Select Your Language

Notifications

webdunia
webdunia
webdunia
webdunia

ನೋಡಲು ಫಿಟ್ ಆಗಿ ಕಾಣುವವರ ರಹಸ್ಯ!

ನೋಡಲು ಫಿಟ್ ಆಗಿ ಕಾಣುವವರ ರಹಸ್ಯ!
ಮೈಸೂರು , ಸೋಮವಾರ, 8 ನವೆಂಬರ್ 2021 (10:56 IST)
ಜೀವನ ಶೈಲಿ ಹಾಗೂ ಆಹಾರ ಅಭ್ಯಾಸವನ್ನು ಅವರು ಪ್ರತಿದಿನ ಪಾಲಿಸುತ್ತಾರೆ.
ಹಾಗಾದರೆ ಅಂತಹ ರಹಸ್ಯ ಏನಿರಬಹುದು ಎಂದು ನೀವು ತಿಳಿದುಕೊಳ್ಳಲು ಪ್ರಯತ್ನಿಸಿದ ಪಕ್ಷದಲ್ಲಿ ಈ ಲೇಖನದಲ್ಲಿ ಅದಕ್ಕೆ ಉತ್ತರವಿದೆ.
ಧ್ಯಾನ
ಬೆಳಗಿನ ಸಮಯದಲ್ಲಿ ಧ್ಯಾನಮಾಡುತ್ತಾ ಸ್ವಲ್ಪ ಸಮಯ ಕಳೆದರೆ ನಿಮ್ಮ ಮನಸ್ಸು ಏಕಾಗ್ರತೆಯಿಂದ ಕೂಡಿರುತ್ತದೆ ಮತ್ತು ದೈಹಿಕ ಸದೃಡತೆ ಕೂಡ ಹೆಚ್ಚಾಗುತ್ತದೆ. ನಿಮ್ಮ ನರಮಂಡಲ ವ್ಯವಸ್ಥೆ ಇದರಿಂದ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುತ್ತದೆ.
ಉತ್ತಮ ಉಸಿರಾಟ ಪ್ರಕ್ರಿಯೆಯ ಕಾರಣದಿಂದ ನಿಮ್ಮ ಶ್ವಾಸಕೋಶದ ಆರೋಗ್ಯ ಕೂಡ ಬಲಗೊಳ್ಳುತ್ತದೆ. ಅತ್ಯುತ್ತಮವಾದ ಆರೋಗ್ಯವನ್ನು ಮತ್ತು ಯಾವಾಗಲೂ ಹೊಸ ಹುರುಪು ಮತ್ತು ಚೈತನ್ಯವನ್ನು ಹೊಂದಲು ಬೆಳಗಿನ ಸಮಯದಲ್ಲಿ ಧ್ಯಾನ ಮಾಡುವುದು ತುಂಬಾ ಅವಶ್ಯಕವಾಗಿದೆ.
ರಾತ್ರಿಯ ಸಮಯದಲ್ಲಿ ನಿದ್ರಾಹೀನತೆ ಸಮಸ್ಯೆಯಿಂದ ಬಳಲುವಂತೆ ಆಗಲು ಇದು ಕೂಡ ಒಂದು ಪ್ರಮುಖ ಕಾರಣ ಎಂದು ಹೇಳಬಹುದು. ಇನ್ನು ಇದರ ಜೊತೆಗೆ ಬೆಳಗಿನ ಸಮಯದಲ್ಲಿ ಎದ್ದ ತಕ್ಷಣ ಮೊಬೈಲ್ ನಲ್ಲಿ ಬಂದಿರುವ ಸಂದೇಶಗಳನ್ನು ಅಥವಾ ಇಮೇಲ್ಗಳನ್ನು ನೋಡುವುದು ಕೂಡ ತಪ್ಪು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಏಕೆಂದರೆ ಸಂದೇಶಗಳಲ್ಲಿ ಒಳ್ಳೆಯದು ಅಥವಾ ಕೆಟ್ಟದು ಯಾವುದು ಬೇಕಾದರೂ ಬಂದಿರಬಹುದು. ಇದು ನಮ್ಮ ಮಾನಸಿಕ ಒತ್ತಡವನ್ನು ಮತ್ತು ಇಡೀ ದಿನದ ನೆಮ್ಮದಿಯನ್ನು ಕಸಿದುಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ವ್ಯಾಯಾಮ
ದೇಹಕ್ಕೆ ನಾವು ಯಾವಾಗ ವ್ಯಾಯಾಮವನ್ನು ಒದಗಿಸುತ್ತೇವೆ ಅಥವಾ ಕಸರತ್ತು ಮಾಡಲು ಮುಂದಾಗುತ್ತೇವೆ ಆ ಸಂದರ್ಭದಲ್ಲಿ ನಮ್ಮ ಮೆದುಳಿನ ನರಮಂಡಲಗಳು ಶಾಂತಗೊಳ್ಳುತ್ತವೆ.
