Select Your Language

Notifications

webdunia
webdunia
webdunia
webdunia

ಗಣಪತಿಯ ಮೂವತ್ತೆರಡು ಅವತಾರಗಳ ಬಗ್ಗೆ ಗೊತ್ತಾ?

ಗಣಪತಿಯ ಮೂವತ್ತೆರಡು ಅವತಾರಗಳ ಬಗ್ಗೆ ಗೊತ್ತಾ?
ಬೆಂಗಳೂರು , ಶುಕ್ರವಾರ, 25 ಆಗಸ್ಟ್ 2017 (07:24 IST)
ಬೆಂಗಳೂರು: ಗಣೇಶ ಆದಿ ಪೂಜಿತ ದೇವ. ಲೋಕೋದ್ದಾರಕ್ಕಾಗಿ ಗಣೇಶ 32 ಅವತಾರ ಎತ್ತಿದ್ದಾನೆ. ಅವು ಯಾವುವು ನೋಡೋಣ.

 
ಬಾಲಗಣಪತಿ: ಹೆಸರೇ ಹೇಳುವಂತೆ ಬಾಲ ರೂಪದಲ್ಲಿರುವ ಗಣಪತಿ.
ತರುಣ ಗಣಪತಿ: ತಾರುಣ್ಯವನ್ನು ಪ್ರತಿನಿಧಿಸುವ ರೂಪವಾಗಿದೆ. ಈ ರೂಪದಲ್ಲಿ ಗಣಪನಿಗೆ 8 ಕೈಗಳಿವೆ.
ಭಕ್ತಿ ಗಣಪತಿ: ಸುಗ್ಗಿಯ ಅವಧಿಯಲ್ಲಿ ರೈತರಿಂದ ಪೂಜಿಸಲ್ಪಡುತ್ತಿರುವ ಕೈಯಲ್ಲಿ ಬಾಳೆ ಹಣ್ಣು, ತೆಂಗಿನ ಕಾಯಿ ಹಿಡಿದಿರುವ ರೂಪ.
ವೀರ ಗಣಪತಿ: ವೀರ ಗಣಪತಿಯ ಅವತಾರದಲ್ಲಿ ಗಣಪತಿಗೆ ಆಯುಧಗಳನ್ನು ಹಿಡಿದ 16 ಕೈಗಳು ಇರುತ್ತವೆ.
ಶಕ್ತಿ ಗಣಪತಿ: ಈ ಅವತಾರದಲ್ಲಿ ಸ್ವಾಮಿಯ ಒಬ್ಬ ಪತ್ನಿಯು ಹೂ ಮಾಲೆಯನ್ನು ಹಿಡಿದು ಕುಳಿತಿರುತ್ತಾಳೆ.
ದ್ವಿಜ ಗಣಪತಿ: ದ್ವಿಜ ಎಂದರೆ ಎರಡು ಬಾರಿ ಜನಿಸಿದವನು ಎಂದರ್ಥ. ಈ ಅವತಾರದಲ್ಲಿ ಗಣಪತಿಗೆ 4 ತಲೆಗಳು.
ಸಿದ್ಧಿ ಗಣಪತಿ: ಇವನು ಯಶಸ್ಸು ಮತ್ತು ಸಂಪತ್ತಿಗೆ ಒಡೆಯನು. ಹಳದಿ ಬಣ್ಣದಲ್ಲಿರುತ್ತಾನೆ.
ಉಚ್ಚಿಷ್ಟ ಗಣಪತಿ: ಆರು ಕೈಗಳಲ್ಲಿ ವೀಣೆ, ಮುಂತಾದ ಸಂಗೀತ ವಾದ್ಯ ಹಿಡಿದಿರುತ್ತಾನೆ.
ವಿಘ್ನ ಗಣಪತಿ: ಇವನು ವಿಘ್ನನಾಶಕ.
ಕ್ಷಿಪ್ರ ಗಣಪತಿ: ಕ್ಷಿಪ್ರವಾಗಿ ಕಾರ್ಯಸಿದ್ಧಿಯಾಗಲು ಅನುಗ್ರಹಿಸುವನು.
ಹೇರಂಬ ಗಣಪತಿ: ದೀನರ ಉದ್ದಾರಕ್ಕಾಗಿ ಅವತಾರ ಎತ್ತಿದವನು. 5 ತಲೆಗಳು, ನೆಗೆಯಲು ಸಿದ್ಧವಾಗಿರುವ ಸಿಂಹದ ವಾಹನದ ಮೇಲೆ ಕುಳಿತಿರುತ್ತಾನೆ.
ಲಕ್ಷ್ಮೀ ಗಣಪತಿ: ಲಕ್ಷ್ಮೀ ಮತ್ತು ಗಣಪತಿಯನ್ನು ಸಹೋದರ ಸಹೋದರಿಯರಂತೆ ಕಾಣಲಾಗುತ್ತದೆ. ಐಶ್ವರ್ಯದ ಸಂಕೇತ ಈ ಗಣಪತಿ.
