Publish Date: Sun, 19 May 2019 (07:03 IST)
Updated Date: Sun, 19 May 2019 (07:05 IST)
ಬೆಂಗಳೂರು : ಯಾವುದೇ ಸಭೆ ಸಮಾರಂಭಕ್ಕೆ ಹೋಗುವಾಗ ಹುಡುಗಿಯರು ಕೈಅಂದವಾಗಿ ಕಾಣಲಿ ಎಂದು ಬೆರಳುಗಳಿಗೆ ನೈಲ್ ಪಾಲಿಶ್ ಹಚ್ಚುತ್ತಾರೆ. ಈ ನೈಲ್ ಪಾಲಿಶ್ ಬೇಗ ಒಣಬೇಕೆಂದರೆ ಅದಕ್ಕೆ ಒಂದು ಉಪಾಯ ಇಲ್ಲಿದೆ.
ಬೆರಳುಗಳಿಗೆ ನೈಲ್ ಪಾಲಿಶ್ ಹಚ್ಚಲು ಹೆಚ್ಚು ಸಮಯ ಬೇಡ. ಆದರೆ ಅದು ಒಣಗಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಒಂದು ವೇಳೆ ಅದು ಒಣಗಲು ಬಿಡದಿದ್ದರೆ ಹಚ್ಚಿದ ಪಾಲಿಶ್ ಹಾಳಾಗುತ್ತದೆ. ಇದರಿಂದ ನಿಮಗೆ ಬೇಸರವಾಗಬಹುದು. ಆದ್ದರಿಂದ ನೀವು ಹಚ್ಚಿದ ನೈಲ್ ಪಾಲಿಶ್ ಬೇಗ ಒಣಬೇಕೆಂದರೆ ಈ ಟ್ರಿಕ್ಸ್ ಬಳಸಿ.
ನೈಲ್ ಪಾಲಿಶ್ ಹಚ್ಚಿದ ಬಳಿಕ ಒಂದು ಬೌಲ್ ಅಲ್ಲಿ ನೀರು ಮತ್ತು ಐಸ್ ಕ್ಯೂಬ್ಸ್ ಅನ್ನು ಹಾಕಿ. ನಂತರ ನಿಮ್ಮ ಬೆರಳುಗಳನ್ನು ಅವುಗಳಲ್ಲಿ ಅದ್ದಿ. ತಣ್ಣೀರು ನಿಮ್ಮ ಉಗುರುಗಳ ಮೇಲಿನ ನೈಲ್ ಪಾಲಿಶ್ ಬೇಗ ಒಣಗುವಂತೆ ಮಾಡುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.