ಚಳಿಗಾಲದಲ್ಲಿ ಆಗುವ ಪಾದದ ಬಿರುಕು ಕಡಿಮೆ ಮಾಡಲು ಈ ಮನೆಮದ್ದನ್ನು ಬಳಸಿ

ಮಂಗಳವಾರ, 8 ಜನವರಿ 2019 (06:43 IST)
ಬೆಂಗಳೂರು : ಚಳಿಗಾಲ ಬಂದಾಗ ಹೆಚ್ಚಿನವರ ಕಾಲು ಪಾದ ಬಿರುಕು ಬಿಡುತ್ತದೆ. ಇದರಿಂದ ವಿಪರೀತ ನೋವು ಉಂಟಾಗುತ್ತದೆ. ಕೆಲವೊಮ್ಮೆ ಇದರಿಂದ ರಕ್ತ ಕೂಡ ಬರುತ್ತದೆ. ಮನೆಮದ್ದಿನಿಂದ ಕಾಲು ಪಾದ ಬಿರುಕು ಬಿಡುವುದು ಕಡಿಮೆಯಾಗುವುದಲ್ಲದೇ ಪಾದಗಳು ಕೋಮಲವಾಗುತ್ತದೆ.


ಹಣ್ಣಾದ ಬಾಳೆಹಣ್ಣನ್ನು ಪೇಸ್ಟ್ ಮಾಡಿ ಅದನ್ನು ಪಾದ ಬಿರುಕು ಬಿಟ್ಟಿರುವ ಕಡೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. 10-15 ನಿಮಿಷ ಬಿಟ್ಟು ತಣ್ಣೀರಿನಲ್ಲಿ ತೊಳೆಯಿರಿ. ಹೀಗೆ ಪ್ರತಿದಿನ 7-10 ದಿನ ಮಾಡಿದ್ರೆ ಪಾದದ ಬಿರುಕು ಕಡಿಮೆಯಾಗಿ ನಯವಾಗುತ್ತದೆ.
ರಾತ್ರಿ ಮಲಗುವಾಗ ಈರುಳ್ಳಿಯನ್ನು ರೌಂಡ್ ಆಗಿ ಕಟ್ ಮಾಡಿಕೊಂಡು ಅದನ್ನು ಬಿರುಕು ಬಿಟ್ಟ ಭಾಗದಲ್ಲಿ ಇಟ್ಟು ಸೋಕ್ಸ್ ಹಾಕಿಕೊಳ್ಳಿ. ಬೆಳಿಗ್ಗೆ ಅದನ್ನು ತೆಗೆದು ತಣ್ಣೀರಿನಲ್ಲಿ ತೊಳೆಯಿರಿ. ಹೀಗೆ ಪ್ರತಿದಿನ 7-10 ದಿನ ಮಾಡಿದ್ರೆ ಪಾದದ ಬಿರುಕು ಕಡಿಮೆಯಾಗುತ್ತದೆ.


1 ಟೀ ಚಮಚ ಗ್ಲೀಸರಿನ್, 1ಟೀ ಚಮಚ ನಿಂಬೆರಸ ಎರಡನ್ನು ಚೆನ್ನಾಗಿ ಮಿಕ್ಸ್ ಮಾಡಿ ಹತ್ತಿಯಿಂದ ಬಿರುಕು ಇದ್ದ ಕಡೆ ಹಚ್ಚಿಕೊಳ್ಳಿ. ನಂತರ 20 ನಿಮಿಷ ಬಿಟ್ಟು ತಣ್ಣೀರಿನಲ್ಲಿ ತೊಳೆಯಿರಿ. ಹೀಗೆ ಪ್ರತಿದಿನ 7-10 ದಿನ ಮಾಡಿದ್ರೆ ಪಾದದ ಬಿರುಕು ಕಡಿಮೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ನಿಮ್ಮ ಗಡ್ಡ ಮೀಸೆ ಬೇಗ ಬೆಳೆಯುತ್ತಿಲ್ಲ ಎಂದರೆ ಈ ಮನೆಮದ್ದು ಬಳಸಿ