Select Your Language

Notifications

webdunia
webdunia
webdunia
webdunia

ಮೊಡವೆ ಹೋಗಲಾಡಿಸಲು ಕ್ರೀಂ ಬದಲು ಈ ಹಣ್ಣುಗಳನ್ನು ತಿನ್ನಿ

ಮೊಡವೆ ಹೋಗಲಾಡಿಸಲು ಕ್ರೀಂ ಬದಲು ಈ ಹಣ್ಣುಗಳನ್ನು ತಿನ್ನಿ
ಬೆಂಗಳೂರು , ಮಂಗಳವಾರ, 21 ಮೇ 2019 (06:43 IST)
ಬೆಂಗಳೂರು : ಹದಿಹರೆಯದಲ್ಲಿ ಮೊಡವೆಗಳು ಮೂಡುವುದು ಸಹಜ. ಈ ಮೊಡವೆ ಮಖದಲ್ಲಿ ಮೂಡಿದರೆ ಮುಖದ ಅಂದ ಕೆಡುತ್ತದೆ. ಮೊಡವೆಗಳು ಮೂಡಬಾರದೆಂದು ಹಲವರು ಅನೇಕ ಕ್ರೀಂಗಳನ್ನು ಬಳಸುತ್ತಾರೆ. ಆದರೆ ಅದರ ಬದಲು ಈ ಹಣ್ಣುಗಳನ್ನು ಸೇವಿಸಿದರೆ ಮೊಡವೆಗಳಿಂದ ದೂರ ಉಳಿಯಬಹುದು.



*ಸೇಬುಹಣ್ಣಿನಲ್ಲಿ ವಿಟಮಿನ್ ಸಿ, ಇ ಮತ್ತು ಎ ಇರುವುದರಿಂದ ನಿಮ್ಮ ಚರ್ಮವನ್ನು ಬೆಳ್ಳಗೆ, ಮೃದುವಾಗಿಡುತ್ತದೆ. ಸೇಬುಹಣ್ಣನ್ನು ತಿನ್ನುವುದು ಮಾತ್ರವಲ್ಲ, ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಬಹುದು.

 

*ಬಾಳೆಹಣ್ಣು ನಮ್ಮ ದೇಹದಲ್ಲಿರುವ ಬ್ಯಾಕ್ಟೀರಿಯಾವನ್ನು ನಾಶ ಮಾಡುತ್ತದೆ. ಚರ್ಮವನ್ನು ಮೃದುವಾಗಿ, ಕಾಂತಿಯುಕ್ತವಾಗಿಡುತ್ತದೆ. ಬಾಳೆಹಣ್ಣನ್ನು ಕೂಡ ಫೇಸ್ ಮಾಸ್ಕ್ ಆಗಿ ಬಳಸಬಹುದು.

 

* ಇದರಲ್ಲಿ ವಿಟಮಿನ್ ಎ ಜೊತೆಗೆ ನಿಮ್ಮ ಆರೋಗ್ಯಕರ ಚರ್ಮಕ್ಕೆ ಬೇಕಾದ ಪೋಷಕಾಂಶಗಳಿವೆ. ಪಪ್ಪಾಯ ಹಣ್ಣನ್ನು ಸೇವಿಸುವುದರಿಂದ ಉರಿಯೂತ ಮತ್ತು ಚರ್ಮ ಕೆಂಪಗಾಗುವಿಕೆ ಕಡಿಮೆಯಾಗುತ್ತದೆ.

 

* ಆ್ಯಂಟಿಒಕ್ಸಿಡೆಂಟ್ ನಂತೆ ಕೆಲಸ ಮಾಡುವ ನಿಂಬೆಹಣ್ಣು ದೇಹದಲ್ಲಿರುವ ಟಾಕ್ಸಿನ್ ಗಳನ್ನು ಹೊರಹಾಕುತ್ತದೆ. ನಿಂಬೆರಸವನ್ನು ನೀರಿಗೆ ಬೆರೆಸಿ ಕುಡಿಯಬಹುದು ಅಥವಾ ಮುಖಕ್ಕೆ ಹಚ್ಚಿಕೊಳ್ಳಬಹುದು. ಸತ್ತ ಚರ್ಮದ ಜೀವಕೋಶಗಳನ್ನು ಕೂಡ ಇದು ತೆಗೆದುಹಾಕುತ್ತದೆ.

 

* ಅವೊಕಾಡೊನಲ್ಲಿ ವಿಟಮಿನ್ ಇ ಹೇರಳವಾಗಿದೆ. ಅವೊಕಾಡೊ ಆ್ಯಂಟಿಒಕ್ಸಿಡೆಂಟ್ ಚರ್ಮದಲ್ಲಿನ ತೇವಾಂಶವನ್ನು ಕಾಪಾಡುತ್ತದೆ. ಜೊತೆಗೆ ಆರೋಗ್ಯವಾಗಿಡುತ್ತದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಕಾಲುಗಳಲ್ಲಿ ಮುಳ್ಳು ಚುಚ್ಚಿ ಒಳಭಾಗದಲ್ಲಿ ನೋವಿದೆಯಾ? ಹಾಗಾದ್ರೆ ಇದನ್ನು ಹಚ್ಚಿ