Select Your Language

Notifications

webdunia
webdunia
webdunia
webdunia

ನೀವು ಮಾಡುವ ಈ ಕೆಲಸಗಳಿಂದ ದಾರಿದ್ರ್ಯ ಬರಬಹುದು!

ನೀವು ಮಾಡುವ ಈ ಕೆಲಸಗಳಿಂದ ದಾರಿದ್ರ್ಯ ಬರಬಹುದು!
ಬೆಂಗಳೂರು , ಶುಕ್ರವಾರ, 14 ಡಿಸೆಂಬರ್ 2018 (08:53 IST)
ಬೆಂಗಳೂರು: ಎಲ್ಲರೂ ಬಯಸುವುದು ಶ್ರೀಮಂತಿಕೆಯನ್ನು. ಆದರೆ ನಾವು ಮಾಡುವ ಕೆಲವು ತಪ್ಪುಗಳು ನಮ್ಮ ಮನೆಯಲ್ಲಿ ದಾರಿದ್ರ್ಯಕ್ಕೆ ಕಾರಣವಾಗುತ್ತದೆ.


ಜೇಡರ ಬಲೆ
ಮನೆಯ ಮೂಲೆ ಮೂಲೆಗಳಲ್ಲಿ ಜೇಡರ ಬಲೆ ಕಟ್ಟಿದ್ದರೆ ಅದು ದುರಾದೃಷ್ಟಕ್ಕೆ ದಾರಿ ಮಾಡಿದಂತೆ. ಹಾಗಾಗಿ ಮನೆಯನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಿರಿ.

ತಟ್ಟೆಯಲ್ಲಿ ಅನ್ನ ಉಳಿಸುವುದು
ತಟ್ಟೆಯಲ್ಲಿ ಅನ್ನ ಉಳಿಸುವುದು, ಅರ್ಧಕ್ಕೇ ಊಟ ಬಿಟ್ಟು ಏಳುವುದು, ಊಟ ಮಾಡುವಾಗ ಬೇರೆಲ್ಲೋ ಗಮನ ಕೊಡುವುದು, ಜಗಳ ಮಾಡುವುದು ಇತ್ಯಾದಿ ಮಾಡುವುದು ದಾರಿದ್ರ್ಯಕ್ಕೆ ದಾರಿ ಮಾಡಿದಂತೆ.

ಊಟದ ಬಳಿಕ ಹಣ ವ್ಯವಹಾರ
ಹಣಕಾಸಿನ ವ್ಯವಹಾರಗಳು ಏನೇ ಇದ್ದರೂ ರಾತ್ರಿ ಊಟದ ಮೊದಲೇ ಮಾಡಿಕೊಳ್ಳಿ. ಊಟದ ಬಳಿಕ ಹಣ ಕೊಡುವುದು, ಪಡೆಯುವುದು ಇತ್ಯಾದಿ ಮಾಡಿದರೆ ಲಕ್ಷ್ಮೀ ದೇವಿಗೆ ಅವಮಾನ ಮಾಡಿದಂತೆ.

ಹಣದ ಬಗ್ಗೆ ಅಸಡ್ಡೆ
ಮಕ್ಕಳ ಕೈಗೆ ನೋಟು ಅಥವಾ ಕಾಯಿನ್ ಆಡಲು ಕೊಡುವುದು, ಕೆಳಗೆ ಬಿದ್ದಾಗ ತುಳಿಯುವುದು ಇತ್ಯಾದಿ ಮಾಡಿದರೆ ಲಕ್ಷ್ಮೀ ದೇವಿಗೆ ಅಪಮಾನ ಮಾಡಿದಂತೆ.

ಶುಚಿತ್ವವಿಲ್ಲದ ಮನೆ
ಮನೆಯಲ್ಲಿ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಕಿರುವುದು, ಕಸ ಉಳಿಸುವುದು, ಒಟ್ಟಾರೆ ಅಶುಚಿಯಾಗಿಟ್ಟುಕೊಳ್ಳುವುದರಿಂದ ಅಂತಹ ಮನೆಗೆ ಅದೃಷ್ಟ ಲಕ್ಷ್ಮಿ ಕಾಲಿಡಲಾರಳು.

ರಾತ್ರಿ ಗುಡಿಸುವುದು
ರಾತ್ರಿ ವೇಳೆ ಗುಡಿಸುವುದು ದಾರಿದ್ರ್ಯಕ್ಕೆ ಕಾರಣವಾಗುತ್ತದೆ. ಲಕ್ಷ್ಮೀ ದೇವಿ ಮನೆಗೆ ಬರುವ ಹೊತ್ತಿನಲ್ಲಿ ಪೊರಕೆ ಹಿಡಿದು ಗುಡಿಸುತ್ತಿದ್ದರೆ ಏನು ಚೆನ್ನ ಹೇಳಿ?

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ರಾತ್ರಿ ವೇಳೆ ಬೆಡ್ ಸರಿಪಡಿಸುತ್ತೀರಾ? ಹಾಗಿದ್ರೆ ನಿಮಗೆ ಈ ಸಂಕಷ್ಟ ತಪ್ಪದು!