2018 (06:22 IST)
Updated Date: Sun, 05 Aug 2018 (06:29 IST)
ಮುಂಬೈ : ಬಾಲಿವುಡ್ ನಟ ಸಂಜಯ್ ದತ್ ಜೀವನಾಧಾರಿತ ಸಂಜು ಚಿತ್ರದಲ್ಲಿ ಸಂಜಯ್ ದತ್ ಅವರು 308 ಜನ ಯುವತಿಯೊಂದಿಗೆ ಸಂಬಂಧ ಬೆಳೆಸಿದ್ದರು ಎಂದು ಹೇಳಲಾಗಿತ್ತು. ಆದರೆ ಅವರು ಸ್ನೇಹಿತನ ಗರ್ಲ್ ಫ್ರೆಂಡ್ ಜೊತೆಗೂ ಸಂಬಂಧ ಬೆಳೆಸಿದ್ದ ದೃಶ್ಯವನ್ನು ಕೂಡ ಈ ಚಿತ್ರದಲ್ಲಿ ತೋರಿಸಲಾಗಿದೆ.
ಸಂಜು ಚಿತ್ರ ಬಾಕ್ಸ್ ಆಫೀಸ್ ವನ್ನು ಕೊಳ್ಳೆ ಹೊಡೆದಿದ್ದು, 341 ಕೋಟಿ ಗಳಿಕೆ ಕಂಡಿದೆ. ಚಿತ್ರದಲ್ಲಿ ಸಂಜಯ್ ದತ್ (ರಣಬೀರ್ ಕಪೂರ್) ಹಾಗೂ ಸ್ನೇಹಿತ ಕಮಲೇಶ್ (ವಿಕ್ಕಿ) ಸ್ನೇಹವನ್ನು ಅಭಿಮಾನಿಗಳು ತುಂಬಾ ಇಷ್ಟಪಟ್ಟಿದ್ದಾರೆ. ಆದರೆ ಈ ಚಿತ್ರದಲ್ಲಿ ಸ್ನೇಹಿತನ ಗರ್ಲ್ ಫ್ರೆಂಡ್ ಜೊತೆ ಸಂಜು ಸಂಬಂಧ ಬೆಳೆಸಿದ್ದ ದೃಶ್ಯವನ್ನು ತೋರಿಸಲಾಗಿದೆ.
ಈ ದೃಶ್ಯದ ಬಗ್ಗೆ ಸಂಜಯ್ ದತ್ ಸ್ನೇಹಿತ ಪರೇಶ್ ಗಿಲಾನಿ ಸಂದರ್ಶನವೊಂದರಲ್ಲಿ ಮಾತನಾಡಿ,’ ಯಸ್..ಹೀಗೆ ಆಗಿತ್ತು. ನಾನು ಸಿನಿಮಾ ನೋಡುವವರೆಗೂ ಈ ಬಗ್ಗೆ ಯಾವುದೇ ಪ್ರಶ್ನೆಯನ್ನು ಸಂಜಯ್ ಗೆ ಕೇಳಿರಲಿಲ್ಲ. ಚಿತ್ರದಲ್ಲಿ ತೋರಿಸಿದ ದೃಶ್ಯ ನಿಜ. ನಾನೊಬ್ಬ ಹುಡುಗಿಯನ್ನು ಪ್ರೀತಿ ಮಾಡ್ತಿದ್ದೆ ಎಂದು ಹೇಳಿದ್ದಾರೆ.
ಮುಂಬೈ ದಾಳಿ ನಂತ್ರ ಸಂಜಯ್ ದತ್ ಜೊತೆ ಮಾತನಾಡುವುದನ್ನು ಬಿಟ್ಟಿದ್ದೆ. ಭೇಟಿಯಾಗಿ ಮಾತನಾಡುತ್ತಿರಲಿಲ್ಲ. ಫೋನ್ ನಲ್ಲಿ ಮಾತ್ರ ಮಾತನಾಡ್ತಿದ್ದೆ. ಸಂಜಯ್ ಜೈಲಿನಿಂದ ಹೊರಗೆ ಬರುವ ವೇಳೆ ನಾನು ಅಲ್ಲಿಯೇ ಇದ್ದೆ ಎಂದು ಪರೇಶ್ ಹೇಳಿದ್ದಾರೆ.
ಹಾಗೇ ಚಿತ್ರ ನೋಡಿದ ನಂತ್ರ ತುಂಬಾ ಭಾವುಕರಾಗಿದ್ದ ಪರೇಶ್, ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹಾಕಿ, ‘ಸಂಜಯ್ ದತ್ ಸಾಕಷ್ಟು ನೋವನುಭವಿಸಿದ್ದಾರೆ. ಎಂಥ ಕಷ್ಟದಲ್ಲಿಯೂ ನಾವೆಲ್ಲರೂ ಒಂದಾಗಿದ್ದೆವು. ನನ್ನ ಜೀವನದ ಒಂದು ಭಾಗವಾದ ಸಂಜಯ್ ಗೆ ಧನ್ಯವಾದ’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