Select Your Language

Notifications

webdunia
webdunia
webdunia
webdunia

ಹನಿಮೂನ್ ಗೆ ಹೋಗುವಾಗ ಈ ಟಿಪ್ಸ್ ಫಾಲೋ ಮಾಡಿ ನೋಡಿ

ಹನಿಮೂನ್ ಗೆ ಹೋಗುವಾಗ ಈ ಟಿಪ್ಸ್ ಫಾಲೋ ಮಾಡಿ ನೋಡಿ
ಬೆಂಗಳೂರು , ಶುಕ್ರವಾರ, 27 ಸೆಪ್ಟಂಬರ್ 2019 (13:40 IST)
ಬೆಂಗಳೂರು: ಮದುವೆ ಕಾರ್ಯವೆಲ್ಲಾ ಮುಗಿಸಿದ ಮೇಲೆ ಹನಿಮೂನ್ ಗೆಂದು ನವದಂಪತಿಗಳು ಹೊರಡುತ್ತಾರೆ. ಮದುವೆಕಾರ್ಯದಿಂದ ಆಗಿರುವ ಸುಸ್ತು ಇನ್ನು ಮುಖದಲ್ಲಿ ಕಡಿಮೆಯಾಗಿರುವುದಿಲ್ಲ. ಹಾಗಾಗಿ ಈ ಟಿಪ್ಸ್ ಫಾಲೋ ಮಾಡಿ ನಿಮ್ಮ ಮುಖವನ್ನು ತಾಜಾತನದಿಂದ ಕೂಡಿರುವಂತೆ ಮಾಡಿಕೊಳ್ಳಿ.

ಮುಖವನ್ನು ಪ್ರತಿದಿನ ಕ್ಲೆನ್ಸಿಂಗ್, ಟೋನಿಂಗ್, ಮ್ಯಾಯಿಶ್ಚರೈಸಿಂಗ್ ಮಾಡಿಕೊಳ್ಳಿ ಇದರಿಂದ ನಿಮ್ಮ ಮುಖ ಹೊಸ ಲುಕ್ ನೊಂದಿಗೆ ನಳನಳಿಸುತ್ತದೆ.

ಇನ್ನು ಮೇಕಪ್ ಮಾಡಿಕೊಳ್ಳುವಾಗ ನಿಮ್ಮ ಮುಖಕ್ಕೆ ಸರಿಹೊಂದುವ ಫೌಂಡೇಶನ್ ಆರಿಸಿಕೊಳ್ಳಿ.ಹಾಗೇ ಕಣ್ಣಿಗೆ ಕಾಜಲ್ ಹಾಕುವದನ್ನು ಮರೆಯದಿರಿ. ಇನ್ನು ತುಟಿ ಗುಲಾಬಿ ಹಾಗೂ ಕೆಂಪು ಬಣ್ಣದ ಗ್ಲಾಸಿಯಾಗಿರುವ ಲಿಪ್ ಸ್ಟಿಕ್ ಹಚ್ಚಿಕೊಳ್ಳಿ. ಇದರಿಂದ ನೀವು ಹೆಚ್ಚು ಆಕರ್ಷಕವಾಗಿ ಕಾಣಿಸುತ್ತಿರಿ.

ಇನ್ನು ನೀವು ಹನಿಮೂನ್ ಗೆ ಹೋಗುವಾಗ ಬೀಚ್ ಗೆ ಹೋಗುವ ಪ್ಲ್ಯಾನ್ ಇದ್ದರೆ ಅವಶ್ಯಕವಾಗಿ ಸನ್ ಸ್ಕ್ರೀನ್ ಹಚ್ಚಿಕೊಳ್ಳಿ. ಇದರಿಂದ ನಿಮ್ಮ ಚರ್ಮ ಟ್ಯಾನ್ ಆಗುವುದು ತಪ್ಪುತ್ತದೆ. ಹಾಗೇ ಸುತ್ತಾಟವೆಲ್ಲಾ ಮುಗಿದ ಮೇಲೆ ರಾತ್ರಿ ಮೇಕಪ್ ರಿಮೂವರ್ ನಿಂದ ಮೇಕಪ್ ತೆಗೆದು ಯಾವುದಾದರು ಒಳ್ಳೆಯ ನೈಟ್ ಕ್ರೀಂ ಹಚ್ಚಿಕೊಳ್ಳಿ. ಇದರಿಂದ ನಿಮ್ಮ ಮುಖ ಕಳೆಗುಂದುವುದು ತಪ್ಪುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಅಕ್ಕಿ ತೊಳೆದ ನೀರಿನಿಂದ ನಿಮ್ಮ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಿ