ಆರೆಂಜ್ ಸಿಪ್ಪೆಯ ಫೇಸ್ ಪ್ಯಾಕ್ ಮಾಡುವುದು ಹೇಗೆ? ಉಪಯೋಗಗಳೇನು?

Krishnaveni K
ಶನಿವಾರ, 6 ಜನವರಿ 2024 (11:41 IST)
Photo Courtesy: facebook
ಬೆಂಗಳೂರು: ಚಳಿಗಾಲದಲ್ಲಿ ಒಣಚರ್ಮದಿಂದ ಮುಕ್ತಿ ಪಡೆದು ಹೊಳೆಯುವ ಮತ್ತು ಕಾಂತಿಯುತ ಚರ್ಮ ನಿಮ್ಮದಾಗಬೇಕಾದರೆ ಆರೆಂಜ್ ಸಿಪ್ಪೆಯ ಫೇಸ್ ಪ್ಯಾಕ್ ರಾಮಬಾಣ.

ಸಾಮಾನ್ಯವಾಗಿ ಆರೆಂಜ್ ಹಣ್ಣು ಸೇವಿಸಿದ ಬಳಿಕ ಅದರ ಸಿಪ್ಪೆಯನ್ನು ಬಿಸಾಕಿಬಿಡುತ್ತೇವೆ. ಆದರೆ ಅದರ ಸಿಪ್ಪೆಯಿಂದ ಮಾಡುವ ಫೇಸ್ ಪ್ಯಾಕ್ ನ್ಯಾಚುರಲ್ ಆಗಿ ನಮ್ಮ ಚರ್ಮದ ಕಾಂತಿ ವೃದ್ಧಿಸಬಹುದು.

ಇದಕ್ಕಾಗಿ ಮಾಡಬೇಕಿರುವುದು ಇಷ್ಟೇ. ಆರೆಂಜ್ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ ಪುಡಿ ಮಾಡಿಕೊಳ್ಳಿ. ಇದಕ್ಕೆ ಕೊಂಚ ಮೊಸರು ಅಥವಾ ಜೇನು ತುಪ್ಪ ಸೇರಿಸಿ ಪೇಸ್ಟ್ ರೀತಿ ಮಾಡಿಕೊಂಡು ಮುಖಕ್ಕೆ ಹಚ್ಚಿ. 15 ನಿಮಿಷಗಳ ಬಳಿಕ ಮುಖವನ್ನು ಶುದ್ಧ ನೀರಿನಿಂದ ತೊಳೆದುಕೊಳ್ಳಿ.

ಈ ರೀತಿ ನಿಯಮಿತವಾಗಿ ಮಾಡುತ್ತಿದ್ದರೆ ನಿಮ್ಮ ಚರ್ಮ ಹೊಳೆಯುವುದು ಮಾತ್ರವಲ್ಲ, ಮುಖದಲ್ಲಿರುವ ಕಪ್ಪು ಕಲೆಗಳೂ ನಾಶವಾಗುತ್ತದೆ. ಜೊತೆಗೆ ಹೆಚ್ಚು ಖರ್ಚು ವೆಚ್ಚವಿಲ್ಲದೇ ನ್ಯಾಚುರಲ್ ಆಗಿ ಮನೆಯಲ್ಲಿಯೇ ಮಾಡಬಹುದಾದ ಫೇಸ್ ಪ್ಯಾಕ್ ಇದಾಗಿದೆ. ಮಾಡಿ ನೋಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮೆಹೆಂದಿ ಚೆನ್ನಾಗಿ ಕೆಂಪಾಗಲು ಈ ಮನೆಮದ್ದುಗಳನ್ನು ಅನುಸರಿಸಿ

ಉತ್ತಮ ಆರೋಗ್ಯಕ್ಕೆ ಮಧ್ಯಾಹ್ನದ ಆಹಾರ ಕ್ರಮ ಹೀಗಿರಲಿ

ಚಳಿಗಾಲದಲ್ಲಿ ಮಕ್ಕಳಿಗೆ ಸ್ಥಾನ ಮಾಡಿಸಿದ್ರೆ ಶೀತ ಆಗುತ್ತೇ ಎನ್ನವವರು ಈ ಟ್ರಿಕ್ಸ್‌ ಬಳಸಿ

ಅಸಿಡಿಟಿಯಿಂದ ಹೊಟ್ಟೆ ತೊಳೆಸಿದಂತಾಗುತ್ತಿದ್ದರೆ ಏನು ಮಾಡಬೇಕು

ಗರ್ಭಿಣಿಯರು ಮೊದಲ ಮೂರು ತಿಂಗಳು ಈ ಆಹಾರ ವಸ್ತುಗಳನ್ನು ಸೇವಿಸಬಾರದು

ಮುಂದಿನ ಸುದ್ದಿ
Show comments