Select Your Language

Notifications

webdunia
webdunia
webdunia
webdunia

ಪುರುಷರೇ ಗಾಯಗಳಾಗದಂತೆ ಶೇವಿಂಗ್ ಮಾಡಬೇಕೆ...? ಇಲ್ಲಿದೆ ನೋಡಿ ಟಿಪ್ಸ್

ಪುರುಷರೇ ಗಾಯಗಳಾಗದಂತೆ ಶೇವಿಂಗ್ ಮಾಡಬೇಕೆ...? ಇಲ್ಲಿದೆ ನೋಡಿ ಟಿಪ್ಸ್
ಬೆಂಗಳೂರು , ಸೋಮವಾರ, 12 ಫೆಬ್ರವರಿ 2018 (07:06 IST)
ಬೆಂಗಳೂರು : ಪುರುಷರು ಶೇವಿಂಗ್ ಮಾಡುವಾಗ ಕುತ್ತಿಗೆ ಭಾಗದಲ್ಲಿ ರೇಜರ್‌ನಿಂದ ಕೆಲವು ಗಾಯಗಳಾಗುತ್ತವೆ ಹಾಗೆ ಶೇವಿಂಗ್ ನಂತರ ಚರ್ಮ ಕೂಡ ಉರಿಯುತ್ತದೆ. ಹಾಗೂ ಉದ್ದ ಕೂದಲು ಕ್ರಮೇಣ ಗುಂಗುರಾಗಿ ಹಿಮ್ಮುಖಕ್ಕೆ ಹೋಗುತ್ತವೆ. ಬಳಿಕ ಇದು ಚರ್ಮಕ್ಕೆ ಸ್ಪರ್ಶಿಸಿ ನೋವನ್ನುಂಟು ಮಾಡುತ್ತದೆ. ಇದನ್ನು ತಡೆಯಲು ಇಲ್ಲಿದೆ ಟಿಪ್ಸ್.


*ಶೇವಿಂಗ್ ಮಾಡುವ ಮೊದಲು ಬಿಸಿ ನೀರಿನಲ್ಲಿ ಶವರ್ ಬಾತ್ ಮಾಡಿ. ಬಿಸಿ ಮತ್ತು ತೇವಾಂಶವು ಮುಖದ ಕೂದಲನ್ನು ಮೃದುವಾಗಿಸುತ್ತದೆ ಮತ್ತು ಚರ್ಮದ ರಂಧ್ರಗಳನ್ನು ತೆರೆಯುತ್ತವೆ. ಇದರಿಂದ ರೇಜರ್ ಬಳಸುವಾಗ ಯಾವುದೇ ಗಾಯಗಳಾಗುವುದಿಲ್ಲ.

 
* ಶೇವಿಂಗ್ ಮಾಡುವ ಮೊದಲು ಕುತ್ತಿಗೆಗೆ ಶೇವಿಂಗ್ ಜೆಲ್ ಬಳಸಿ. ಇದು ರೇಜರ್‌ನ ಬ್ಲೇಡ್‌ಗಳನ್ನು ನಯಗೊಳಿಸುತ್ತದೆ. ಈ ಪರಿಣಾಮ ಕೂದಲಿನ ಎಳೆಗಳು ಘರ್ಷಣೆಯಾಗುವುದು ಅಥವಾ ಹಿಮ್ಮುಖವಾಗಿ ಗುಂಗುರಾಗುವುದು ಕಡಿಮೆಯಾಗುತ್ತದೆ. ಕ್ರೀಮ್‌ಗಳನ್ನು ಬಳಸುವುದಕ್ಕಿಂತ ಜೆಲ್ ಬಳಕೆ ಉತ್ತಮ.

 
* ಸಾಧ್ಯವಾದರೆ ರಾತ್ರಿ ವೇಳೆ ಶೇವಿಂಗ್ ಮಾಡಿ. ಈ ಸಂದರ್ಭದಲ್ಲಿ  ನಿಮ್ಮ ಕುತ್ತಿಗೆಗೆ ಗ್ಲೈಕೊಲಿಕ್ ಆಸಿಡ್ ಹಚ್ಚಿ. ಇದು ಚರ್ಮವನ್ನು ಚೆನ್ನಾಗಿ ಎಕ್ಸ್‌ಫಾಲಿಯೇಟ್ ಮಾಡುತ್ತದೆ ಮತ್ತು ರೇಜರ್‌ನಿಂದ ಗಾಯಗಳಾದಂತೆ ತಡೆಯುತ್ತದೆ.


ಟೆಟ್ರಾಸೈಕ್ಲಿನ್‌ಗಳಿರುವ ಗುಳಿಗೆಗಳು ಶೇವಿಂಗ್ ಮಾಡಿದ ಉಂಟಾಗುವ ಉರಿಯನ್ನು ಕಡಿಮೆಗೊಳಿಸುತ್ತವೆ. ಇದು ಗಾಯವನ್ನು ವಾಸಿ ಮಾಡುವುದರ ಜೊತೆಗೆ ಚರ್ಮಕ್ಕೂ ಹೊಸ ಕಳೆ ನೀಡುತ್ತದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಪ ಸುತ್ತು ವೈರಸ್ ಸೋಂಕಿಗೆ ಇಲ್ಲಿದೆ ಮನೆಮದ್ದು