Select Your Language

Notifications

webdunia
webdunia
webdunia
webdunia

ಮೈದಾ ಹಿಟ್ಟಿನಿಂದ ಹೀಗೆ ಮಾಡಿದರೆ ಮುಖದ ಅಂದ ಹೆಚ್ಚಾಗುತ್ತದೆ

ಮೈದಾ ಹಿಟ್ಟಿನಿಂದ ಹೀಗೆ ಮಾಡಿದರೆ ಮುಖದ ಅಂದ ಹೆಚ್ಚಾಗುತ್ತದೆ
ಬೆಂಗಳೂರು , ಶನಿವಾರ, 25 ಸೆಪ್ಟಂಬರ್ 2021 (08:09 IST)
Maida Face Pack For Skin: ಕೇಕ್ ತಯಾರಿಸಲು  ಮತ್ತು ಪಿಜ್ಜಾ ತಯಾರಿಸಲು ಈ  ಹಿಟ್ಟನ್ನು ಬಳಸಲಾಗುತ್ತದೆ. ಅಷ್ಟೇ ಅಲ್ಲದೇ, ವಿವಿಧ ರಿತಿಯ ಜಂಕ್ ಆಹಾರಗಳನ್ನು ಇದರಿಂದ ತಯಾರಿಸಲಾಗುತ್ತದೆ. ಆದರೆ ಅದಕ್ಕಿಂತ ಹೆಚ್ಚಾಗಿ ಇದು  ಚರ್ಮಕ್ಕೆ ತುಂಬಾ ಪ್ರಯೋಜನಕಾರಿ.


