ಫೇಶಿಯಲ್ ಹೇರ್ ತೆಗೆಯಲು ಸಿಂಪಲ್ ಫೇಸ್ ಪ್ಯಾಕ್

Krishnaveni K
ಶುಕ್ರವಾರ, 23 ಫೆಬ್ರವರಿ 2024 (10:27 IST)
ಬೆಂಗಳೂರು: ಮುಖದಲ್ಲಿ ಬೇಡದ ಕೂದಲು ನಿಮ್ಮ ಅಂದ ಹಾಳು ಮಾಡುತ್ತಿದೆಯೇ? ಹಾಗಿದ್ದರೆ ಮನೆಯಲ್ಲಿಯೇ ಸಿಂಪಲ್ ಆಗಿ ಒಂದು ಫೇಸ್ ಪ್ಯಾಕ್ ಮಾಡಿಕೊಂಡು ಹಚ್ಚಿ ನೋಡಿ.

ಕೆಲವರಿಗೆ ಪುರುಷರಂತೆ ಗಡ್ಡ-ಮೀಸೆ ಬಂದು ಮುಖ ತೋರಿಸಲೂ ಸಂಕೋಚ ಎನ್ನುವ ಪರಿಸ್ಥಿತಿಯಿದೆ. ಇಂತಹ ಸಂದರ್ಭದಲ್ಲಿ ಯಾವುದೋ ರಾಸಾಯನಿಕ ಫೇಸ್ ಪ್ಯಾಕ್ ಗಳನ್ನು ಬಳಸುವ ಬದಲು ಮನೆಯಲ್ಲಿಯೇ ಫೇಸ್ ಪ್ಯಾಕ್ ಮಾಡಿಕೊಂಡು ನಿಯಮಿತವಾಗಿ ಹಚ್ಚಿಕೊಳ್ಳುತ್ತಿದ್ದರೆ ಮುಖದಲ್ಲಿರುವ ಬೇಡದ ಕೂದಲುಗಳು ತಾನಾಗಿಯೇ ಹೋಗುತ್ತದೆ. ಇದಕ್ಕೆ ಬೇಕಾಗಿರುವುದು ಮುಖ್ಯವಾಗಿ ಅಕ್ಕಿ ಹಿಟ್ಟು, ಹಾಲು ಮತ್ತು ಬೇಕಿದ್ದರೆ ಜೇನು ತುಪ್ಪ.

ಮಾಡುವ ವಿಧಾನ
ಅಕ್ಕಿ ಹಿಟ್ಟಿಗೆ ಕೊಂಚ ಹಾಲು ಹಾಕಿ ಸೇರಿಸುತ್ತಾ ದಪ್ಪ ಪೇಸ್ಟ್ ನ ಹದಕ್ಕೆ ತನ್ನಿ. ಇದು ಒಂದು ದಪ್ಪ ಪೇಸ್ ನ ಹದಕ್ಕೆ ಬಂದಾಗ ಬೇಕಿದ್ದರೆ ಕೊಂಚ ಜೇನು ತುಪ್ಪ ಸೇರಿಸಬಹುದು. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ. ಪೇಸ್ಟ್ ಹಚ್ಚಿಕೊಂಡು ಮೃದುವಾಗಿ ಉಜ್ಜಿಕೊಳ್ಳಿ. ಸುಮಾರು 10-15 ನಿಮಿಷ ಹಾಗೇ ಇರಿಸಿಕೊಂಡು ಬಳಿಕ ಹದ ಬಿಸಿ ನೀರಿನಲ್ಲಿ ಮುಖ ತೊಳೆದುಕೊಳ್ಳಿ.  ಇದೇ ರೀತಿ ವಾರಕ್ಕೆ ಎರಡು ಬಾರಿಯಾದರೂ ಮಾಡುತ್ತಾ ಬಂದರೆ ನಿಮ್ಮ ಮುಖದಲ್ಲಿರುವ ಬೇಡದ ಕೂದಲು ಮಾಯವಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಬಾಳೆಹಣ್ಣಿಗೆ ಸ್ವಲ್ಪ ಕಾಳುಮೆಣಸು ಪೌಡರ್ ಹಾಕಿ ತಿಂದರೆ ಏನಾಗುತ್ತದೆ ನೋಡಿ

ಬಜ್ಜಿ ತಿಂದ ತಕ್ಷಣ ನೀರು ಕುಡಿದ್ರೆ ಏನಾಗುತ್ತದೆ

ನಾವು ನಿದ್ರೆಗೆ ಜಾರುವ ಮುನ್ನಾ ಮಾಡಲೇ ಬಾರದ ತಪ್ಪುಗಳು

ಮೊಳಕೆ ಹುರುಳಿ ಕಾಳಿನಿಂದ ಆರೋಗ್ಯಕ್ಕಿರಲಿದೆ ಸಾಕಷ್ಟು ಪ್ರಯೋಜನ

Sankranti 2026: ಎಳ್ಳು ಬೆಲ್ಲ ಹಂಚಿಕೆ ಹಿಂದೆ ನೀವು‌ ತಿಳಿಯದಿರುವ ಅಚ್ಚರಿ ಅಂಶಗಳು

ಮುಂದಿನ ಸುದ್ದಿ
Show comments