ಮುಖದಲ್ಲಿರುವ ಕಪ್ಪು ಕಲೆ ನಿವಾರಿಸಲು ಈ ಫೇಸ್ ಪ್ಯಾಕ್ ಟ್ರೈ ಮಾಡಿ

Krishnaveni K
ಮಂಗಳವಾರ, 17 ಸೆಪ್ಟಂಬರ್ 2024 (12:04 IST)
Photo Credit: AI Image
ಬೆಂಗಳೂರು: ದೈನಂದಿನ ಓಡಾಟದ ನಡುವೆ ಮುಖದಲ್ಲಿ ಕಪ್ಪು ಕಲೆಗಳಾಗಿವೆ ಎಂಬ ಚಿಂತೆಯೇ ಹಾಗಿದ್ದರೆ ಅದನ್ನು ಮನೆಯಲ್ಲಿಯೇ ಮಾಡಬಹುದಾದ ಸಿಂಪಲ್ ಫೇಸ್ ಪ್ಯಾಕ್ ನಿಂದ ಹೋಗಲಾಡಿಸಬಹುದು.

ಮಾರುಕಟ್ಟೆಯಿಂದ ಫೇಸ್ ಪ್ಯಾಕ್ ತೆಗೆದುಕೊಳ್ಳಬೇಕಾದರೆ ದುಬಾರಿ ಎನಿಸಬಹುದು. ಹೀಗಾಗಿ ಮನೆಯಲ್ಲಿಯೇ ಕೈಗೆಟುಕುವ ವಸ್ತುಗಳನ್ನು ಬಳಸಿಕೊಂಡು ಫೇಸ್ ಪ್ಯಾಕ್ ತಯಾರಿಸಿಕೊಳ್ಳಬಹುದು. ಇದರಿಂದ ಯಾವುದೇ ಅಡ್ಡಪರಿಣಾಮದ ಭೀತಿಯೂ ಇರುವುದಿಲ್ಲ. ಜೊತೆಗೆ ನಿಮ್ಮ ಮುಖದ ಕಾಂತಿಯೂ ಹೆಚ್ಚಿಸಿಕೊಳ್ಳಬಹುದು.

ಇಂದು ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಓಟ್ಸ್, ಜೇನು ತುಪ್ಪದ ಫೇಸ್ ಪ್ಯಾಕ್ ರೆಸಿಪಿಯನ್ನು ನೋಡೋಣ. ಇದಕ್ಕೆ ಬೇಕಾಗಿರುವುದು ಸ್ವಲ್ಪ ಓಟ್ಸ್, ಜೇನು ತುಪ್ಪ ಮತ್ತು ಹಾಲು ಮಾತ್ರ. ಈ ಮೂರು ವಸ್ತುಗಳಿದ್ದರೆ ಸುಲಭವಾಗಿ ಫೇಸ್ ಪ್ಯಾಕ್ ತಯಾರಿಸಿಕೊಳ್ಳಬಹುದು.

ಮೊದಲಿಗೆ ಓಟ್ಸ್ ನ್ನು ಒಂದು ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಇದಕ್ಕೆ ಸ್ವಲ್ಪ ಹಾಲು, ಜೇನು ತುಪ್ಪ ಸೇರಿಸಿ ಪೇಸ್ಟ್ ನ ಹದಕ್ಕೆ ತನ್ನಿ. ಈ ಮಿಶ್ರಣವನ್ನು ಕಲೆಯಿರುವ ಮುಖದ ಭಾಗಕ್ಕೆ ಹಚ್ಚಿ ಮೃದುವಾಗಿ 5 ನಿಮಿಷ ಮಸಾಜ್ ಮಾಡಿ. ಸ್ವಲ್ಪ ಸಮಯದ ನಂತರ ಹದ ಬಿಸಿ ನೀರಿನಲ್ಲಿ ಮುಖ ತೊಳೆದುಕೊಳ್ಳಿ. ಇದೇ ರೀತಿ ನಿಯಮಿತವಾಗಿ ಮಾಡುತ್ತಿದ್ದರೆ ಮುಖದ ಕಲೆಗಳು ಮಾಯವಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಒಂದು ದಿನಕ್ಕೆ ಎಷ್ಟು ಸಕ್ಕರೆ ಸೇವಿಸಬಹುದು, ಹೆಚ್ಚು ಸೇವಿಸಿದರೆ ಏನಾಗುತ್ತದೆ

ಮುಟ್ಟು ಮುಂದೂಡುವುದು ಹೇಗೆ, ಏನು ತೊಂದರೆ ಇಲ್ಲಿದೆ ಟಿಪ್ಸ್

ಮರುವಾಯಿ ತಿನ್ನುವುದರಿಂದ ಆರೋಗ್ಯಕ್ಕೆ ಸಿಗುವ ಲಾಭಗಳೇನು ಗೊತ್ತಾ

ಸೌಂದರ್ಯಕ್ಕಲ್ಲದೆ, ಆರೋಗ್ಯದ ದೃಷ್ಟಿಯಿಂದಲೂ ಚರ್ಮದ ಆರೈಕೆ ತುಂಬಾನೆ ಉತ್ತಮ

ಬೇಸಿಗೆಯ ಸಮಯದಲ್ಲಿ ಸೇವಿಸಲೇಬೇಕಾದ ಐದು ಹಣ್ಣುಗಳ ಮಾಹಿತಿ ಇಲ್ಲಿದೆ

ಮುಂದಿನ ಸುದ್ದಿ
Show comments