Publish Date: Sun, 14 Jan 2018 (06:46 IST)
Updated Date: Sun, 14 Jan 2018 (06:51 IST)
ಬೆಂಗಳೂರು : ಕೆಲವರ ಪಾದಗಳು ನೋಡಲು ತುಂಬಾ ಕಪ್ಪಾಗಿಯೂ, ಅಸಹ್ಯವಾಗಿಯೂ ಇರುತ್ತದೆ. ಅಷ್ಟೇ ಅಲ್ಲದೆ ಉಗುರಿನಲ್ಲಿ ಕೊಳಕು ಕೂಡ ತುಂಬಿರುತ್ತದೆ. ಇದನ್ನು ಮಾಮೂಲಾಗಿ ಸ್ವಚ್ಚ ಮಾಡಿದರೆ ಅದು ಶುಭ್ರವಾಗುವುದಿಲ್ಲ. ಅದಕ್ಕಾಗಿ ನಾವು ಪ್ರತಿಬಾರಿ ಪಾರ್ಲರ್ ಗೆ ಹೋಗೋಕೆ ಆಗಲ್ಲ. ಅದಕ್ಕಾಗಿ ನಾವು ಮನೆಯಲ್ಲೇ ನಮ್ಮ ಪಾದಗಳನ್ನು ಸುಂದರವಾಗಿಟ್ಟುಕೊಳ್ಳಬಹುದು.
ಮೊದಲಿಗೆ ಉಗುರುಗಳನ್ನುಕಟ್ ಮಾಡಿ ನೈಲ್ ಪಾಲಿಶ್ ಗಳನ್ನು ತೆಗೆದುಕೊಂಡು ಉಗುರು ಬೆಚ್ಚಗಿನ ನೀರಿನಲ್ಲಿ 2 ಚಮಚ ನಿಂಬೆರಸ, 2 ಚಮಚ ಅಡುಗೆ ಸೋಡಾ, ಸ್ವಲ್ಪ ಉಪ್ಪು, 1 ಚಮಚ ನೀವು ಉಪಯೋಗಿಸುವ ಶಾಂಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅದರಲ್ಲಿ ಪಾದಗಳನ್ನು ಇಟ್ಟು 10 ನಿಮಿಷದ ಬಳಿಕ ಸ್ವಲ್ಪ ಶಾಂಪುವನ್ನು ತೆಗೆದುಕೊಂಡು ಪಾದಗಳನ್ನು ಹಾಗು ಉಗುರುಗಳನ್ನು ಚೆನ್ನಾಗಿ ಉಜ್ಜಬೇಕು. ನಂತರ ಸ್ವಚ್ಚ ಮಾಡಿ ಒಂದು ಕಾಟನ್ ಬಟ್ಟೆಯಿಂದ ಒರೆಸಿಕೊಳ್ಳಿ . ನಂತರ 4 ಚಮಚ ಮಲ್ತಾನ್ ಮಿಟ್ಟಿ , 2 ಚಮಚ ನಿಂಬೆರಸ, 2 ಚಮಚ ಆಲೊವೆರಾ ಜೆಲ್ ಹಾಗು ಸ್ವಲ್ಪ ರೋಸ್ ವಾಟರ್ ಹಾಕಿ ಪೇಸ್ಟ್ ಮಾಡಿ ಪಾದಗಳಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಬೇಕು. 10-15 ನಿಮಿಷದ ನಂತರ ತೊಳೆಯಿರಿ. ನಂತರ ಯಾವುದಾದರೂ ಮೊಶ್ಚರೈಸೆಶನ್ ಕ್ರೀಂ ನ್ನು ಅಥವಾ ಕೊಬ್ಬರಿ ಎಣ್ಣೆಯನ್ನು ಹಚ್ಚಿ. ಇದನ್ನು ವಾರದಲ್ಲಿ 2 ಬಾರಿ ಮಾಡುವುದರಿಂದ ಪಾದಗಳು ಬಿಳಿಯಾಗಿ ಅಂದವಾಗಿಯೂ ಇರುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