Select Your Language

Notifications

webdunia
webdunia
webdunia
webdunia

ಬೊಜ್ಜು ನಿಮ್ಮ ನೆಮ್ಮದಿಯನ್ನು ಕೆಡಿಸಿದೆಯೇ?!

ಬೊಜ್ಜು ನಿಮ್ಮ ನೆಮ್ಮದಿಯನ್ನು ಕೆಡಿಸಿದೆಯೇ?!
ಮೈಸೂರು , ಸೋಮವಾರ, 15 ನವೆಂಬರ್ 2021 (14:41 IST)
ಹೊಟ್ಟೆಯ ಬೊಜ್ಜು ಅಧಿಕ ಕೊಲೆಸ್ಟ್ರಾಲ್, ರಕ್ತದೊತ್ತಡ, ಮಧುಮೇಹ ಮತ್ತು ಹೃದಯದ ಕಾಯಿಲೆಗಳನ್ನು ಉಂಟು ಮಾಡಬಹುದು. ಹೊಟ್ಟೆಯ ಬೊಜ್ಜು ಕರಗಿಸಲು ಕ್ಯಾಲರಿ ಸೇವನೆ ಕಡಿಮೆ ಮಾಡಬೇಕು.
ವ್ಯಾಯಾಮದೊಂದಿಗೆ ನಿತ್ಯವೂ ಸೇವನೆ ಮಾಡುವಂತಹ ಕ್ಯಾಲರಿ ಬಗ್ಗೆ ಗಮನಹರಿಸಿದರೆ ಅದರಿಂದ ಬೊಜ್ಜು ಕರಗಿಸಬಹುದು. ಪುರುಷರಾಗಲಿ, ಮಹಿಳೆಯರಾಗಲಿ ಹೊಟ್ಟೆಯಲ್ಲಿ ಬೊಜ್ಜು ಬಂದರೆ ಅದನ್ನು ಮತ್ತೆ ಕರಗಿಸುವುದು ತುಂಬಾ ಕಷ್ಟವಾಗುವುದು. ಹೊಟ್ಟೆಯ ಬೊಜ್ಜು ಹೊಂದಿರುವವರು ಅದನ್ನು ಕರಗಿಸಲು ನಿಯಮಿತ ವ್ಯಾಯಾಮ ಹಾಗೂ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋಗಬೇಕು.
webdunia

