ಮಧ್ಯಪ್ರದೇಶ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಚಾಕು ಇರಿತ ಪ್ರಕರಣ ಸಂಬಂಧ ಶಂಕಿತ ಆರೋಪಿಯನ್ನು ಮಧ್ಯಪ್ರದೇಶದಲ್ಲಿ ಬಂಧಿಸಲಾಗಿದೆ.
ಶಂಕಿತ ಆರೋಪಿಯನ್ನು ಸಂದೀಪ್, ಅಲಿಯಾಸ್ ಆಕಾಶ್ ಎಂದು ಗುರುತಿಸಲಾಗಿದ್ದು, ದುರ್ಗ್ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿದೆ.
54 ವರ್ಷದ ನಟ ಸೈಫ್ ಅಲಿ ಖಾನ್ ಮನೆಯೊಳಗೆ ನುಗ್ಗಿದ್ದ ಆರೋಪಿ ನಟನ ಕುತ್ತಿಗೆ ಃಆಗೂ ಬೆನ್ನು ಮೇಲೆ ಹಲವು ಬಾರೀ ಹಲ್ಲೆ ಮಾಡಿದ್ದಾನೆ. ನಟನನ್ನು ಆಟೋರಿಕ್ಷಾದಲ್ಲಿ ಲೀಲಾವತಿ ಆಸ್ಪತ್ರೆಗೆ ಕರೆದೊಯ್ದು ಅಲ್ಲಿ ತುರ್ತು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ಐದು ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆಯ ನಂತರ ಅವರ ಬೆನ್ನುಮೂಳೆಯಿಂದ 2.5-ಇಂಚಿನ ಬ್ಲೇಡ್ ಅನ್ನು ತೆಗೆದುಹಾಕಲಾಯಿತು. ಆರು ಬಾರಿ ಇರಿದಿರುವ ಸೈಫ್ ಅಲಿ ಖಾನ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.
ರೈಲ್ವೇ ಸಂರಕ್ಷಣಾ ಪಡೆ (ಆರ್‌ಪಿಎಫ್) ಮೂಲಗಳು ಶಂಕಿತನನ್ನು "ಮುಂಬೈ-ಹೌರಾ ಜ್ಞಾನೇಶ್ವರಿ ಎಕ್ಸ್‌ಪ್ರೆಸ್‌ನಿಂದ ಮುಂಬೈ ಪೊಲೀಸರ ನೇತೃತ್ವದಲ್ಲಿ ಹಿಡಿಯಲಾಗಿದೆ. ಆತನ ಹೆಸರು ಆಕಾಶ್. ಆತನನ್ನು ವಿಚಾರಣೆ ನಡೆಸಲಾಗುತ್ತಿದೆ" ಎಂದು ಹೇಳಿದ್ದಾರೆ.
ಈ ಬಗ್ಗೆ ಮುಂಬೈ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಬಂಧಿತ ವ್ಯಕ್ತಿ ಘಟನೆಯಲ್ಲಿ ಭಾಗಿಯಾಗಿದ್ದಾನೋ ಅಥವಾ ಬೇರೆಯವರೋ ಎಂದು ಖಚಿತಪಡಿಸಿಕೊಳ್ಳಲು ಪೊಲೀಸ್ ತಂಡವು ದುರ್ಗ್‌ಗೆ ತೆರಳುತ್ತಿದೆ ಎಂದು ಮೂಲಗಳು ತಿಳಿಸಿವೆ.