Webdunia - Bharat's app for daily news and videos

Install App

ನೃತ್ಯದಿಂದ ಸುಲಭವಾಗಿ ತೂಕ ಕಳೆದುಕೊಳ್ಳಬಹುದು

Webdunia
ಶನಿವಾರ, 13 ನವೆಂಬರ್ 2021 (13:36 IST)
ನೃತ್ಯ ಎಂದರೆ ಯಾರಿಗೆ ಇಷ್ಟ ಆಗಲ್ಲ ಹೇಳಿ? ನಮ್ಮ ಭಾರತ ದೇಶದಲ್ಲಿ ಹಲವಾರು ಬಗೆಯ ನೃತ್ಯಗಳನ್ನು ಕಾಣಬಹುದು.
ಅದು ಪ್ರಾಂತೀಯ ನೃತ್ಯವಾಗಿರಬಹುದು, ರಾಷ್ಟೀಯ ನೃತ್ಯವೆಂದು ಪ್ರಸಿದ್ಧಿ ಪಡೆದಿರಬಹುದು. ಮ್ಯೂಸಿಕ್ ಆನ್ ಮಾಡಿದರೆ ಸಾಕು, ಚಿಕ್ಕವರಿಂದ ಸಿನಿಯರ್ ಸಿಟಿಜನ್ ಗಳು ಕೂಡ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾರೆ.
ನೃತ್ಯವು ವಿಶ್ರಾಂತಿ ಪಡೆಯಲು ಮತ್ತು ಆನಂದಿಸಲು ಉತ್ತಮವಾದ ಮಾರ್ಗವಾಗಿದ್ದರು ಕೂಡ ಇದು ಇತರ ಹಲವಾರು ಪ್ರಯೋಜನಗಳನ್ನು ಹೊಂದಿದೆ. ನೃತ್ಯವು ವಾಸ್ತವವಾಗಿ ವ್ಯಾಯಾಮ ಮಾಡಲು ಹಾಗು ಕೊಬ್ಬು ಕರಗಿಸಲು ಸಹಾಯಕವಾಗುತ್ತದೆ. ನೃತ್ಯದಿಂದ ಕ್ಯಾಲೋರಿಯನ್ನು ಸುಡಲು ಮತ್ತು ತೂಕ ಇಳಿಸಿಕೊಳ್ಳಲು ಅತ್ಯುತ್ತಮವಾದ ಮಾರ್ಗ ಎಂದೇ ಹೇಳಬಹುದು.
ವ್ಯಾಯಾಮ
ಏರೋಬಿಕ್ ಅಥವಾ ಕಾರ್ಡಿಯೋ ವ್ಯಾಯಾಮದ ರೂಪಗಳು. ನೃತ್ಯವು ಕ್ಯಾಲೋರಿಗಳನ್ನು ಸುಡುವುದರ ಜೊತೆ-ಜೊತೆಗೆ ನಿಮ್ಮ ಸ್ನಾಯುವಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೆಯೇ ದೇಹದ ರಕ್ತದ ಪರಿಚಲನೆಯನ್ನು ಸುಗಮಗೊಳಿಸುತ್ತದೆ. ಒತ್ತಡ ಕಡಿಮೆ ಮಾಡಿ ಉತ್ತಮವಾದ ನಿದ್ರೆ ಬರುವಂತೆ ಮಾಡುತ್ತದೆ. ಮಧುಮೇಹ ಮತ್ತು ಹೃದ್ರೋಗದಂತಹ ಅಪಾಯಕಾರಿ ಪರಿಸ್ಥಿತಿಗಳನ್ನು ಕಡಿಮೆ ಮಾಡುತ್ತದೆ.
ಖಿನ್ನತೆ
ನೃತ್ಯವು ಕೇವಲ ದೈಹಿಕ ಪ್ರಯೋಜನಗಳೇ ಅಲ್ಲದೇ ಮಾನಸಿಕವಾಗಿಯೂ ಅನೇಕ ಪ್ರಯೋಜನಗಳನ್ನು ಹೊಂದಿದೆ. ಮುಖ್ಯವಾಗಿ ಏರೋಬಿಕ್ ವ್ಯಾಯಾಮವು ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ. ಖಿನ್ನತೆಯಂತಹ ಅಪಾಯದಿಂದ ತಪ್ಪಿಸುತ್ತದೆ. ನೃತ್ಯವು ವಿಶೇಷವಾಗಿ ಸಾಮಾಜಿಕ ಚಟುವಟಿಕೆಯಾಗಿದೆ. ನೃತ್ಯ ಒಂದು ಮೋಜಿನ ಚಟುವಟಿಕೆಯಾಗಿದ್ದು, ನಿಮ್ಮ ಮೋಜಿನ ಆಟದ ಜೊತೆಗೆ ನಿಮ್ಮ ತೂಕವನ್ನು ಸುಲಭವಾಗಿ ಇಳಿಕೆ ಮಾಡಬಹುದು.
ವಿವಿಧ ಬಗೆಯ ನೃತ್ಯಗಳು
ವ್ಯಾಯಾಮ ಮತ್ತು ತೂಕ ನಷ್ಟಕ್ಕೆ ಕೆಲವು ಜನಪ್ರಿಯವಾದ ನೃತ್ಯಗಳಿವೆ. ಅವು ಯಾವುವೆಂದರೆ, ಜುಂಬಾ ಡ್ಯಾನ್ಸ್, ಹಿಪ್ ಆಪ್, ಬ್ಯಾಲೆಟ್, ಪೂಲ್ ಡ್ಯಾನ್ಸಿಂಗ್, ಬಾಲ್ ರೂಂ ಡ್ಯಾನ್ಸಿಂಗ್. ಅನೇಕ ಜಿಮ್ಗಳು ಮತ್ತು ಕೆಲವು ಖಾಸಗಿ ಕೇಂದ್ರಗಳು ಎಲ್ಲಾ ಫಿಟ್ ನೆಸ್ ಡ್ಯಾನ್ಸಿಂಗ್ಗಳ ತರಬೇತಿಯನ್ನು ನೀಡುತ್ತದೆ. ಮನೆಯಲ್ಲಿಯೇ ಕ್ಯಾಲೋರಿ ಕಡಿಮೆ ಮಾಡಿಕೊಳ್ಳಲು ಬಯಸುವವರು ನಿಮ್ಮ ನೆಚ್ಚಿನ ಸಂಗೀತದೊಂದಿಗೆ ನೃತ್ಯ ಮಾಡಿ ಸದೃಢವಾದ ಶರೀರವನ್ನು ಪಡೆದುಕೊಳ್ಳಿ.

 

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಜ್ವರ ಬಂದು ನಾಲಿಗೆ ರುಚಿ ಕೆಟ್ಟು ಹೋಗಿದ್ದರೆ ಹೀಗೆ ಮಾಡಿ

ಮೈಗ್ರೇನ್ ತಲೆನೋವಿದ್ದರೆ ಈ ಆಹಾರಗಳಿಂದ ದೂರವಿರಿ

ದಪ್ಪಗಿರುವ ಸೊಂಟ ತೆಳ್ಳಗಾಗಿಸಲು ಈ ಯೋಗಾಸನ ಮಾಡಿ

ಮಲೇರಿಯಾ ಜ್ವರ ತಡೆಗಟ್ಟಲು ಇಲ್ಲಿದೆ ಉಪಾಯ

ಸಿಹಿ ತಿಂದ ತಕ್ಷಣ ಹುಳಿ ಸೇವಿಸಬಾರದು ಯಾಕೆ

ಮುಂದಿನ ಸುದ್ದಿ
Show comments