ಇವುಗಳು ಮಾನಸಿಕವಾಗಿ ನಮ್ಮ ಆರೋಗ್ಯವನ್ನು ಹೆಚ್ಚು ಮಾಡುವುದು ಮಾತ್ರವಲ್ಲದೆ ಹೃದಯ ರಕ್ತನಾಳಗಳ ಆರೋಗ್ಯಕ್ಕೆ ಕೂಡ ಉತ್ತಮ ಆರೋಗ್ಯಕರ ಅನುಭವ ಉಂಟುಮಾಡುತ್ತದೆ.
ಇದು ನಮ್ಮ ಮಾನಸಿಕ ಅಭಿವೃದ್ಧಿಯಲ್ಲಿ ಹೆಚ್ಚು ನೆರವಾಗುವುದು ಮಾತ್ರವಲ್ಲದೆ, ದೈಹಿಕ ಸದೃಢತೆಯಲ್ಲಿ ಮತ್ತು ನಮ್ಮ ಸೌಂದರ್ಯದಲ್ಲಿ ಕೂಡ ಅಗತ್ಯವಾಗಿ ಸಹಾಯಮಾಡುತ್ತದೆ.
ಸ್ನಾನ
ಬೆಳಗಿನ ಸಮಯದಲ್ಲಿ ಪ್ರತಿದಿನ ಎಲ್ಲರೂ ಸ್ನಾನ ಮಾಡುವುದು ಮಾಮೂಲಿ. ಆದರೆ ಸ್ನಾನ ಮಾಡುವ ನೀರಿಗೆ ಒಂದೆರಡು ಹನಿಗಳು ಎಸೆನ್ಶಿಯಲ್ ಆಯಿಲ್ ಮಿಶ್ರಣ ಮಾಡಿ ಸ್ನಾನ ಮಾಡುವುದು ತುಂಬಾ ಒಳ್ಳೆಯದು.
ಇದು ಮಾನಸಿಕ ಚೈತನ್ಯವನ್ನು ಹೆಚ್ಚು ಮಾಡುತ್ತದೆ ಮತ್ತು ವಿವಿಧ ಬಗೆಯ ಸಕಾರಾತ್ಮಕ ಆಲೋಚನೆಗಳನ್ನು ನೀಡಿ ನೀವು ಹೆಚ್ಚು ಆತ್ಮವಿಶ್ವಾಸದಿಂದ ಇರುವಂತೆ ಮಾಡುತ್ತದೆ. ಜ್ಞಾಪಕ ಶಕ್ತಿ ಹೆಚ್ಚಾಗಲು ಕೂಡ ಇದೊಂದು ಕಾರಣ ಎಂದು ಹೇಳಬಹುದು.
ಉಪಹಾರ ಸೇವನೆ
ಬೆಳಗಿನ ಸಮಯದಲ್ಲಿ ಆರೋಗ್ಯಕರವಾದ ಉಪಹಾರ ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಅತ್ಯುತ್ತಮವಾಗಿ ನಿರ್ವಹಣೆಯಾಗುತ್ತದೆ. ಸಾಮಾನ್ಯವಾಗಿ ಬೆಳಗಿನ ಸಮಯದಲ್ಲಿ ನಾವು ಸೇವನೆ ಮಾಡುವ ಯಾವುದೇ ಆರೋಗ್ಯಕರವಾದ ಆಹಾರ ನಮ್ಮ ಇಡೀ ದಿನದ ಕಾರ್ಯ ಚಟುವಟಿಕೆಯ ಮೇಲೆ ಉತ್ತಮ ಪ್ರಭಾವ ಬೀರುತ್ತದೆ.
ನಮ್ಮ ದೇಹಕ್ಕೆ ಹೆಚ್ಚು ಶಕ್ತಿ ಮತ್ತು ಚೈತನ್ಯವನ್ನು ನೀಡುವ ಜೊತೆಗೆ ಮಾನಸಿಕ ಹಾಗೂ ದೈಹಿಕ ಸದೃಢತೆಯಲ್ಲಿ ಕೂಡ ಇದರ ಪಾತ್ರ ತುಂಬಾ ದೊಡ್ಡದಾಗಿರುತ್ತದೆ. ಹಾಗಾಗಿ ಸಾಧ್ಯವಾದಷ್ಟು ಬೆಳಗಿನ ಸಮಯದಲ್ಲಿ ಸಂಸ್ಕರಿಸದೆ ಇರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡಿ. ತರಕಾರಿ ಹಣ್ಣು ಇತ್ಯಾದಿಗಳಿಗೆ ಹೆಚ್ಚಿನ ಆದ್ಯತೆ ನೀಡಿ.


Share this Story:

Follow Webdunia kannada

ಮುಂದಿನ ಸುದ್ದಿ

ಜೀರ್ಣಕ್ರಿಯೆ ಸಮಸ್ಯೆಗೆ ಕಲ್ಲು ಸಕ್ಕರೆ ಬೆಸ್ಟ್!