Select Your Language

Notifications

webdunia
webdunia
webdunia
webdunia

ಸಂಡೇ ಸ್ಪೆಷಲ್! ರುಚಿಕರವಾದ ಫಿಶ್ ರೆಸಿಪಿ

ಸಂಡೇ ಸ್ಪೆಷಲ್! ರುಚಿಕರವಾದ ಫಿಶ್ ರೆಸಿಪಿ
ಬೆಂಗಳೂರು , ಭಾನುವಾರ, 7 ನವೆಂಬರ್ 2021 (13:35 IST)
ಪ್ರಕೃತಿ ಕೊಟ್ಟಿರುವ ಅತ್ಯುತ್ತಮ ಆಹಾರ ಮೀನು ವಿಟಮಿನ್, ಖನಿಜ ಮತ್ತು ಉತ್ತಮ ಕೊಬ್ಬಿನ ಅಂಶಗಳನ್ನು ಒಳಗೊಂಡಿರುತ್ತದೆ.
ಆರೋಗ್ಯಕ್ಕೂ ತುಂಬಾ ಉಪಯುಕ್ತವಾದ ಆಹಾರವಾಘಿದೆ.
ಪ್ರಕೃತಿ ಕೊಟ್ಟಿರುವ ಅತ್ಯುತ್ತಮ ಆಹಾರ ಮೀನು ವಿಟಮಿನ್, ಖನಿಜ ಮತ್ತು ಉತ್ತಮ ಕೊಬ್ಬಿನ ಆಗರವಾಗಿದೆ. ಹೃದಯ ಮತ್ತು ಚರ್ಮದ ಆರೋಗ್ಯವನ್ನು ವರ್ಧಿಸುವ ಮೀನಿನಲ್ಲೂಹಲವಾರು ವಿಧಗಳಿವೆ. ಆಯಾ ಮೀನು ತನ್ನದೇ ಆದ ಆರೋಗ್ಯ ಪ್ರಯೋಜನವನ್ನು ಹೊಂದಿದೆ.
ರೊಹು : ಒರಟು ಸಿಪ್ಪೆಯಿರುವ ರೊಹು ಮೀನಿನಲ್ಲಿಪ್ರೋಟೀನ್, ಒಮೆಗಾ 3 ಫ್ಯಾಟಿ ಆಸಿಡ್ಸ್, ವಿಟಮಿನ್ ಎ, ಬಿ ಮತ್ತು ಸಿ ಅಧಿಕ ಪ್ರಮಾಣದಲ್ಲಿವೆ. ವಾರಕ್ಕೆ ಕನಿಷ್ಠ ಒಂದು ಬಾರಿ ಈ ಮೀನಿನ ಸೇವನೆ ಒಳ್ಳೆಯದು.
ರಾಣಿ : ನಸು ಗುಲಾಬಿ ಬಣ್ಣದ ಈ ಮೀನು ಸಪ್ಪೆ ರುಚಿ ಹೊಂದಿದೆ. ಅತ್ಯಂತ ಕಡಿಮೆ ಅಂದರೆ 4 ರಿಂದ 5 ಶೇ. ಮಾತ್ರ ಕೊಬ್ಬು ಹೊಂದಿರುವ ರಾಣಿ ಮೀನು ದೇಹ ತೂಕ ಇಳಿಸಿಕೊಳ್ಳುವವರಿಗೆ ಉತ್ತಮ.
ಸುರ್ಮೈ : ಕಿಂಗ್ ಫಿಶ್ ಎಂದೂ ಕರೆಯಲ್ಪಡುವ ಈ ಮೀನಿನಲ್ಲಿಪ್ರೋಟೀನ್, ವಿಟಮಿನ್ ಮತ್ತು ಖನಿಜಾಂಶ ಅಧಿಕ ಪ್ರಮಾಣದಲ್ಲಿವೆ. ಪಾದರಸದ ಪ್ರಮಾಣ ಸ್ವಲ್ಪ ಹೆಚ್ಚಿರುವ ಈ ಮೀನನ್ನು ಕೂಡ ವಾರದಲ್ಲಿಒಂದು ದಿನ ಸೇವಿಸಿದರೆ ಬೆಸ್ಟ್. ಆದರೆ ಆ ವಾರ ಬೇರೆ ಮೀನನ್ನು ತಿನ್ನಬೇಡಿ.
ರವಾಸ್ : ಸ್ನಾಯುಗಳ ಆರೋಗ್ಯ ಹೆಚ್ಚಿಸುವ ರವಾಸ್ ಮೀನು ದೇಹದ ಚಯಾಪಚಯ ಕ್ರಿಯೆಗೆ ನೆರವಾಗಿ ದೇಹ ತೂಕವನ್ನು ಕಡಿಮೆಗೊಳಿಸುತ್ತದೆ. ಒಮೆಗಾ 3 ಮತ್ತು ಫ್ಯಾಟಿ ಆ್ಯಸಿಡ್ ಕೂಡ ಇದರಲ್ಲಿಹೆಚ್ಚಿನ ಪ್ರಮಾಣದಲ್ಲಿವೆ. ವಾರಕ್ಕೆ ಒಂದು ಬಾರಿ ಈ ಮೀನನ್ನು ಮಿತ ಪ್ರಮಾಣದಲ್ಲಿಸೇವಿಸಿ.
