Publish Date: Fri, 03 Aug 2018 (15:49 IST)
Updated Date: Fri, 03 Aug 2018 (15:51 IST)
ಮುಂಬೈ : ಮುಲ್ಕ್ ಚಿತ್ರದ ನಿರ್ದೇಶಕ ಅನುಭವ್ ಸಿನ್ಹಾ ಪಾಕಿಸ್ತಾನ ಸೆನ್ಸಾರ್ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು. ಬಾಲಿವುಡ್ ಹಿರಿಯ ನಟ ರಿಷಿಕಪೂರ್ ಮತ್ತು ತಾಪ್ಸಿ ಪನ್ನು ಅಭಿನಯದ ಬಹು ನಿರೀಕ್ಷಿತ ಚಿತ್ರ ಮುಲ್ಕ್ ಗೆ ಪಾಕಿಸ್ತಾನ ಸೆನ್ಸಾರ್ ಮಂಡಳಿ ನಿಷೇದ ಹೇರಿದೆಯಂತೆ. ಈ ವಿಚಾರವನ್ನು ನಿರ್ದೇಶಕ ಅನುಭವ್ ಸಿನ್ಹಾ ಟ್ವೀಟ್ ಮಾಡಿ ತಿಳಿಸುವುದರ ಮೂಲಕ ಅಸಮಾಧಾನವನ್ನು ವ್ಯಕ್ತ ಪಡಿಸಿದ್ದಾರೆ.
‘ಪಾಕಿಸ್ತಾನ ಸೆನ್ಸಾರ್ ಮಂಡಳಿಯ ಕ್ರಮ ಸರಿಯಲ್ಲ, ಅಲ್ಲದೆ ಚಿತ್ರವು ಕೋಮುಸೌಹಾರ್ಧ ಸಂದೇಶವನ್ನು ಹೊಂದಿದೆ, ಆದರೆ ಯಾವ ಕಾರಣಕ್ಕೆ ಚಿತ್ರಕ್ಕೆ ನಿಷೇಧ ಹೇರಲಾಗಿದೆ ಎಂದು ತಿಳಿದು ಬಂದಿಲ್ಲ. ಚಿತ್ರವನ್ನು ಪೂರ್ತಿಯಾಗಿ ನೋಡಿದರೆ ಅವರಿಗೆ ಚಿತ್ರದಲ್ಲಿ ಏನಿದೆ ಎಂಬುದು ಗೊತ್ತಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ. ಹಾಗೆ ಪಾಕಿಸ್ತಾನ ಸೆನ್ಸಾರ್ ಮಂಡಳಿಗೆ ಮತ್ತೆ ಪತ್ರ ಬರೆದು ತಮ್ಮ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