Select Your Language

Notifications

webdunia
webdunia
webdunia
webdunia

ಕೂದಲು ಬೇಗನೇ ಬಿಳಿಯಾಗುವುದು ಈ ವಿಟಮಿನ್ ಕೊರತೆಯ ಲಕ್ಷಣ

Hair

Krishnaveni K

ಬೆಂಗಳೂರು , ಶನಿವಾರ, 30 ಮಾರ್ಚ್ 2024 (12:06 IST)
ಬೆಂಗಳೂರು: ಕೆಲವರಿಗೆ ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗುವ ಸಮಸ್ಯೆಯಾಗುತ್ತದೆ. ಇದರಿಂದ ಡೈ ಹಾಕಿಕೊಂಡು ಓಡಾಡುವ ಪರಿಸ್ಥಿತಿಯಾಗುತ್ತದೆ.

ಸಾಮಾನ್ಯವಾಗಿ ಮಧ‍್ಯವಯಸ್ಸಿಗೆ ಬಂದಾಗ ಕೂದಲು ಬೆಳ್ಳಗಾಗುವುದು ಸಹಜ. ಆದರೆ ಕೆಲವರಿಗೆ ಟೀನೇಜ್ ನಲ್ಲೇ ಕೂದಲು ಬೆಳ್ಳಗಾಗುತ್ತದೆ. ಇದರಿಂದ ಹಲವು ಮುಜುಗರ ಅನುಭವಿಸಬೇಕಾಗುತ್ತದೆ. ಅದರಲ್ಲೂ ಅವಿವಾಹಿತರಿಗೆ ಕೂದಲು ಬೆಳ್ಳಗಾದರೆ ಚಿಂತೆ ಹೆಚ್ಚಾಗುತ್ತದೆ!

ಕೆಲವರಿಗೆ ಕೂದಲು ಬೇಗನೇ ಬಿಳಿಯಾಗುವುದು ವಂಶವಾಹಿಯಾಗಿರುತ್ತದೆ. ಆದರೆ ಹೆಚ್ಚಿನವರಿಗೆ ಕೂದಲು ಬೇಗನೇ ಬೆಳ್ಳಗಾಗಲು ಕೆಲವೊಂದು ಪೋಷಕಾಂಶಗಳ ಕೊರತೆ ಕಾರಣವಾಗಿತ್ತದೆ. ಕೂದಲು ಬೆಳ್ಳಗಾಗಲು ಪ್ರಮುಖವಾಗಿ ಕಾರಣವಾಗುವ ವಿಟಮಿನ್ ಕೊರತೆಗಳು ಯಾವುವು ನೋಡೋಣ.

ತಲೆ ಸ್ನಾನ ಮಾಡುವ ನೀರಿನಲ್ಲಿ ಲವಣದ ಅಂಶ ಹೆಚ್ಚಾಗಿದ್ದರೆ ಕೂದಲು ಬೇಗನೇ ಬೆಳ್ಳಗಾಗುವುದಲ್ಲದೆ, ಗಡುಸಾಗುವುದು, ಕೂದಲು ಉದುರುವ ಸಮಸ್ಯೆ ಎದುರಿಸಬೇಕಾಗುತ್ತದೆ. ವಿಟಮಿನ್ ಬಿ9, ವಿಟಮಿನ್ ಬಿ12, ಬಯೋಟಿನ್ ಮತ್ತು ವಿಟಮಿನ್ ಡಿ ಕೊರತೆಯಿಂದ ಕೂದಲು ಬೇಗನೇ ಬೆಳ್ಳಗಾಗುವ ಸಮಸ್ಯೆ ಎದುರಿಸುತ್ತೀರಿ. ಹೀಗಾಗಿ ಆಹಾರದಲ್ಲಿ ಈ ಪೋಷಕಾಂಶಗಳಿರುವ ಆಹಾರಗಳನ್ನು ಒಳಗೊಂಡಂತೆ ಆಹಾರ ಸೇವಿಸುವುದು ಮುಖ್ಯವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೃದ್ರೋಗಿಗಳು ಡೈರಿ ಉತ್ಪನ್ನ ಸೇವಿಸಬಹುದೇ