Publish Date: Mon, 07 Jan 2019 (07:31 IST)
Updated Date: Mon, 07 Jan 2019 (07:47 IST)
ಬೆಂಗಳೂರು : ಗ್ರಹದೋಷವಿದ್ದಾಗ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಇರುವುದಿಲ್ಲ. ಆದ್ದರಿಂದ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿದಂತೆ ಸೂರ್ಯಾಸ್ತದ ನಂತರ ಕೆಲವೊಂದು ಕೆಲಸಗಳನ್ನು ಮಾಡುವುದರಿಂದ ಗ್ರಹ ದೋಷ ಕಡಿಮೆ ಮಾಡಿ ಶೀಘ್ರ ಫಲ ನೀಡುತ್ತವೆ.
ಶಿವಪುರಾಣದ ಪ್ರಕಾರ, ಸೂರ್ಯಾಸ್ತದ ನಂತರ ಶಿವಲಿಂಗದ ಬಳಿ ದೀಪ ಬೆಳಗುವ ವ್ಯಕ್ತಿ ಈಶ್ವರನಿಗೆ ಪ್ರಿಯನಾಗಿರುತ್ತಾನೆ. ಮನೆ ಹಾಗೂ ಜೀವನದಲ್ಲಿ ಯಾವುದೇ ಕೊರತೆ ಕಾಣಿಸಿಕೊಳ್ಳುವುದಿಲ್ಲ. ಕುಬೇರ ದೇವ ಕೂಡ ಕೃಪೆ ತೋರುತ್ತಾನೆ.
ಸೂರ್ಯಾಸ್ತದ ನಂತರ ನಿಯಮಿತವಾಗಿ ತುಳಸಿ ಗಿಡದ ಬಳಿ ದೀಪ ಹಚ್ಚಬೇಕು. ಪ್ರತಿ ಬಾರಿ ಕೆಲಸದಲ್ಲಿ ಅಡ್ಡಿಯಾಗ್ತಿದ್ದರೆ ಇದನ್ನು ದೂರ ಮಾಡಲು ಹನುಮಂತನ ಮುಂದೆ ಸಾಸಿವೆ ಎಣ್ಣೆ ದೀಪ ಹಚ್ಚಬೇಕು.
ಸೂರ್ಯಾಸ್ತದ ನಂತರ ಪ್ರತಿದಿನ ಮನೆಯಲ್ಲಿ ಕರ್ಪೂರವನ್ನು ಹಚ್ಚಬೇಕು. ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗಿ ಧನಾತ್ಮಕ ಶಕ್ತಿ ನೆಲೆಸುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.