ತುಟಿಗಳ ಆರೈಕೆಗೆ ತೆಂಗಿನೆಣ್ಣೆಯಿಂದ ಲಿಪ್ ಬಾಮ್ ತಯಾರಿಸಿವುದು ಹೇಗೆ ಗೊತ್ತಾ?

ಭಾನುವಾರ, 21 ಜುಲೈ 2019 (09:20 IST)
ಬೆಂಗಳೂರು : ದೇಹ ತೇವಾಂಶ ಕಳೆದುಕೊಂಡಾಗ ದೇಹದ ಚರ್ಮ ಮಾತ್ರವಲ್ಲ ತುಟಿಗಳು ಕೂಡ ಒಡೆದು ರಕ್ತ ಬರುತ್ತದೆ. ಇದಕ್ಕೆ ಮಾರುಕಟ್ಟೆಯಲ್ಲಿ ಸಿಗುವ ಲಿಪ್ ಬಾಮ್ ಗಳನ್ನು ಬಳಸಿ ತುಟಿಗಳನ್ನು ಹಾಳುಮಾಡಿಕೊಳ್ಳುವ ಬದಲು ಮನೆಯಲ್ಲಿಯೇ ಲಿಪ್ ಬಾಮ್ ತಯಾರಿಸಿ ಬಳಸಿ. ಇದನ್ನು ತಯಾರಿಸುವ ವಿಧಾನ ಇಲ್ಲಿದೆ ನೋಡಿ.
ತೆಂಗಿನೆಣ್ಣೆ ಹಾಗೂ ಆಲಿವ‍್ ಆಯಿಲ್ ತುಟಿಯ ತೇವಾಂಶವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇದರಿಂದ ತುಟಿಯು ಒಡೆಯುವ ಸಮಸ್ಯೆ ದೂರವಾಗುತ್ತದೆ.


1 ಟೀ ಚಮಚ ತೆಂಗಿನ ಎಣ್ಣೆ, 1 ಚಮಚ ಆಲಿವ್ ಆಯಿಲ್ ಹಾಗೂ 1 ಚಮಚ ಕಾರ್ನಾಬಾ ಮೇಣವನ್ನು ಕರಗಿಸಿ ಬಳಿಕ ಮೂರನ್ನು ಮಿಕ್ಸ್ ಮಾಡಿ ಕಂಟೇನರ್ ನಲ್ಲಿ ಹಾಕಿ  ಫ್ರಿಜ್ನಲ್ಲಿ ಇಡಿ. ನಿಮಗೆ ಬೇಕಾದಾಗ ಅದನ್ನು ತುಟಿಗೆ ಹಚ್ಚಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮೂಡ್ ಬಂದಾಗ ಶುರುಹಚ್ಚಿಕೊಳ್ಳಿ