ಮೈದಾವನ್ನು ನೀವು ಸುಕ್ಕುಗಳನ್ನು ಕಡಿಮೆ ಮಾಡಲು ಬಳಸಬಹುದು.
ಮೈದಾ ಹಿಟ್ಟನ್ನು ಹೆಚ್ಚಾಗಿ ಬಳಕೆ ಮಾಡಲು ಹೆದರುತ್ತಾರೆ. ಅದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಆದರೆ ಮೈದಾ ಹಿಟ್ಟು ತ್ವಚೆಯ ಅಂದವನ್ನು ಹೆಚ್ಚು ಮಾಡುತ್ತದೆ ಎಂಬ ವಿಚಾರ ಗೊತ್ತಾ? ಹೌದು. ಚರ್ಮದ ಸಮಸ್ಯೆಯಿಂದ ಮುಕ್ತಿ ಪಡೆಯಲು ನೀವು ಹಲವಾರು ಪ್ರಯತ್ನಗಳನ್ನು ಮಾಡಿರುತ್ತೀರಾ.ಆದರೆ ಅದ್ಯಾವುದು ಪರಿಣಾಮ ನೀಡಿಲ್ಲ ಎಂದರೆ , ನೀವು ಮೈದಾ ಫೇಸ್ ಪ್ಯಾಕ್ ಅನ್ನು ಬಳಸಬಹುದು. ಮೈದಾದಲ್ಲಿ ಹಲವು ವಿಧದ ವಿಟಮಿನ್ ಗಳಿದ್ದು, ಇದು ಕಾಲಜನ್ ಅನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.
ಕೇಕ್ ತಯಾರಿಸಲು  ಮತ್ತು ಪಿಜ್ಜಾ ತಯಾರಿಸಲು ಈ  ಹಿಟ್ಟನ್ನು ಬಳಸಲಾಗುತ್ತದೆ. ಅಷ್ಟೇ ಅಲ್ಲದೇ, ವಿವಿಧ ರಿತಿಯ ಜಂಕ್ ಆಹಾರಗಳನ್ನು ಇದರಿಂದ ತಯಾರಿಸಲಾಗುತ್ತದೆ. ಆದರೆ ಅದಕ್ಕಿಂತ ಹೆಚ್ಚಾಗಿ ಇದು  ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಮೈದಾವನ್ನು ನೀವು ಸುಕ್ಕುಗಳನ್ನು ಕಡಿಮೆ ಮಾಡಲು ಬಳಸಬಹುದು.  ಮೈದಾ ಹಿಟ್ಟು ಚರ್ಮದ ಮೇಲೆ ಹೇಗೆ ಪ್ರಯೋಜನ ನೀಡುತ್ತದೆ ಎಂಬುದು ಇಲ್ಲಿದೆ.
ಮಾಯಿಶ್ಚರೈಸಿಂಗ್ ಫೇಸ್ ಪ್ಯಾಕ್
ಮಳೆಗಾಲದಲ್ಲಿ ಚರ್ಮವನ್ನು ತೇವಗೊಳಿಸಲು, ನೀವು ಮೈದಾ, ಜೇನು ಮತ್ತು ಹಾಲಿನ ಫೇಸ್ ಪ್ಯಾಕ್ ಅನ್ನು  ಬಳಸಬಹುದು. ಇದು ಚರ್ಮದ ಸತ್ತ ಕೋಶಗಳನ್ನು ತೆಗೆದುಹಾಕುತ್ತದೆ. ಜೇನುತುಪ್ಪವು ಚರ್ಮದಲ್ಲಿ  ಸೋಂಕುಗಳ ವಿರೋಧಿ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತದೆ. ಅಲ್ಲದೇ ಹಾಲು ಚರ್ಮವನ್ನು ತೇವಗೊಳಿಸುತ್ತದೆ.
ಫೇಸ್ ಪ್ಯಾಕ್ ಮಾಡುವ ವಿಧಾನ
ಈ ಫೇಸ್ ಪ್ಯಾಕ್ ಮಾಡಲು 2 ಟೇಬಲ್ ಚಮಚ  ಮೈದಾ ಹಿಟ್ಟು, ಒಂದು ಟೇಬಲ್ ಚಮಚ ಜೇನು ಮತ್ತು ಅರ್ಧ ಕಪ್ ಮೊಸರು  ತೆಗೆದುಕೊಳ್ಳಿ. ಈ ಎಲ್ಲಾ ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ,  ಪೇಸ್ಟ್  ತಯಾರಿಸಿಕೊಳ್ಳಿ. ಅದನ್ನು ಮುಖಕ್ಕೆ ಹಚ್ಚಿ. ಈ ಪೇಸ್ಟ್ ಅನ್ನು ಸುಮಾರು 20 ನಿಮಿಷಗಳ ಕಾಲ  ಒಣಗಲು ಬಿಡಿ. ನಂತರ ನೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶ ಪಡೆಯಲು ವಾರಕ್ಕೆ ಎರಡು ಬಾರಿ ಈ ಪೇಸ್ಟ್ ಅನ್ನು ಹಚ್ಚಿ.
