ಮುಂಬೈ: Y+ ವರ್ಗದ ಭದ್ರತೆಯನ್ನು ಹೊಂದಿರುವ ಸಲ್ಮಾನ್ ಖಾನ್ ಅವರನ್ನು ಭೇಟಿಯಾಗಲು ಬಯಸಿದ ಅಭಿಮಾನಿ ಅವರ ಮನೆಗೆ ಪ್ರವೇಶಿಸಲು ಪ್ರಯತ್ನಿಸಿ, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಎರಡು ಪ್ರತ್ಯೇಕ ಘಟನೆಗಳಲ್ಲಿ, ಮುಂಬೈ ಪೊಲೀಸರು ಸಲ್ಮಾನ್ ಖಾನ್ ಅವರ ಹೆಚ್ಚಿನ ಭದ್ರತೆಯ ಬಾಂದ್ರಾ ಮನೆಗೆ ಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ ಮಾಡೆಲ್ ಮತ್ತು ಛತ್ತೀಸ್‌ಗಢದ 23 ವರ್ಷದ ಯುವಕನನ್ನು ಬಂಧಿಸಿದ್ದಾರೆ.
ಇತ್ತೀಚಿನ ಪ್ರಕರಣದಲ್ಲಿ, ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ನಿಯೋಜಿಸಲಾದ ಭದ್ರತಾ ಸಿಬ್ಬಂದಿ ಗುರುವಾರ ಖಾರ್ ಪ್ರದೇಶದಿಂದ ಮಾಡೆಲ್ ಅನ್ನು ಮನೆಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗುವ ಮೊದಲು ಬಂಧಿಸಿದ್ದಾರೆ. ವಿಚಾರಣೆ ವೇಳೆ ಹೇಗಾದರು ನಟನನ್ನು ಭೇಟಿಯಾಗಬೇಕೆಂದು ಮಾಡೆಲ್ ಮನೆಗೆ ನುಗ್ಗಲು ಯತ್ನಿಸಿ, ಸಿಕ್ಕಿಬಿದ್ದಿದ್ದಾರೆ.
ಎರಡನೇ ಘಟನೆಯಲ್ಲಿ, ಮಂಗಳವಾರ ಬೆಳಿಗ್ಗೆ ನಟ ವಾಸವಾಗಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಕಾಂಪೌಂಡ್‌ಗೆ ಪ್ರವೇಶಿಸಿದಾಗ ಭದ್ರತಾ ಸಿಬ್ಬಂದಿ ಮತ್ತೊಬ್ಬ ಅಭಿಮಾನಿ, ಜಿತೇಂದ್ರಕುಮಾರ್ ಹೃದಯಲಾಲ್ ಸಿಂಗ್ ಎಂದು ಗುರುತಿಸಲ್ಪಟ್ಟ ಛತ್ತೀಸ್‌ಗಢದ ವ್ಯಕ್ತಿಯನ್ನು ಹಿಡಿದಿದ್ದಾರೆ.
ವಿಚಾರಣೆಯಲ್ಲಿ, ವ್ಯಕ್ತಿ Y+ ವರ್ಗದ ಭದ್ರತೆಯನ್ನು ಹೊಂದಿರುವ ಸಲ್ಮಾನ್ ಖಾನ್ ಅವರನ್ನು ಭೇಟಿಯಾಗಲು ಬಯಸಿದ್ದರು ಮತ್ತು ಪೊಲೀಸ್ ನಿರ್ಬಂಧಗಳಿಂದಾಗಿ ಕಟ್ಟಡಕ್ಕೆ ನುಸುಳಲು ಪ್ರಯತ್ನಿಸಿದರು ಎಂದು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ತಿಳಿಸಿದೆ.