Select Your Language

Notifications

webdunia
webdunia
webdunia
webdunia

ಮಹಿಳೆಯರೇ ಪೀರಿಯಡ್ಸ್ ಸಮಯದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ!

ಮಹಿಳೆಯರೇ ಪೀರಿಯಡ್ಸ್ ಸಮಯದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ!
ಬೆಂಗಳೂರು , ಭಾನುವಾರ, 14 ಜನವರಿ 2018 (06:33 IST)
ಬೆಂಗಳೂರು : ಎಲ್ಲರೂ ಹೆಣ್ಣಿನ ಸೌಂದರ್ಯ ಕಂಡು ಸಂತೋಷ ಪಡುತ್ತಾರೆ. ಆದರೆ ಹೆಣ್ಣು ತನ್ನ ಮೇಲೆ ತಾನು ದ್ವೇಷಿಸುವ ವಿಚಾರ ಒಂದಿದೆ. ಅದೇನೆಂದರೆ ಅವರಿಗೆ ಪ್ರತಿತಿಂಗಳು ಆಗುವ ಮುಟ್ಟು. ಇದು ಎಲ್ಲಾ ಹೆಣ್ಣುಮಕ್ಕಳಲ್ಲಾಗುವ ಸಾಮಾನ್ಯ ಪ್ರಕ್ರಿಯೆಯಾದರೂ ಆ ವೇಳೆ ಅವರು ಪಡುವ ನೋವು, ಯಾತನೆಗೆ ಯಾಕಾದರೂ ಹೆಣ್ಣಾಗಿ ಹುಟ್ಟಿದೆನೋ ಅಂತ ಅನಿಸುತ್ತದೆ. ಅದನ್ನು ಯಾವೊಬ್ಬ ಮಹಿಳೆವೂ ಇಷ್ಟ ಪಡುವುದಿಲ್ಲ. ಆದರೆ ಅದು ಅನಿವಾರ್ಯ.


ಬಹುತೇಕ ಮಹಿಳೆಯರು ತಾವು ಮಾಡುವ ತಪ್ಪಿನಿಂದಾಗಿ ಪೀರಿಯಡ್ಸ್ ಸಮಯದಲ್ಲಿ ಮತ್ತಷ್ಟು ಸಂಕಷ್ಟಗಳನ್ನು ಅನುಭವಿಸುತ್ತಾರೆ. ಅಂತಹ ತಪ್ಪುಗಳು ಯಾವುದೆಂದರೆ ಋತುಚಕ್ರದ ಸಮಯದಲ್ಲಿ ಅವರು  ಊಟ, ತಿಂಡಿ ತಿನ್ನದೆ ಖಾಲಿಹೊಟ್ಟೆಯಲ್ಲಿರುವುದು ಅವರು ಮಾಡುವ ದೊಡ್ಡ ತಪ್ಪು. ಸರಿಯಾಗಿ ಆಹಾರವನ್ನು ಅವರು ತೆಗೆದುಕೊಳ್ಳದೆ ಇದ್ದರೆ ಮತ್ತಷ್ಟು ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ಅವರು ಆ ಸಮಯದಲ್ಲಿ ಸರಿಯಾಗಿ ಊಟ, ತಿಂಡಿ ಮಾಡಬೇಕು. ಮಹಿಳೆಯರು ತಮ್ಮ ಮುಟ್ಟಿನ ಸಮಯದಲ್ಲಿ ರಕ್ತದ ಬಣ್ಣವನ್ನು ಗಮನಿಸುತ್ತಾ ಇರಬೇಕು. ಒಂದು ವೇಳೆ ಬದಲಾವಣೆ ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಇಲ್ಲವಾದಲ್ಲಿ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ.


ಪೀರಿಯಡ್ಸ್ ಸಮಯದಲ್ಲಿ ಮಹಿಳೆಯರು ಧರಿಸಿರುವ ಪ್ಯಾಡ್ ಗಳನ್ನು ಆಗಾಗ ಬದಲಾಯಿಸುತ್ತಾ ಇರಬೇಕು. ಅದನ್ನು ತುಂಬಾ ಸಮಯದವರೆಗೆ ಇಟ್ಟುಕೊಳ್ಳಬಾರದು. ಇಲ್ಲವಾದಲ್ಲಿ ಅದು ಕಿರಿಕಿರಿ ಉಂಟುಮಾಡುವುದರ ಜೊತೆಗೆ ಇನ್ ಫೆಕ್ಷನ್ ಆಗೋದು ಖಂಡಿತ. ಪ್ರತಿತಿಂಗಳು ಮುಟ್ಟಿನ ದಿನವನ್ನು ನೆನಪಲ್ಲಿಟ್ಟುಕೊಂಡಿರಬೇಕು. ಅಗತ್ಯಕ್ಕಿಂತ ಹೆಚ್ಚು ವಿಶ್ರಾಂತಿ ತೆಗೆದುಕೊಳ್ಳಬಾರದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Share this Story:

Follow Webdunia kannada

ಮುಂದಿನ ಸುದ್ದಿ

ಕಿವಿಯಲ್ಲಿರುವ ಮಲೀನಗಳನ್ನು ತೊಲಗಿಸಲು ಸುಲಭ ಉಪಾಯ ಇಲ್ಲಿದೆ