ಕ್ರಂಚ್
ಹೊಟ್ಟೆಯ ಕೊಬ್ಬು ಕರಗಿಸುವ ವ್ಯಾಯಾಮದಲ್ಲಿ ಮೊದಲಿಗೆ ಬರುವುದು ಕ್ರಂಚ್ಸ್. ಇದು ಕೊಬ್ಬು ಕರಗಿಸಲು ತುಂಬಾ ಪರಿಣಾಮಕಾರಿ ವ್ಯಾಯಾಮ. ನೆಲದ ಮೇಲೆ ಮಲಗಿಕೊಂಡು, ಹಾಗೆ ಮೊಣಕಾಲುಗಳನ್ನು ಮಡಚಿಕೊಳ್ಳಿ ಮತ್ತು ಪಾದಗಳು ನೆಲದ ಮೇಲೆ ಇರಲಿ. ಕೈಗಳನ್ನು ಹಾಗೆ ತಲೆಯ ಹಿಂಬದಿಗೆ ತನ್ನಿ. ಇದರ ಬಳಿಕ ಉಸಿರಾಟದ ಕಡೆಗೆ ಗಮನ ನೀಡಿ ದೇಹದ ಮೇಲಿನ ಭಾಗವನ್ನು ಮೇಲಕ್ಕೆತ್ತಬೇಕು. ಹೀಗೆ ಹಲವು ಬಾರಿ ಮಾಡಿ. ಇದು ಹೊಟ್ಟೆಯ ಕೊಬ್ಬು ಕರಗಿಸುವುದು.
ನಡೆಯುವುದು
ದೇಹವನ್ನು ಫಿಟ್ ಆಗಿಡಲು ಮತ್ತು ಹೊಟ್ಟೆಯ ಬೊಜ್ಜು ಕರಗಿಸಲು ಮಾಡಬಹುದಾದ ಸರಳ ವ್ಯಾಯಾಮವೆಂದರೆ ಅದು ನಡೆಯುವುದು. ವೇಗವಾಗಿ ನಡೆದರೆ ಅದರಿಂದ ಹೊಟ್ಟೆಯ ಕೊಬ್ಬು ಕರಗಿಸಬಹುದು. ಇದರ ಜತೆಗೆ ಇದು ಚಯಾಪಚಯ ಮತ್ತು ಹೃದಯದ ಬಡಿತಕ್ಕೆ ಧನಾತ್ಮಕ ಪರಿಣಾಮ ಬೀರುವುದು. ಓಡುವುದು ಕೂಡ ಕೊಬ್ಬು ಕರಗಿಸಲು ಪರಿಣಾಮಕಾರಿ ಆಗಿದೆ. ಇದಕ್ಕಾಗಿ ಯಾವುದೇ ರೀತಿಯ ಸಾಮಗ್ರಿಗಳು ಕೂಡ ಬೇಕಾಗಿಲ್ಲ.
ಜುಂಬಾ
ಕೆಲವೊಂದು ನೃತ್ಯ, ತಮಾಷೆಯಿಂದ ಮಾಡುವಂತಹ ವ್ಯಾಯಾಮಗಳು ಕೂಡ ಕೊಬ್ಬು ಕರಗಿಸಲು ಸಹಕಾರಿ. ಜುಂಬಾ ವ್ಯಾಯಾಮವು ತುಂಬಾ ಪರಿಣಾಮಕಾರಿ ವ್ಯಾಯಾಮವೆಂದು ಪರಿಗಣಿಸಲಾಗಿದೆ.
ಇದು ಅಪಧಮನಿ ಫಿಟ್ನೆಸ್ ನ್ನು ಕಾಪಾಡುವುದು, ಕೊಲೆಸ್ಟ್ರಾಲ್ ತಗ್ಗಿಸುವುದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕೂಡ ನಿಯಂತ್ರಿಸಿ, ಕೊಬ್ಬು ಬೇಗನೆ ಕರಗಿಸುವುದು. ಜುಂಬಾ ವ್ಯಾಯಾಮದಲ್ಲಿ ಭಾಗಿಯಾದ 18-22 ಹರೆಯದ ಮಹಿಳೆಯರು ನಿಮಿಷಕ್ಕೆ 9.5 ಕ್ಯಾಲರಿ ದಹಿಸಿರುವರು ಎಂದು ಅಧ್ಯಯನಗಳು ಹೇಳಿವೆ.
ಸೈಕ್ಲಿಂಗ್
ಹೊಟ್ಟೆಯ ಬೊಜ್ಜು ಕರಗಿಸಲು ಸೈಕ್ಲಿಂಗ್ ತುಂಬಾ ಪರಿಣಾಮಕಾರಿ. ಸೈಕ್ಲಿಂಗ್ ನಿಂದಾಗಿ ಹೃದಯ ಬಡಿತ ಹೆಚ್ಚಾಗುವುದು ಮತ್ತು ದೇಹದಲ್ಲಿನ ಅಧಿಕ ಕ್ಯಾಲರಿ ದಹಿಸಲು ಇದು ಪರಿಣಾಮಕಾರಿ. ಸೈಕ್ಲಿಂಗ್ ನಿಂದ ತೊಡೆ ಮತ್ತು ಸೊಂಟದ ಭಾಗದ ಬೊಜ್ಜು ಕಡಿಮೆ ಮಾಡಬಹುದು. ಹೊಟ್ಟೆಯ ಬೊಜ್ಜು ಕರಗಿಸಬೇಕಿದ್ದರೆ, ಆಗ ನಿಯಮಿತವಾಗಿ ಸೈಕ್ಲಿಂಗ್ ಮಾಡಿ.
ಏರೋಬಿಕ್ಸ್
ತೀವ್ರ ರೀತಿಯ ಏರೋಬಿಕ್ಸ್ ವ್ಯಾಯಾಮಗಳನ್ನು ಮಾಡಿದರೆ ಆಗ ಅದು ತೂಕ ಇಳಿಸಲು ತುಂಬಾ ಪರಿಣಾಮಕಾರಿ ಆಗುವುದು. ಇದು ದೇಹದ ತೂಕ ತಗ್ಗಿಸಲು ತುಂಬಾ ಪರಿಣಾಮಕಾರಿ, ಸರಳ ಹಾಗೂ ಮನಸ್ಸಿಗೆ ಖುಷಿ ನೀಡುವಂತಹ ವ್ಯಾಯಾಮ. ಈ ವ್ಯಾಯಾಮದಿಂದ ಅಧಿಕ ಕ್ಯಾಲರಿ ದಹಿಸಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ಚಳಿಗಾಲಕ್ಕೆ ಬೆಸ್ಟ್ ಮನೆಮದ್ದು 'ಬೆಳ್ಳುಳ್ಳಿ'