Webdunia - Bharat's app for daily news and videos

Install App

ಬಜ್ಜಿ ಮಾಡಲು ಬಯಸುವ ಕಡಲೆ ಹಿಟ್ಟಿನಿಂದ ಸೌಂದರ್ಯಕ್ಕೆ ಹಲವು ಪ್ರಯೋಜನ

Sampriya
ಶುಕ್ರವಾರ, 31 ಜನವರಿ 2025 (17:05 IST)
Photo Courtesy X
ಬಜ್ಜಿ ಮಾಡಲು ಬಯಸುವ ಕಡಲೆ ಹಿಟ್ಟನ್ನು ಸೌಂದರ್ಯ ವರ್ಧಕವಾಗಿ ಬಳಸಬಹುದು. ಕಡಲೆಹಿಟ್ಟು ಅಡುಗೆಗೆ ಮಾತ್ರವಲ್ಲದೆ, ಸೌಂದರ್ಯ ವೃದ್ಧಿಸಲೂ ಕೂಡಾ ಉಪಯೋಗಿಸಲಾಗುತ್ತದೆ.

ಹಿಂದಿನ ಕಾಲದಿಂದಲೂ ಕಡಲೆ ಹಿಟ್ಟನ್ನು ಸೌಂಧರ್ಯವರ್ಧಕವಾಗಿ ಬಳಸುತ್ತಿದ್ದರು.  ಹೆಚ್ಚಿನವರು ಸೋಪ್ ಬದಲಾಗಿ ಕಡಲೆಹಿಟ್ಟನ್ನು ಬಳಸುತ್ತಿದ್ದರು. ಈಗಿನ ಕೆಮಿಕಲ್ ಸೋಪ್‌ಗಳ ಬದಲಾಗಿ ಕಡಲೆ ಹಿಟ್ಟನ್ನು ಬಳಸುವುದರಿಂದ ಚರ್ಮದ ಕಾಂತಿ ಮತ್ತಷ್ಟು ಹೆಚ್ಚಿಸುತ್ತದೆ.

ಚರ್ಮದಲ್ಲಿ ಉಂಟಾಗುವ ಅಲರ್ಜಿ, ತುರಿಕೆ, ಉರಿಗಳಿಂದ ದೂರವಿಡಲು ಕಡಲೆ ಹಿಟ್ಟು ಉತ್ತಮ ಪರಿಹಾರ. ಕಡಲೆ ಹಿಟ್ಟನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮದ ಕಾಂತಿ ಹೆಚ್ಚಿಸುತ್ತದೆ. ಚರ್ಮ ಸುಕ್ಕುಗಟ್ಟದಂತೆ ತಡೆದು, ಯಾವುದೇ ರೀತಿಯ ಚರ್ಮದ ಕಾಯಿಲೆ ಬರದಂತೆ ತಡೆಯುತ್ತದೆ.

ಸತತವಾಗಿ ಕಡ್ಲೆ ಹಿಟ್ಟಿನಿಂದ ಮುಖ ತೊಳೆಯುವುದರಿಂದ ಚರ್ಮ ನಯವಾಗಿ ಕಾಣಿಸುತ್ತದೆ. ಕಡಲೆ ಹಿಟ್ಟಿನಿಂದ ಮುಖದ ಕಲೆ ದೂರವಾಗುತ್ತದೆ. ಬಿಸಿಲಿನಿಂದ ತ್ವಚೆ ಕಪ್ಪಗಾಗಿದ್ದರೆ ಅದನ್ನು ಹೋಗಲಾಡಿಸುತ್ತದೆ.

ಯಾವುದೇ ಅಡ್ಡಪರಿಣಾಮವಿಲ್ಲದೇ ಕಡಲೆ ಹಿಟ್ಟು ಉಪಯೋಗಿಸಿ ಸೌಂದರ್ಯ ವೃದ್ಧಿಸಿಕೊಳ್ಳಬಹುದು. ಕಡಲೆಹಿಟ್ಟು, ಅರಿಶಿನ, ಹಾಲನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿರಿ. 15 ನಿಮಿಷ ಬಿಟ್ಟು ತನ್ನೀರಿನಿಂದ ಮುಖ ತೊಳೆಯಿರಿ. ಹೀಗೇ ನಿರಂತರ ಮಾಡುವುದರಿಂದ ಚರ್ಮದ ಕಾಂತಿ ಹೊಳೆಯುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಸಾಕುಪ್ರಾಣಿಗಳನ್ನು ಇಟ್ಟುಕೊಳ್ಳುವ ಮೊದಲು ನೆನಪಿನಲ್ಲಿಟ್ಟುಕೊಳ್ಳಬೇಕಾದ 5 ವಿಷಯಗಳು

Health Tips: ಚಳಿಗಾಲದಲ್ಲಿ ಜಾಗಿಂಗ್‌ ಮಾಡಿದ್ರೆ ಏನೆಲ್ಲ ಪ್ರಯೋಜನ ಗೊತ್ತಾ

ನಾನ್‌ವೆಜ್ ತಿನ್ನದವರು ಈ ರೀತಿ ಮಶ್ರೂಮ್ ಕಬಾಬ್ ಮಾಡಿ, ಸಖತ್ ಆಗಿ ಇರುತ್ತೆ

ಚಳಿಗಾಲದಲ್ಲಿ ಕಾಡುವ ಕೀಲು ನೋವನ್ನು ಹೀಗೇ ದೂರ ಮಾಡಬಹುದು

ಮಹಾಕುಂಭ ಮೇಳ 2025ರಲ್ಲಿ ಧ್ಯಾನ ಮಾಡುವವರಿಗೆ 5 ಸಲಹೆಗಳು

ಮುಂದಿನ ಸುದ್ದಿ
Show comments