ಟ್ರೋಲ್ ಮಾಡಿದವನ ಬೆವರಿಳಿಸಿದ ನಟ ಅಭಿಷೇಕ್ ಬಚ್ಚನ್

Webdunia
ಶುಕ್ರವಾರ, 20 ಏಪ್ರಿಲ್ 2018 (15:58 IST)
ಮುಂಬೈ : ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮನ್ನು ಟ್ರೋಲ್ ಮಾಡಿದವನಿಗೆ ಖಡಕ್ ಉತ್ತರ ನೀಡಿ ಆತನ ಬೆವರಿಳಿಸಿದ್ದಾರೆ.


ನಟ ಅಭಿಷೇಕ್ ಬಚ್ಚನ್ ಅವರಿಗೆ ವೈಬಿಎನ್ ಎಂಬ ಅಭಿಮಾನಿಯೊಬ್ಬ  ಟ್ವಿಟ್ಟರ್ ನಲ್ಲಿ"ನಿಮ್ಮ ಜೀವನದ ಬಗ್ಗೆ ಬೇಸರ ಮಾಡಿಕೊಳ್ಳಬೇಡಿ. ಅಭಿಷೇಕ್ ಬಚ್ಚನ್ ಈಗಲೂ ತಮ್ಮ ತಂದೆ-ತಾಯಿ ಜೊತೆ ವಾಸಿಸುತ್ತಾರೆ. ಎಲ್ಲರೂ ಹೀಗೆ ಕಲಿಯಿರಿ" ಎಂದು ಟ್ರೋಲ್ ಮಾಡಿದ್ದಾನೆ.


ಇದಕ್ಕೆ  ಪ್ರತಿಕ್ರಿಯಿಸಿದ ಅಭಿಷೇಕ್ ಬಚ್ಚನ್ ಅವರು, "ನನ್ನ ತಂದೆ-ತಾಯಿ ಜೊತೆಯಿರುವುದು ನನಗೆ ಹೆಮ್ಮೆಯ ವಿಷಯ. ಅವರೂ ನನ್ನ ಜೊತೆ ಇರುವುದ್ದಕ್ಕೆ ಹೆಮ್ಮೆ ಪಡುತ್ತಾರೆ. ನೀವು ಇದೇ ರೀತಿಯಾಗಿ ಪೋಷಕರ ಜೊತೆ ಇರಿ. ನಿಮಗೂ ತೃಪ್ತಿ ಆಗುತ್ತದೆ" ಎಂದು ಖಾರವಾಗಿ ಟ್ವೀಟ್ ಮಾಡಿದಲ್ಲದೇ , ಮತ್ತೊಬ್ಬ ಅಭಿಮಾನಿ ನೀವು ಏಕೆ ಎಲ್ಲ ಟ್ರೋಲ್‍ಗಳಿಗೆ ಪ್ರತಿಕ್ರಿಯಿಸುತ್ತಿರಿ ಎಂದು ಕೇಳಿದ್ದಕ್ಕೆ, ಕೆಲವು ಬಾರಿ ಜನರಿಗೆ ಅವರ ನಿಜವಾದ ಜಾಗ ತೋರಿಸಬೇಕಾಗುತ್ತದೆ ಎಂದು ಅಭಿಷೇಕ್ ಬಚ್ಚನ್ ಖಡಕ್ ಆಗಿ ಉತ್ತರಿಸಿದ್ದಾರೆ. ಅಭಿಷೇಕ್ ಅವರ ಪ್ರತಿಕ್ರಿಯೆ ನೋಡಿ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK12: ನಿಮಗೆ ಗೌರವ ಬೇಕು ಅಂದ್ರೆ ಬೇರೆಯವರಿಗೂ ಕೊಡೋದನ್ನು ಕಲಿಯಿರಿ: ಅಶ್ವಿನಿಗೆ ಕಿಚ್ಚ ಸುದೀಪ್ ಕ್ಲಾಸ್ video

ವಿಜಯಲಕ್ಷ್ಮಿ ಟೆಂಪಲ್ ರನ್‌, ಇತ್ತ ಡಿ ಬಾಸ್ ಅಭಿಮಾನಿಗಳಿಗೆ ಗುಡ್‌ನ್ಯೂಸ್

ಕೊನೆಗೂ ಊಹಾಪೋಹಾಗಳಿಗೆ ಅಂತ್ಯ ಹಾಡಿದ ಸೋನಂ ಕಪೂರ್

ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ಮೇಲೆ ಹಲ್ಲೆ: ಸಹಸ್ಪರ್ಧಿ ರಿಷಾ ವಿರುದ್ಧ ಪೊಲೀಸರಿಗೆ ದೂರು

ಡಿಕೆ ಶಿವಕುಮಾರ್ ಭೇಟಿಯಾದ ರಿಷಬ್ ಶೆಟ್ಟಿ: ರಾಹುಲ್ ಗಾಂಧಿ ಬಗ್ಗೆ ನೋ ಕಾಮೆಂಟ್ಸ್ ಎಂದಿದ್ರು ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments