Webdunia - Bharat's app for daily news and videos

Install App

ನಿಮ್ಮ ಮುಖಕ್ಕೆ ತಕ್ಕಂತೆ ಫೇಸ್‍ಪಾಕ್ ಮಾಡುವುದು ಹೇಗೆ ತಿಳಿಯಿರಿ?

Webdunia
ಬುಧವಾರ, 3 ನವೆಂಬರ್ 2021 (09:43 IST)
ಕಲಿಯುಗ ಒಂದು ರೀತಿಯ ಸೌಂದರ್ಯದ ಜಗತ್ತು ಎಲ್ಲರೂ ಅಂದವಾಗಿ ಕಾಣಬೇಕು ಎಂದು ಬಯಸುತ್ತಾರೆ.
ಎಷ್ಟೋ ಕಂಪನಿಗಳ ಜಾಹೀರಾತುಗಳು ಮುಖಕ್ಕೆ ಅಚ್ಚುವ ಚೂರ್ಣಗಳನ್ನು ಬಿಡುಗಡೆ ಮಾಡಿವೆ, ಆದರೆ ಇವುಗಳು ಆರೋಗ್ಯ ಮತ್ತು ಚರ್ಮಕ್ಕೆ ಒಳ್ಳೆಯದಲ್ಲ ಹಾಗಾಗಿ ನೈಸರ್ಗಿಕವಾದ ವಸ್ತುಗಳನ್ನು ಬಳಸಿ ಮುಖದ ಕಾಂತಿ ಹೆಚ್ಚಿಸಬಹುದು ಇದರಿಂದ ಯಾವುದೇ ರೀತಿಯ ಸೈಡ್ ಎಫೆಸ್ಟ್ ಆಗುವುದಿಲ್ಲ.
ಎಲ್ಲರ ಮುಖದ ಚರ್ಮ ಒಂದೇ ರೀತಿ ಇರದ ಕಾರಣ ಬೇರೆ ಬೇರೆ ರೀತಿ ಚರ್ಮಕ್ಕೆ ಫೇಸ್‍ಪಾಕ್ ಕೂಡ ಬೇರೆ ಆಗಿರುತ್ತದೆ.
ಶುಷ್ಕ ಚರ್ಮಕ್ಕೆ ಪಪ್ಪಾಯಿ ಫೇಸ್ ಪ್ಯಾಕ್
ಪಪ್ಪಾಯಿ ಹಣ್ಣು ಆರ್ಧ್ರಕ ಅಂಶವನ್ನು ಹೊಂದಿದೆ. ಶುಷ್ಕ ಚರ್ಮದವರಿಗೆ ಪಪ್ಪಾಯಿ ಫೇಸ್ ಪ್ಯಾಕ್ ಅನೇಕ ಚರ್ಮ ಸಮಸ್ಯೆಗಳನ್ನು ಗುಣಪಡಿಸುತ್ತದೆ. ಮುಖ್ಯವಾಗಿ ಜೇನುತುಪ್ಪವನ್ನು ಸೇರಿಸಿದ ಪಪ್ಪಾಯಿ ಫೇಸ್ ಪ್ಯಾಕ್ ಧರಿಸುವುದರಿಂದ ಒಡೆದ ಹಾಗು ಕೆರಳಿದ ಚರ್ಮಕ್ಕೆ ಚಿಕಿತ್ಸೆ ನೀಡುತ್ತದೆ. ಇದು ರಂಧ್ರಗಳನ್ನು ಮುಚ್ಚುವುದಲ್ಲದೇ, ಮೃದುವಾದ ಚರ್ಮವಾಗಿಸುತ್ತದೆ. ಜೇನು ತುಪ್ಪದ ಬದಲಾಗಿ ಮೊಸರನ್ನು ಕೂಡ ಬಳಸಬಹುದು.
ಪ್ಯಾಕ್ ತಯಾರಿಸುವ ವಿಧಾನ

ಕೆಲವು ಪಪ್ಪಾಯಿ ಚೂರುಗಳನ್ನು ಚೆನ್ನಾಗಿ ಕಿವುಚಿ, ಅದಕ್ಕೆ ಮೊಸರು ಅಥವಾ ಜೇನುತುಪ್ಪವನ್ನು ಸೇರಿಸಿ ಮಿಶ್ರಣವನ್ನು ತಯಾರಿಸಿಕೊಳ್ಳಿ, ಈ ಮಿಶ್ರಣವನ್ನು ನಿಮ್ಮ ತ್ವಚೆಯ ಮೇಲೆ ಹಚ್ಚಿ, ನಂತರ ನೀರಿನಿಂದ ತ್ವಚೆಯನ್ನು ತೊಳೆಯಿರಿ.
ಮೊಡವೆ ಪೀಡಿತ ಚರ್ಮಕ್ಕೆ ಪಪ್ಪಾಯಿ ಫೇಸ್ ಪ್ಯಾಕ್