ಮೊಡವೆಗಳ ಸಮಸ್ಯೆಗೆ
ಮೊಡವೆ ಸಮಸ್ಯೆಯಿಂದ ಮುಕ್ತಿ ಪಡೆಯಲು, ಅರಿಶಿನ ಮತ್ತು ಮೈದಾ ಫೇಸ್ ಪ್ಯಾಕ್  ಬಳಕೆ ಮಾಡಿ. ಅರಿಶಿನದಲ್ಲಿ ವಿಟಮಿನ್ ಸಿ, ಕ್ಯಾಲ್ಸಿಯಂ, ಪೊಟ್ಯಾಶಿಯಂ, ವಿಟಮಿನ್ ಎ ಮತ್ತು ಸತು ಇರುತ್ತದೆ.
ಫೇಸ್ ಪ್ಯಾಕ್ ಮಾಡುವ ವಿಧಾನ
ನೀವು 2 ಚಮಚ ಮೈದಾ ಹಿಟ್ಟು, ಒಂದು ಚಮಚ ಆಲಿವ್ ಎಣ್ಣೆಯನ್ನು ತೆಗೆದುಕೊಳ್ಳಬೇಕು. ಈ ಎರಡು ವಸ್ತುಗಳನ್ನು ಬೆರೆಸಿ ಪೇಸ್ಟ್ ಮಾಡಿ ಮತ್ತು ಅದನ್ನು ಮುಖಕ್ಕೆ ಹಚ್ಚಿ. ಪೇಸ್ಟ್ ಚೆನ್ನಾಗಿ ಒಣಗಿದಾಗ, ತಣ್ಣೀರಿನಿಂದ ತೊಳೆಯಿರಿ.
ಹೊಳೆಯುವ ಚರ್ಮಕ್ಕೆ
ಹೊಳೆಯುವ ಚರ್ಮವನ್ನು ಪಡೆಯಲು ಮೈದಾ ಮತ್ತು ನಿಂಬೆಹಣ್ಣಿನ ಪೇಸ್ಟ್  ಬೆಸ್ಟ್. ಇದನ್ನು ನಿಯಮಿತವಾಗಿ ಬಳಕೆ ಮಾಡುವುದರಿಂದ ಉತ್ತಮ ಫಲಿತಾಂಶ ನೀಡುತ್ತದೆ. ಈ ಪ್ಯಾಕ್ ಅನ್ನು ವಾರಕ್ಕೆ 2 ಬಾರಿ ಹಚ್ಚುವುದು ಉತ್ತಮ.
ಫೇಸ್ ಪ್ಯಾಕ್ ಮಾಡುವ ವಿಧಾನ
2 ಟೀ ಚಮಚ ನಿಂಬೆ ರಸ ಮತ್ತು ಸ್ವಲ್ಪ ಅರಿಶಿನವನ್ನು 3 ಚಮಚ ತೆಗೆದುಕೊಂಡು ಅದಕ್ಕೆ ಮೈದಾ ಹಿಟ್ಟನ್ನು ಬೆರೆಸಿ, ಸರಿಯಾಗಿ ಮಿಶ್ರಣ ಮಾಡಿ, ಪೇಸ್ಟ್ ಮಾಡಿಕೊಳ್ಳಿ.  ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ನಂತರ ನೀರಿನಿಂದ ತೊಳೆಯಿರಿ. ನಿಂಬೆ ಚರ್ಮದಲ್ಲಿ ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಚರ್ಮವನ್ನು ಸ್ವಚ್ಛಗೊಳಿಸುತ್ತದೆ ಮತ್ತು ಮುಖದ ಹೊಳಪನ್ನು ಮರಳಿ ತರಲು ಸಹಾಯ ಮಾಡುತ್ತದೆ.
ಡಿ ಟ್ಯಾನಿಂಗ್ ಫೇಸ್ ಪ್ಯಾಕ್
ಹೆಚ್ಚಾಗಿ ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ ಟ್ಯಾನಿಂಗ್ ಸಮಸ್ಯೆ  ಉಂಟಾಗುವುದು ಸಾಮಾನ್ಯ. ಈ ಸಮಸ್ಯೆಯನ್ನು ಹೋಗಲಾಡಿಸಲು, ಮೈದಾ ಹಿಟ್ಟನ್ನು ಬಳಸಬಹುದು.
ಫೇಸ್ ಪ್ಯಾಕ್ ಮಾಡುವ ವಿಧಾನ
2 ಟೀಚಮಚ ಮೊಸರು ಮತ್ತು ಒಂದು ಚಮಚ  ಮೈದಾ ಹಿಟ್ಟನ್ನು ತೆಗೆದುಕೊಳ್ಳಿ. ಈ ಎರಡು ವಸ್ತುಗಳನ್ನು ಚೆನ್ನಾಗಿ ಮಿಶ್ರಣ  ಮಾಡಿ ಪೇಸ್ಟ್ ಮಾಡಿ. ಅದನ್ನು  ಮುಖಕ್ಕೆ ಹಚ್ಚಿ ಸುಮಾರು 20 ನಿಮಿಷಗಳ ಕಾಲ ಬಿಟ್ಟು ನಂತರ ನೀರಿನಿಂದ ತೊಳೆಯಿರಿ.


Share this Story:

Follow Webdunia kannada

ಮುಂದಿನ ಸುದ್ದಿ

ತೂಕ ಇಳಿಸುವುದರ ಜೊತೆಗೆ ಮೂಳೆಗಳನ್ನು ಬಲಪಡಿಸುತ್ತದೆ 'ರಾಗಿ'