ಕಟ್ಲಾ : ನದಿ ಮತ್ತು ಕೆರೆಗಳಲ್ಲಿಹೆಚ್ಚು ಸಿಗುವ ಈ ಮೀನು ಪ್ರೋಟೀನ್ ಮತ್ತು ವಿಟಮಿನ್ಗಳ ಆಗರವಾಗಿದೆ. ಅತ್ಯಂತ ರುಚಿಯಾಗಿರುವ ಈ ಮೀನು ಕಡಿಮೆ ಕ್ಯಾಲೊರಿ ಹೊಂದಿದ್ದು, ದೇಹ ತೂಕ ಇಳಿಸಿಕೊಳ್ಳುವವರಿಗೆ ಬೆಸ್ಟ್.
ಪಾಂಫ್ರೆಟ್ : ಅತ್ಯಂತ ಮೃದು ಮತ್ತು ರುಚಿಯಾಗಿರುವ ಈ ಮೀನು ಪ್ರೋಟೀನ್ ಮತ್ತು ಒಮೆಗಾ 3 ಫ್ಯಾಟಿ ಆ್ಯಸಿಡ್ನ ಮೂಲವಾಗಿದ್ದು, ಇದರಲ್ಲಿಸಿಲ್ವರ್ ಪಾಂಫ್ರೆಟ್ ಮತ್ತು ಬ್ಲ್ಯಾಕ್ ಪಾಂಫ್ರೆಟ್ ಎಂಬ ವಿಧಗಳಿವೆ.
ಹಿಲ್ಸಾ : ಪಶ್ಚಿಮ ಬಂಗಾಳದಲ್ಲಿಅತ್ಯಂತ ಜನಪ್ರಿಯ ಮೀನಾಗಿರುವ ಇದು ಭಾರತದಲ್ಲೇ ಅತ್ಯಂತ ದುಬಾರಿ ಬೆಲೆಯ ಫಿಶ್ ಆಗಿದೆ. ಒಂದು ಕೆ.ಜಿ ಹಿಲ್ಸಾ ಮೀನು ಸುಮಾರು ಮೂರು ಸಾವಿರ ರೂಪಾಯಿ ಬೆಲೆಬಾಳುತ್ತದೆ.
ಬಂಗುಡೆ : ಈ ಮೀನಿನಲ್ಲಿಸೆಲೇನಿಯಂ ಅಧಿಕ ಪ್ರಮಾಣದಲ್ಲಿದ್ದು, ಇದು ಹೃದಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕಡಿಮೆ ರಕ್ತದೊತ್ತಡ ಇರುವವರಿಗೆ ಅತ್ಯುತ್ತಮವಾಗಿ ಪರಿಣಿಸಿರುವ ಇದು ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ರಕ್ತದಲ್ಲಿರುವ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ. ಕಡಿಮೆ ಬೆಲೆಗೆ ಸಿಗುವ ಇದು ದೇಹ ತೂಕ ಇಳಿಸಿಕೊಳ್ಳುವವರಿಗೂ ಬೆಸ್ಟ್. ಪಾದರಸದ ಪ್ರಮಾಣ ಕಡಿಮೆಯಿರುವ ಈ ಮೀನನ್ನು ಯಾರು ಕೂಡ ತಿನ್ನಬಹುದು.
ಬೂತಾಯಿ : ಪ್ರೋಟೀನ್, ವಿಟಮಿನ್ ಮತ್ತು ಖನಿಜಗಳ ಪ್ರಮಾಣ ಅಧಿಕವಿರುವ ಈ ಮೀನಿನ ಸೇವನೆಯಿಂದ ಮೂಳೆಗಳು ಸದೃಢಗೊಳ್ಳುತ್ತವೆ ಮತ್ತು ಒತ್ತಡ ಕಡಿಮೆಯಾಗುತ್ತದೆ.
ಮುಗುಡು : ಸಿಂಘಾರ ಎಂದೂ ಕರೆಯಲ್ಪಡುವ ಈ ಮೀನಿನಲ್ಲಿಪಾದರಸ ಕಡಿಮೆ ಪ್ರಮಾಣದಲ್ಲಿದ್ದು, ಪ್ರೋಟೀನ್ ಹೆಚ್ಚಿನ ಪ್ರಮಾಣದಲ್ಲಿದೆ. ಕೊಬ್ಬು, ಒಮೆಗಾ 3 ಮತ್ತು ಒಮೆಗಾ 6 ಫ್ಯಾಟಿ ಆ್ಯಸಿಡ್ ಕೂಡ ಇದರಲ್ಲಿಯಥೇಚ್ಛವಾಗಿವೆ.


Share this Story:

Follow Webdunia kannada

ಮುಂದಿನ ಸುದ್ದಿ

ಮುಖದಲ್ಲಿನ ಗುರುತು ಮಾಯವಾಗಿಸುವುದು ಹೇಗೆ ತಿಳಿಯಿರಿ!?