ನಿಮ್ಮ ಚರ್ಮವು ಬಿರುಕುಗಳಿಂದ ಹಾಗು ಮೊಡವೆಗಳಿಂದ ಕೂಡಿದ್ದರೆ, ಅಂತವರು ತಪ್ಪದೇ ಪಪ್ಪಾಯಿ ಫೇಸ್ ಪ್ಯಾಕ್ ಬಳಸಿ. ಈ ಫೇಸ್ ಪ್ಯಾಕ್ ನಲ್ಲಿ ಮೊಟ್ಟೆಯ ಬಿಳಿಭಾಗವನ್ನು ಬಳಸಿ. ಇದು ರಂಧ್ರಗಳನ್ನು ಬಿಗಿಗೊಳಿಸುವುದಲ್ಲದೇ, ಮೊಡವೆಗಳನ್ನು ಹೋಗಲಾಡಿಸುತ್ತದೆ. ಮುಖ್ಯವಾಗಿ ಇದರಲ್ಲಿರುವ ವಿಟಮಿನ್ ಗಳು ಹಾಗು ಅಮೈನೋ ಆಮ್ಲಗಳು ಮೊಡವೆ ಪೀಡಿತ ಚರ್ಮಕ್ಕೆ ಅತ್ಯುತ್ತಮವಾಗಿದೆ.
ಪ್ಯಾಕ್ ತಯಾರಿಸುವ ವಿಧಾನ
ಹಿಸುಕಿದ ಪಪ್ಪಾಯಿಗೆ ಮೊಟ್ಟೆಯ ಬಿಳಿಭಾಗವನ್ನು ಸೇರಿಸಿ, ಮಿಶ್ರಣವನ್ನು ತಯಾರಿಸಿಕೊಳ್ಳಿ. ಈ ಮಿಶ್ರಣವನ್ನು ತ್ವಚೆಯ ಮೇಲೆ ಹಚ್ಚಿ ೧೫ ನಿಮಿಷಗಳ ಕಾಲ ಬಿಡಿ. ನಂತರ ಸ್ವಚ್ಛವಾದ ನೀರಿನಿಂದ ತೊಳೆಯಿರಿ. ವಾರಕ್ಕೊಮ್ಮೆ ಪುನರಾವರ್ತಿಸಿ.
ನಾರ್ಮಲ್ ಸ್ಕಿನ್ ಗೆ ಪಪ್ಪಾಯಿ ಫೇಸ್ ಪ್ಯಾಕ್
ಸಾಮಾನ್ಯ ಅಥವಾ ನಾರ್ಮಲ್ ಸ್ಕಿನ್ ಹೊಂದಿರುವವರಿಗೆ ಪಪ್ಪಾಯಿ ಫೇಸ್ ಪ್ಯಾಕ್ ಉತ್ತಮವಾದ ಬಣ್ಣ ನೀಡುತ್ತದೆ. ಕಳೆಗುಂದಿದ ಚರ್ಮಕ್ಕೆ ಇದೊಂದು ಅದ್ಭುತವಾದ ಚಿಕಿತ್ಸೆಯನ್ನು ನೀಡುತ್ತದೆ. ಸೂಕ್ಷ್ಮವಾದ ತ್ವಚೆಗೆ ಯಾವುದೇ ರೀತಿಯ ಕಿರಿಕಿರಿ ಉಂಟು ಮಾಡದೇ, ಸುಂದರವಾದ ತ್ವಚೆಯನ್ನು ನೀಡಲು ಪಪ್ಪಾಯಿ ಸಹಕಾರಿಯಾಗಿದೆ. ಮುಖ್ಯವಾಗಿ ಈ ಫೇಸ್ ಪ್ಯಾಕ್ ನಿಮ್ಮ ತ್ವಚೆಗೆ ತಾಜಾ ಅನುಭೂತಿಯನ್ನು ಉಂಟು ಮಾಡುತ್ತದೆ.
ಪ್ಯಾಕ್ ತಯಾರಿಸುವ ವಿಧಾನ
ಕಿವುಚಿದ ಪಪ್ಪಾಯಿಗೆ ಸೌತೆಕಾಯಿಯ ರಸವನ್ನು ಮಿಶ್ರಣ ಮಾಡಿ, ನಿಮ್ಮ ತ್ವಚೆ ಹಾಗು ಕುತ್ತಿಗೆಗೆ ಹಚ್ಚಿ. ೧೫ ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಹೀಗೆ ಮಾಡುವುದರಿಂದ ನಿಮ್ಮ ಚರ್ಮವು ರೇಷ್ಮೆಯಂತೆ ಕಂಗೊಳಿಸುವುದು.

 

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments