ಸದ್ಯಕ್ಕೆ ಮಾರುಕಟ್ಟೆಯಲ್ಲಿ ಹಲವಾರು ಉತ್ಪನ್ನಗಳು ನಮಗೆ ದೊರೆಯುತ್ತವೆ. ಪ್ರತಿಯೊಂದು ಉತ್ಪನ್ನವು ಒಂದೇ ರೀತಿಯ ಚರ್ಮಕ್ಕೆ ಹೊಂದಿಕೆಯಾಗುವುದಿಲ್ಲ.
ಹಾಗೆಯೇ ನಮ್ಮ ತ್ವಚೆಯ ಆರೈಕೆಯಲ್ಲಿ ಕ್ಲೆನ್ಸರ್ ಬಹಳ ಮುಖ್ಯವಾಗುತ್ತದೆ. ನಾವು ಸಾಮಾನ್ಯವಾಗಿ ಮನೆಯಲ್ಲಿ ಹಲವಾರು ಪದಾರ್ಥಗಳನ್ನು ಬಳಸಿ ಕ್ಲೆನ್ಸರ್ ಮಾಡಬಹುದು. ಆದರೆ ಮನೆಯಲ್ಲಿರುವ ಕೆಲವೊಂದು ಪದಾರ್ಥಗಳನ್ನು ಹಾಗೆಯೇ ತ್ವಚೆಗೆ ಬಳಕೆ ಮಾಡುವುದರಿಂದ ತ್ವಚೆಯ ಅಂದ ಹೆಚ್ಚಾಗುತ್ತದೆ.ನಿಮ್ಮ ಚರ್ಮಕ್ಕೆ ಬೇಕಾಗುವ ನೈಸರ್ಗಿಕವಾದ ಕ್ಲೆನ್ಸರ್ಗಳ ಲಿಸ್ಟ್ ಇಲ್ಲಿದೆ.
ಹಾಲು
ಹಾಲು ನಿಮ್ಮ ಮೂಳೆಗಳಿಗೆ ಕ್ಯಾಲ್ಸಿಯಂ ನೀಡುವುದಲ್ಲದೆ, ಇದು ಕ್ಲೆನ್ಸರ್ ಆಗಿ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಹಾಲು ಕ್ಲಾಸಿಕ್ ಕ್ಲೆನ್ಸರ್ ಆಗಿದ್ದು ಅದು ಚರ್ಮವನ್ನು ತುಂಬಾ ಸುಂದರವಾಗಿ ಕಾಣುವಂತೆ ಮಾಡುತ್ತದೆ. ಹಾಲಿನಲ್ಲಿರುವ ಲ್ಯಾಕ್ಟಿಕ್ ಆಮ್ಲವು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅಲ್ಲದೆ, ಹಾಲಿನ ಪ್ರೋಟೀನ್ಗಳು ಮತ್ತು ಕೊಬ್ಬು ಚರ್ಮವನ್ನು ತೇವಗೊಳಿಸುತ್ತದೆ. ಕೆನೆ ತೆಗೆದ ಹಾಲನ್ನು ಬಳಸಬೇಡಿ. ಬದಲಿಗೆ ಸಂಪೂರ್ಣ ಕೆನೆ ತುಂಬಿದ ಹಾಲನ್ನು ಆರಿಸಿಕೊಳ್ಳಿ. ಸ್ವಲ್ಪ ಪ್ರಮಾಣದ ಹಾಲನ್ನು ನಿಮ್ಮ ಅಂಗೈಗೆ ಹಾಕಿಕೊಳ್ಳಿಮತ್ತು ಅದನ್ನು ನಿಮ್ಮ ಚರ್ಮಕ್ಕೆ ನಿಧಾನವಾಗಿ ಮಸಾಜ್ ಮಾಡಿ.
ಜೇನುತುಪ್ಪ
ಜೇನುತುಪ್ಪವನ್ನು ನಿಮ್ಮ ಮುಖಕ್ಕೆ ಕ್ಲೆನ್ಸರ್ ಆಗಿ ಬಳಸಲು, ಅರ್ಧ ಟೀಚಮಚ ಜೇನುತುಪ್ಪವನ್ನು ತೆಗೆದುಕೊಂಡು ಅದನ್ನು ನಿಮ್ಮ ಚರ್ಮಕ್ಕೆ ನಿಧಾನವಾಗಿ ಮಸಾಜ್ ಮಾಡಿ. ನಂತರ ಬೆಚ್ಚಗಿನ ನೀರಿನಿಂದ ಅದನ್ನು ತೊಳೆಯಿರಿ, ಇದು ಚರ್ಮವನ್ನು ಮೃದುಗೊಳಿಸುತ್ತದೆ ಹಾಗೂ ಎಣ್ಣೆಗಳನ್ನು ಹೊರಹಾಕುತ್ತದೆ.
ನಿಂಬೆಹಣ್ಣು
ನೀವು ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ, ನಿಮ್ಮ ಚರ್ಮದ ಪ್ರಕಾರಕ್ಕೆ ನಿಂಬೆ ಅತ್ಯುತ್ತಮ ಕ್ಲೆನ್ಸರ್ ಎನ್ನಲಾಗುತ್ತದೆ. ನಿಮ್ಮ ಚರ್ಮದ ಹೆಚ್ಚು ಟ್ಯಾನ್ ಆಗಿದ್ದರೆ ಆಗ ನಿಂಬೆ ಸಹ ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಮುಖವನ್ನು ಸ್ವಚ್ಛಗೊಳಿಸಲು ನಿಂಬೆಯನ್ನು ಬಳಸುವುದು ಉತ್ತಮ.
ಸೌತೆಕಾಯಿ
ಸೌತೆಕಾಯಿಯ ರಸ ಅಥವಾ ಅದರ ತಿರುಳನ್ನು ನಿಮ್ಮ ಮುಖದ ಮೇಲೆ ಬಳಸುವುದರಿಂದ ಸೌತೆಕಾಯಿಯ ತಂಪಾಗಿಸುವ ಮತ್ತು ಆರ್ಧ್ರಕ ಗುಣಲಕ್ಷಣಗಳಿಂದಾಗಿ ನಿಮ್ಮ ಚರ್ಮವು ಮೃದುವಾಗಿರುತ್ತದೆ.