Select Your Language

Notifications

webdunia
webdunia
webdunia
Tuesday, 8 April 2025
webdunia

ಅಮಿತಾಭ್ ಬಚ್ಚನ್ ಗೆ ನೋಟಿಸ್ ಜಾರಿ ಮಾಡಿದ ದೆಹಲಿ ಬಾರ್ ಕೌನ್ಸಿಲ್. ಕಾರಣವೇನು ಗೊತ್ತಾ?

ಮುಂಬೈ
ಮುಂಬೈ , ಶನಿವಾರ, 3 ನವೆಂಬರ್ 2018 (15:08 IST)
ಮುಂಬೈ : ಜಾಹೀರಾತೊಂದರಲ್ಲಿ ವಕೀಲರ ಉಡುಗೆಗೆ ಅಗೌರವ ತೋರಿದ ಕಾರಣಕ್ಕೆ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರಿಗೆ ದೆಹಲಿ ಬಾರ್ ಕೌನ್ಸಿಲ್ ನೋಟಿಸ್ ಜಾರಿ ಮಾಡಿದೆ.

ಎವರೆಸ್ಟ್ ಮಸಾಲೆ ಜಾಹೀರಾತಿನಲ್ಲಿ ಅಮಿತಾಭ್ ಬಚ್ಚನ್ ಅವರು ವಕೀಲ ಉಡುಪಿನಲ್ಲಿ ಕಾಣಿಸಿಕೊಂಡಿದ್ದರು. ಈ ಮೂಲಕ ಅಮಿತಾಭ್ ಬಚ್ಚನ್ ಅವರು ವಕೀಲ ಉಡುಗೆಗೆ ಅಗೌವರ ಸೂಚಿಸಿದ್ದಾರೆ ಎಂದು ಆರೋಪಿಸಿ ಬಾರ್ ಕೌನ್ಸಿಲ್, ಅಮಿತಾಭ್ ಬಚ್ಚನ್ ಸೇರಿ, ಎವರೆಸ್ಟ್ ಮಸಾಲೆ, ಜಾಹೀರಾತು ಪ್ರಸಾರ ಮಾಡಿದ್ದ ಯೂಟ್ಯೂಬ್ ಹಾಗೂ ಇತರೆ ಮಾಧ್ಯಮಗಳಿಗೆ ನೋಟಿಸ್ ಜಾರಿ ಮಾಡಿದೆ.

 

ಜಾಹೀರಾತು ವೇಳೆ ವಕೀಲ ಉಡುಗೆಗಳನ್ನು ಬಳಸುವುದಕ್ಕೂ ಮುನ್ನ ನೀವು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿಲ್ಲ. ಅಧಿಕಾರ ಮತ್ತು ವಿವೇಚನೆ ಇಲ್ಲದೆಯೇ ಜಾಹೀರಾತು ನಿರ್ಮಿಸಿ, ಅದನ್ನು ಪ್ರಸಾರ ಮಾಡಿರುವ ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಇಂತಹ ಎಲ್ಲಾ ಜಾಹೀರಾತುಗಳಿಗೆ ಸಂಬಂಧಿಸಿದ ಚಟುವಟಿಗಳನ್ನು ಕೂಡಲೇ ನಿಲ್ಲಿಸಬೇಕು. ಬಾರ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ದೇಶದ ಇತರೆ ಎಲ್ಲಾ ವಕೀಲ ಸಂಘಗಳಿಗೆ ಇನ್ನು ಮುಂದೆ ವಕೀಲರ ಉಡುಗೆಗೆ ಅವಗೌರವ ತೋರುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಡಬೇಕು. 10 ದಿನಗಳೊಳಗಾಗಿ ನೋಟಿಸ್'ಗೆ ಉತ್ತರ ನೀಡಬೇಕೆಂದು ನೋಟಿಸ್ ನಲ್ಲಿ ತಿಳಿಸಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ

 


Share this Story:

Follow Webdunia kannada

ಮುಂದಿನ ಸುದ್ದಿ

ಬಂಧನ ಭೀತಿಯಿಂದ ಪಾರಾದ ನಟ ಅರ್ಜುನ್ ಸರ್ಜಾ