Select Your Language

Notifications

webdunia
webdunia
webdunia
webdunia

ಮುಖದಲ್ಲಿ ಸೊಳ್ಳೆ ಕಡಿತದ ಕಲೆ ಕಾಣದಂತೆ ಮಾಡಲು ಹೀಗೆ ಮಾಡಿ

Mosquito

Krishnaveni K

ಬೆಂಗಳೂರು , ಮಂಗಳವಾರ, 12 ಮಾರ್ಚ್ 2024 (12:17 IST)
ಬೆಂಗಳೂರು: ಬೇಸಿಗೆಗಾಲ ಬಂತೆಂದರೆ ಸೊಳ್ಳೆ ಕಾಟವೂ ಜಾಸ್ತಿಯಾಗುತ್ತದೆ. ರಾತ್ರಿ ವೇಳೆ ಮಲಗಿದ್ದಾಗ ಮುಖದ ಮೇಲೆ ಸೊಳ್ಳೆ ಕಚ್ಚಿ ಕಲೆಯಾದರೆ ಕೆಲವೊಮ್ಮೆ ಬೇಗನೇ ವಾಸಿಯಾಗುವುದೇ ಇಲ್ಲ. ಹಾಗಿದ್ದರೆ ಸೊಳ್ಳೆ ಕಚ್ಚಿನ ಕಲೆ ಮಾಯವಾಗಬೇಕೆಂದರೆ ಏನು ಮಾಡಬೇಕು?

ಸೊಳ್ಳೆ ಕಚ್ಚಿದ ಗಾಯ ಹೆಚ್ಚಾಗಿ ಮಕ್ಕಳಲ್ಲಿ ಬೇಗನೇ ವಾಸಿಯಾಗುವುದಿಲ್ಲ. ಅವರ ಮೃದು ಚರ್ಮದ ಮೇಲೆ ಕೆಂಪನೆಯ ಗುಳ್ಳೆಯ ರೀತಿ ಕಲೆ ಹಾಗೆಯೇ ಉಳಿಯುತ್ತದೆ. ಇದರಿಂದ ನೋಡಲೂ ಅಸಹ್ಯವಾಗಿ ಕಾಣುತ್ತದೆ. ಕೆಲವೊಮ್ಮೆ ಇದರ ತುರಿಕೆ ಹೆಚ್ಚಾಗಿ ಅಲರ್ಜಿಯಂತಾಗಬಹುದು.

ಇದಕ್ಕಾಗಿ ಜೇನು ತುಪ್ಪ ಬಳಸಿ ಸಿಂಪಲ್ ರೆಸಿಪಿಯೊಂದನ್ನು ಮಾಡಿಕೊಳ್ಳಬಹುದು. ಇದಕ್ಕೆ ಬೇಕಾಗಿರುವುದು ಜೇನು ತುಪ್ಪ ಮಾತ್ರ. ಸೊಳ್ಳೆ ಕಚ್ಚಿದ ಜಾಗಕ್ಕೆ ಜೇನು ತುಪ್ಪದ ಒಂದು ಹನಿ ಹಚ್ಚಿ. ಇದು ಉರಿಯೂತವಾಗದಂತೆ ತಡೆಯುತ್ತದೆ. ಅಲ್ಲದೆ, ಸೊಳ್ಳೆ ಕಚ್ಚಿದ ಜಾಗದಲ್ಲಿ ಆಗಾಗ ತುರಿಕೆಯಾಗುವುದೂ ತಪ್ಪಿಸುತ್ತದೆ.

ಸೊಳ್ಳೆ ಕಚ್ಚಿದ ಜಾಗದಲ್ಲಿ ಪದೇ ಪದೇ ತುರಿಸುತ್ತಿದ್ದರೆ ಅಲರ್ಜಿಗೆ ಕಾರಣವಾಗಬಹುದು. ಜೇನು ತುಪ್ಪ ಇಲ್ಲದೇ ಹೋದರೆ ಆ ಜಾಗಕ್ಕೆ ಐಸ್ ಕ್ಯೂಬ್ ಬಳಸಿ ಮೃದುವಾಗಿ ಉಜ್ಜಿಕೊಳ್ಳಬಹುದು. ಇದರಿಂದ ಉರಿಯೂ ಕಡಿಮೆಯಾಗುತ್ತದೆ. ಈ ಎರಡು ಸಿಂಪಲ್ ಟ್ರಿಕ್ ಮಾಡಿ ನೋಡಿ.

Share this Story:

Follow Webdunia kannada

ಮುಂದಿನ ಸುದ್ದಿ

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ಯೋಗ ಸಹಾಯಕ