Select Your Language

Notifications

webdunia
webdunia
webdunia
webdunia

ಬೆವರಿನ ಕಿರಿ ಕಿರಿಗೆ ಮುಕ್ತಿ ಕೊಡಬೇಕಾದರೆ ಹೀಗೆ ಮಾಡಿ!

ಬೆವರು
ಬೆಂಗಳೂರು: ಇನ್ನೇನು ಚಳಿಗಾಲ ಮುಗಿದು ಬೇಸಿಗೆ ಬರುತ್ತಿದೆ. ಬೇಸಿಗೆ ಬಂದೊಡನೆ ಬೆವರಿನದ್ದೇ ಕಿರಿ ಕಿರಿ. ಈ ರೀತಿ ಅತಿಯಾಗಿ ಬೆವರು ಸುರಿದು ಅಸಹ್ಯವಾಗುತ್ತಿದ್ದರೆ ಕೆಲವು ಮನೆ ಮದ್ದು ಮಾಡಿ ನೋಡಬಹುದು.
 

ಬೇಕಿಂಗ್ ಸೋಡಾ
ಬೇಕಿಂಗ್ ಸೋಡಾವನ್ನು ಕಂಕುಳ ಕೆಳಗೆ ಹಾಗೂ ಅತೀ ಹೆಚ್ಚು ಬೆವರು ಸುರಿಯುವ ದೇಹದ ಭಾಗಗಳಿಗೆ ರಾತ್ರಿ ಮಲಗುವ ಮುನ್ನ ಹಚ್ಚಿಕೊಳ್ಳಿ. ಬೆಳಿಗ್ಗೆ ಯಥಾವತ್ತು ಸ್ನಾನ ಮಾಡಿಕೊಳ್ಳಿ. ಇದರಿಂದ ಆ ಭಾಗದಲ್ಲಿ ಬೆವರು ಹರಿದು ಕೆಟ್ಟ ವಾಸನೆ ಬರುವುದು ತಪ್ಪುತ್ತದೆ.

ಕೊಬ್ಬರಿ ಎಣ್ಣೆ
ಇದು ಸುಲಭವಾಗಿ ಕೈಗೆಟುಕುವ ಸಾಧನ. ಕೊಬ್ಬರಿ ಎಣ್ಣೆಯಲ್ಲಿರುವ ಲಾರಿಕ್ ಏಸಿಡ್ ದೇಹದಲ್ಲಿ ಬೆವರಿನಿಂದ ಉಂಟಾಗುವ ಕೆಟ್ಟ ವಾಸನೆ ಹೋಗಲಾಡಿಸುತ್ತದೆ.

ಬ್ಲ್ಯಾಕ್ ಟೀ
ಹೆಚ್ಚು ಬೆವರುವ ದೇಹದ ಭಾಗಕ್ಕೆ ಬ್ಲ್ಯಾಕ್ ಟೀಯನ್ನು ಹತ್ತಿಯಲ್ಲಿ ಅದ್ದಿಕೊಂಡು ಹಚ್ಚಿಕೊಳ್ಳಿ.

ಅಲ್ಯುವಿರಾ
ಅಲ್ಯುವೀರಾ ದೇಹಕ್ಕೆ ತಂಪು. ಬೆವರುವ ಭಾಗಕ್ಕೆ ಅಲ್ಯುವೀರಾ ಜೆಲ್ ಹಚ್ಚಿಕೊಂಡರೆ ಬೆವರು ಕಡಿಮೆಯಾಗುವುದಲ್ಲದೆ, ದೇಹವನ್ನೂ ಕೂಲ್ ಆಗಿರಿಸುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಪರೂಪಕ್ಕೆ ಸೆಕ್ಸ್ ಮಾಡಿದರೆ ಆಗುವ ಅಪಾಯವೇನು ಗೊತ್ತಾ?