Select Your Language

Notifications

webdunia
webdunia
webdunia
webdunia

ಪ್ರತ್ಯೇಕ ಧರ್ಮ: ಒಗ್ಗಟ್ಟಾಗಿ ಬಂದಲ್ಲಿ ಶಿಫಾರಸು ಸಿಎಂ ಸ್ಪಷ್ಟನೆ

ಪ್ರತ್ಯೇಕ ಧರ್ಮ: ಒಗ್ಗಟ್ಟಾಗಿ ಬಂದಲ್ಲಿ ಶಿಫಾರಸು ಸಿಎಂ ಸ್ಪಷ್ಟನೆ
ಬೆಂಗಳೂರು , ಗುರುವಾರ, 10 ಆಗಸ್ಟ್ 2017 (13:13 IST)
ವೀರಶೈವ ಮಹಾಸಭೆ ಮತ್ತು ಲಿಂಗಾಯುತ ಧರ್ಮದವರು ಒಂದಾಗಿ ಬಂದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವೀರಶೈವ- ಲಿಂಗಾಯುತ ಧರ್ಮದಲ್ಲಿ ಒಡುಕು ಉಂಟು ಮಾಡಲು ಪ್ರಯತ್ನಿಸಲಾಗುತ್ತದೆ ಎನ್ನುವ ಆರೋಪಗಳನ್ನು ತಳ್ಳಿಹಾಕಿದ ಅವರು, ಅಂತಹ ಯಾವುದೇ ಕಾರ್ಯಕ್ಕೆ ನಾವು ಕೈ ಹಾಕುವುದಿಲ್ಲ ಎಂದು ತಿಳಿಸಿದ್ದಾರೆ.
 
ಲಿಂಗಾಯುತ ಮತ್ತು ವೀರಶೈವ ಮಹಾಸಭೆಯ ಮುಖಂಡರು ಸಭೆಯ ನಡೆಸುತ್ತಿದ್ದು, ಸಭೆಯ ಅಂತಿಮ ತೀರ್ಮಾನದಂತೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
 
ಸರಕಾರ ಯಾವುದೇ ಧರ್ಮದ ಪರವಾಗಲಿ ಅಥವಾ ವಿರೋಧವಾಗಲಿ ಕಾರ್ಯನಿರ್ವಹಿಸುವುದಿಲ್ಲ. ಅಗತ್ಯಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡು: ಪಳನಿಸ್ವಾಮಿ-ಪನ್ನೀರ್ ಸೆಲ್ವಂ ಬಣ ವಿಲೀನ?