Select Your Language

Notifications

webdunia
webdunia
webdunia
webdunia

ಅವಧಿ ಮೀರಿದ ಮೇಕಪ್ ಉತ್ಪನ್ನ ಹಚ್ಚಿದರೆ ಅಡ್ಡಪರಿಣಾಮಗಳೇನು ನೋಡಿ

Beauty tips

Krishnaveni K

ಬೆಂಗಳೂರು , ಶುಕ್ರವಾರ, 22 ಮಾರ್ಚ್ 2024 (09:00 IST)
ಬೆಂಗಳೂರು: ದುಬಾರಿ ಮೇಕಪ್ ಸಾಧನಗಳನ್ನು ಅವಧಿ ಮೀರಿತು ಎಂದು ಬಿಸಾಕಲು ಮನಸ್ಸಾಗದೇ ಬಳಸಿಕೊಳ‍್ಳುವವರು ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳುವುದು ತುಂಬಾ ಮುಖ್ಯ.

ಅವಧಿ ಮೀರಿದ ಮೇಕಪ್ ಉತ್ಪನ್ನಗಳನ್ನು ಮುಖಕ್ಕೆ ಅಥವಾ ಚರ್ಮಕ್ಕೆ ಹಚ್ಚಿಕೊಳ್ಳುವುದರಿಂದ ಹಲವಾರು ಅಡ್ಡಪರಿಣಾಮಗಳಾಗುತ್ತವೆ. ಇದು ನಿಮ್ಮ ದೇಹಕ್ಕೆ ಗಂಭೀರ ಅಪಾಯವನ್ನುಂಟು ಮಾಡಲೂ ಬಹುದು ಎಂದು ತಜ್ಞರೇ ಎಚ್ಚರಿಕೆ ನೀಡುತ್ತಾರೆ. ಅವಧಿ ಮೀರಿದ ಮೇಕಪ್ ಸಾಧನ ಬಳಸುವುದರಿಂದ ಆಗುವ ಅಪಾಯಗಳೇನು ನೋಡೋಣ.

ಅವಧಿ ಮೀರಿದ ಕ್ರೀಂ ಅಥವಾ ಫೇಸ್ ಪ್ಯಾಕ್ ನ್ನು ಬಳಸುವುದರಿಂದ ಕಣ್ಣಿಗೆ ಹಾನಿ ಅಥವಾ ಉರಿಯಾಗುವ ಸಾಧ್ಯತೆಯಿದೆ. ಮುಖದಲ್ಲಿ ಸಣ್ಣ ಗುಳ್ಳೆಗಳು ಕಂಡುಬಂದು ಅಲರ್ಜಿ ಉಂಟುಮಾಡಬಹುದು.  ಅಲ್ಲದೆ ರಾಸಾಯನಿಕ ಸಂಯೋಜನೆಯಾಗುವುದರಿಂದ ತುರಿಕೆ ಕಂಡುಬರಬಹುದು.

ಕೆಲವೊಮ್ಮೆ ತುರಿಕೆ ಹೆಚ್ಚಾಗಿ ಮುಖ ಊದಿಕೊಳ್ಳುವ ಪರಿಸ್ಥಿತಿ ಎದುರಾದೀತು. ಅದರಲ್ಲೂ ಅವಧಿ ಮೀರಿದ ಮಸ್ಕರಾ, ಐಲೈನರ್ ಬಳಕೆಯಿಂದ ಕಣ‍್ಣಿನ ಅಲರ್ಜಿ ಉಂಟಾಗಬಹುದು. ಅಲ್ಲದೆ ದೀರ್ಘ ಕಾಲದ ಚರ್ಮದ ಸಮಸ್ಯೆಗಳಿಗೂ ಕಾರಣವಾಗಬಹುದು. ಹೀಗಾಗಿ ಯಾವುದೇ ಕಾರಣಕ್ಕೂ ಅವಧಿ ಮೀರಿದ ಮೇಕಪ್ ಸಾಧನಗಳನ್ನು ಬಳಸುವ ದುಸ್ಸಾಹಸ ಮಾಡಬೇಡಿ.

Share this Story:

Follow Webdunia kannada

ಮುಂದಿನ ಸುದ್ದಿ

ದಕ್ಷಿಣ ಭಾರತದ ಈ 5 ಚಟ್ನಿಗಳ ರುಚಿ ಅದ್ಭುತ