ಮಹಾ ಗಣಪತಿ: ಮಹಾ ಗಣಪತಿ ಎಂಬ ಮಾತೇ ಶ್ರೇಷ್ಠ ಎಂದು ಸೂಚಿಸುತ್ತದೆ. ಶಕ್ತಿಯ ಜತೆ ಕುಳಿತಿರುತ್ತಾನೆ.
ವಿಜಯ ಗಣಪತಿ: ಇವನು ವಿಜಯದ ಸಂಕೇತ.
ನೃತ್ಯ ಗಣಪತಿ: ನೃತ್ಯದ ಭಂಗಿಯಲ್ಲಿರುವ ಗಣಪತಿ.
ಊರ್ಧ್ವ ಗಣಪತಿ: ಊರ್ಧ ಎಂದರೆ ಉದ್ದವಾಗಿ ಇರುವ ಗಣಪತಿ.
ಏಕಾಕ್ಷರ ಗಣಪತಿ: ಹೆಸರೇ ಸೂಚಿಸುವಂತೆ ಒಂದೇ ಅಕ್ಷರದ ಗಣಪತಿ. ಮೂಷಿಕ ವಾಹನನಾಗಿ ಕಾಣುತ್ತಾನೆ.
ವರದ ಗಣಪತಿ: ವರ ಬೇಕಾದರೆ ಈ ಗಣಪತಿಯನ್ನು ಪೂಜಿಸಿ.
ತ್ರಯಾಕ್ಷರ ಗಣಪತಿ: ಕೈಯಲ್ಲಿ ತನ್ನ ಪ್ರೀತಿಯ ಮೋದಕ ಹಿಡಿದು ಆಸ್ವಾದಿಸುತ್ತಿರುತ್ತಾನೆ.
ಕ್ಷಿಪ್ರ ಪ್ರಸಾದ ಗಣಪತಿ: ಇವನು ಕೋರಿಕೆಯನ್ನು ಶೀಘ್ರದಲ್ಲೇ ಪೂರೈಸುವನು.
ಹರಿದ್ರ ಗಣಪತಿ:ಹಳದಿ ಬಣ್ಣದ ರಾಜ ಠೀವಿಯಿಂದ ಕೂಡಿದ ವಸ್ತ್ರ ಧರಿಸಿರುತ್ತಾನೆ.
ಏಕದಂತ ಗಣಪತಿ: ಒಂದೇ ದಂತವನ್ನು ಹೊಂದಿರುತ್ತಾನೆ.
ಸೃಷ್ಟಿ ಗಣಪತಿ: ಸಣ್ಣ ರೂಪದಲ್ಲಿರುತ್ತಾನೆ.
ಉದ್ಧಂಡ ಗಣಪತಿ: ಉದ್ಧಂಡ ಗಣಪತಿ ವಿಶ್ವದಲ್ಲಿ ಧರ್ಮವನ್ನು ಪರಿಪಾಲಿಸುತ್ತಾನೆ.
ಋಣಮೋಚನೆ: ಈ ಗಣಪತಿಯು ಮಾನವ ಕುಲವನ್ನು ಕೀಳರಿಮೆ ಮತ್ತು ಸಾಲಗಳಿಂದ ಮುಕ್ತಗೊಳಿಸುತ್ತಾನೆ.
ದುಂಧಿ ಗಣಪತಿ: ಕೆಂಪು ವರ್ಣದಲ್ಲಿದ್ದು, ರುದ್ರಾಕ್ಷಿ ಹಿಡಿದಿರುತ್ತಾನೆ.
ದ್ವಿಮುಖ ಗಣಪತಿ: ಎರಡು ತಲೆಗಳನ್ನು ಹೊಂದಿದ್ದು ನೀಲಿ ಬಣ್ಣದಲ್ಲಿರುತ್ತಾನೆ.
ತ್ರಿಮುಖ ಗಣಪತಿ: ಮೂರು ತಲೆ, ಕಮಲದ ಹೂವಿನ ಮೇಲೆ ಆಸೀನನಾಗಿರುತ್ತಾನೆ.
ಸಿಂಹ ಗಣಪತಿ: ತಾನು ಕುಳಿತ ಸಿಂಹದಿಂದಾಗಿ ಈ ಹೆಸರು ಪಡೆದಿರುತ್ತಾನೆ.
ಯೋಗ ಗಣಪತಿ: ಯೋಗ ಭಂಗಿಯಲ್ಲಿರುತ್ತಾನೆ
ದುರ್ಗಾ ಗಣಪತಿ: ಈ ಅವತಾರದಲ್ಲಿ ತನ್ನ ಮಾತೆಯಾದ ದುರ್ಗೆಯಿಂದ ಶಕ್ತಿ ಸಂಪಾದಿಸಿರುತ್ತಾನೆ.
ಸಂಕಷ್ಟ ಹರ ಗಣಪತಿ:  ಈ ಅವತಾರವು ಮಾನವ ಕುಲದ ಸಂಕಟಗಳನ್ನು ಪರಿಹರಿಸುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದೇವರಿಗೇಕೆ ದೀಪ ಉರಿಸಿ ನಮಸ್ಕಾರ ಮಾಡಬೇಕು?